Menu

ನಟ ದರ್ಶನ್‌ಗೆ ಬೆನ್ನು ನೋವು ಇಲ್ಲ, ಫಿಸಿಯೋಥೆರಪಿ ಅಗತ್ಯವಿಲ್ಲ: ವೈದ್ಯರ ವರದಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತಗೊಳಿಸಲಾಗಿದೆ. ಬೆನ್ನು ನೋವಿಗೆ ಸಂಬಂಧಿಸಿದಂತೆ ಸಿ.ವಿ.ರಾಮನ್ ಆಸ್ಪತ್ರೆ ವೈದ್ಯರ ತಂಡ ಜೈಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ದರ್ಶನ್‌ಗೆ ಫಿಸಿಯೋಥೆರಪಿಯ ಅವಶ್ಯಕತೆ ಇಲ್ಲ ಎಂದು ಹೇಳಿದೆ.

ನ್ಯಾಯಾಲಯದ ವಿಚಾರಣೆ ವೇಳೆ, ತಮಗೆ ತೀವ್ರ ಬೆನ್ನು ನೋವಿದ್ದು ನಿಲ್ಲಲು ಕೂರಲು ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದರು. ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನ್ಯಾಯಾಲಯ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.
ನ್ಯಾಯಾಲಯದ ಆದೇಶದಂತೆ ನಾಲ್ವರು ವೈದ್ಯರ ತಂಡ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ಆರಂಭಿಸಿದ್ದರು. ವಾರಕ್ಕೆ ಎರಡು ಮೂರು ಬಾರಿ ಫಿಸಿಯೋಥೆರಪಿ ಚಿಕಿತ್ಸೆ ನೀಡಲು ವೈದ್ಯರು ಜೈಲಿಗೆ ಭೇಟಿ ನೀಡುತ್ತಿದ್ದರು. ಚಿಕಿತ್ಸೆಯ ಮೊದಲ ವಾರದಲ್ಲೇ ದರ್ಶನ್ ಅವರ ಬೆನ್ನುನೋವಿನ ನೆಪ ಬಯಲಾಗಿದೆ. ದರ್ಶನ್ ಅವರಲ್ಲಿ ಬೆನ್ನುನೋವಿನ ಯಾವುದೇ ಲಕ್ಷಣಗಳಿಲ್ಲ ಎಂದು ಖಚಿತಪಡಿಸಿಕೊಂಡ ವೈದ್ಯರು, ತಕ್ಷಣ ಫಿಸಿಯೋಥೆರಪಿ ಚಿಕಿತ್ಸೆ ನಿಲ್ಲಿಸಿದ್ದಾರೆ.

ಕಲ್ಟ್‌ ಸಿನಿಮಾ ರಿಲೀಸ್‌ಗೆ ದರ್ಶನ್‌ ಹೊರಗಿರುತ್ತಾರೆಂದ ನಟ ಜೈದ್‌ ಖಾನ್‌
ಕಲ್ಟ್‌ ಸಿನಿಮಾ ರಿಲೀಸ್ ಆಗುವಾಗ ನಟ ದರ್ಶನ್ ಜೈಲಿಂದ ಹೊರಗೆ ಬರಲಿದ್ದಾರೆ ಎಂಬ ನಿರೀಕ್ಷೆ ಇದೆ ಎಂದು ನಟ ಜೈದ್ ಖಾನ್ ಹೇಳಿದ್ದಾರೆ.ನಟ ದರ್ಶನ್ ಅಣ್ಣ ಆದಷ್ಟು ಬೇಗ ಜೈಲಿಂದ ಹೊರಗೆ ಬರಲಿ ಎಂದು ನಾನು ಪ್ರತಿದಿನ ಪ್ರಾರ್ಥಿಸುತ್ತಿರುವೆ, ದರ್ಶನ್‌ರನ್ನು ನಾನು ಬಾಯಿ ಮಾತಿನಿಂದ ಅಣ್ಣ ಎಂದು ಕರೆಯುವುದಿಲ್ಲ, ನಿಜ ಜೀವನದಲ್ಲಿ ನನಗೆ ಆ ಜಾಗ ದರ್ಶನ್ ತುಂಬಿ ಕರ್ತವ್ಯ ನಿರ್ವಹಿಸಿದರು ಎಂದಿದ್ದಾರೆ.

ನನ್ನ ನನ್ನ ಮೊದಲ ಸಿನಿಮಾಕ್ಕೆ ಅಣ್ಣನಂತೆ ದರ್ಶನ್ ನಿಂತಿದ್ದರು. ಕಲ್ಟ್‌ ಸಿನಿಮಾ ರಿಲೀಸ್ ಒಳಗೆ ದರ್ಶನ್ ಹೊರಗೆ ಬರುತ್ತಾರೆ ಎಂಬ ನಿರೀಕ್ಷೆ ಇದೆ. ಜೈಲಿನಿಂದ ಬರಲಿಲ್ಲ ಎಂದರೆ ನಾನು ಅನುಮತಿ ಪಡೆದುಕೊಂಡು ಜೈಲಿಗೆ ಹೋಗಿ ಆಶೀರ್ವಾದ ಪಡೆಯುತ್ತೇನೆ ಎಂದರು.

Related Posts

Leave a Reply

Your email address will not be published. Required fields are marked *