ಆರಂಭಿಕ ಕ್ವಿಂಟನ್ ಡಿಕಾಕ್ ಶತಕದ ಹೊರತಾಗಿಯೂ ಭಾರತದ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ 270 ರನ್ ಗೆ ಆಲೌಟಾಗಿದೆ.
ವಿಶಾಖಪಟ್ಟಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 47.5 ಓವರ್ ಗಳಲ್ಲಿ 270 ರನ್ ಗೆ ಆಲೌಟ್ ಮಾಡಿತು. ಭಾರತ ಸತತ 21 ಪಂದ್ಯಗಳಲ್ಲಿ ಟಾಸ್ ಸೋತ ನಂತರ ಇದೇ ಮೊದಲ ಬಾರಿಗೆ ಟಾಸ್ ಗೆದ್ದುಕೊಂಡಿದ್ದು ವಿಶೇಷವಾಗಿತ್ತು.
ದಕ್ಷಿಣ ಆಫ್ರಿಕಾ ತಂಡ ಖಾತೆ ತೆರೆಯುತ್ತಿದ್ದಂತೆ ರಿಯಾನ್ ರಿಕಲ್ಟನ್ (0) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಯಿತು. ಆದರೆ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ತೆಂಬಾ ಭವುಮಾ ಎರಡನೇ ವಿಕೆಟ್ ಗೆ 113 ರನ್ ಜೊತೆಯಾಟದಿಂದ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸುವ ಸೂಚನೆ ನೀಡಿದರು.
ಆದರೆ ಬುವುಮಾ 67 ಎಸೆತಗಳಲ್ಲಿ 5 ಬೌಂಡರಿ ಒಳಗೊಂಡ 48 ರನ್ ಗಳಿಸಿದ್ದಾಗ ಜಡೇಜಾ ಎಸೆತದಲ್ಲಿ ಔಟಾಗುತ್ತಿದ್ದಂತೆ ತಂಡ ನಾಯಕೀಯ ಕುಸಿತಕ್ಕೆ ಒಳಗಾಯಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಏಕಾಂಗಿ ಹೋರಾಟ ನಡೆಸಿದ ಕ್ವಿಂಟನ್ ಡಿಕ್ 89 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಒಳಗೊಂಡ 106 ರನ್ ಸಿಡಿಸಿ ಶತಕದ ಗೌರವಕ್ಕೆ ಪಾತ್ರರಾದರು.
ಈ ಹಂತದಲ್ಲಿ ಮಾರಕ ದಾಳಿ ಸಂಘಟಿಸಿದ ಪ್ರಸಿದ್ಧ ಕೃಷ್ಣ ಮತ್ತು ಕುಲದೀಪ್ ಯಾದವ್ ಬ್ಯಾಟ್ಸ್ ಮನ್ ಗಳು ಬಾಲ ಬಿಚ್ಚದಂತೆ ನೋಡಿಕೊಂಡರು. ಭಾರತದ ಪರ ಪ್ರಸಿದ್ಧ ಕೃಷ್ಣ ಮತ್ತು ಕುಲದೀಪ್ ಯಾದವ್ ತಲಾ 4 ವಿಕೆಟ್ ಪಡೆದು ಗಮನ ಸೆಳೆದರೆ, ರವೀಂದ್ರ ಜಡೇಜಾ ಮತ್ತು ಅರ್ಷದೀಪ್ ತಲಾ 1 ವಿಕೆಟ್ ಗಳಿಸಿದರು.


