Wednesday, January 21, 2026
Menu

ಡಿ.8ರಿಂದ ಜೀ ಕನ್ನಡದಲ್ಲಿ ‘ಆದಿ-ಲಕ್ಷ್ಮಿ’ಯ ಪುರಾಣ ಹೊಸ ಧಾರವಾಹಿ!

aadilaxmi purana serial

ಸದಾ ಹೊಸತನದೊಂದಿಗೆ ವೀಕ್ಷಕರನ್ನು ಮನರಂಜಿಸಿ ನಂ.1 ಸ್ಥಾನ ಪಡೆದಿರುವ ಜೀ ಕನ್ನಡ 2025 ನ್ನು ವರ್ಷದ ಕೊನೆಗೆ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ನೀಡುತ್ತಿದೆ. ವಿಭಿನ್ನ ದಿಕ್ಕಿನಲ್ಲಿ ಸಾಗುವ ಇಬ್ಬರ ಪ್ರಯಾಣ ‘ಆದಿ ಲಕ್ಷ್ಮಿ ಪುರಾಣ’ ಇದೇ ಡಿಸೆಂಬರ್ 8 ರಿಂದ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಪ್ರಸಾರ ಆಗಲಿದೆ.

ಶ್ರೀ ಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ಬರುತ್ತಿರುವ ಈ ಧಾರಾವಾಹಿಯನ್ನು ಜನಾರ್ಧನ ಪಿ ಮತ್ತು ಸಂತೋಷ್ ಕೋಟಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸುಭಾಷ್ ಅರ್ವ ಅವರು ಈ ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮದುವೆಯ ಬಂಧ ಬೆಸೆಯೋ ಪ್ರೀತಿಯ ಪಯಣ ವೀಕ್ಷಕರನ್ನು ತನ್ನತ್ತ ಸೆಳೆಯಲಿದೆ.

ಕಿರುತೆರೆಯಲ್ಲಿ ಸದ್ದು ಮಾಡಲು ಸಿದ್ದವಾಗಿರುವ ‘ಆದಿಲಕ್ಷ್ಮೀ ಪುರಾಣ’ ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾದ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಷಿ, ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಪ್ರೇಕ್ಷಕರ ಮುಂದಿಡಲಿದೆ. ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟ ಲಕ್ಷ್ಮಿ ಪುನಃ ಆತನ ಜಗತ್ತಿಗೆ ಮರಳಿ ಬರುತ್ತಾಳೆ. ಆದಿಯ ಪ್ರೀತಿ ಪಡೆಯಲು ಪರದಾಡುವ ಲಕ್ಷ್ಮಿ ಆತನ ತಾತ ಧರ್ಮರಾಜ್ ಅವರು ನೀಡುವ ಕಠಿಣ ಸವಾಲುಗಳನ್ನು ಎದುರಿಸುತ್ತಾಳೆ. ಮನೆ, ಕಾಲೇಜು ಇವೆರಡರನ್ನು ಲಕ್ಷ್ಮಿ ಹೇಗೆ ಸರಿದೂಗಿಸಿಕೊಂಡು ಹೋಗುತ್ತಾಳೆ ಎಂಬುದು ಈ ಕಥೆಯ ಮುಖ್ಯ ಸಾರಾಂಶ.

ಈ ಧಾರಾವಾಹಿಯ ಕಥೆಯನ್ನು ಮತ್ತಷ್ಟು ಜೀವಂತಗೊಳಿಸೋದು ಅದ್ಭುತವಾದ ತಾರಾಬಳಗ. ರಜನೀಶ್ ಮತ್ತು ಆಶಾ ಅಯ್ನರ್ ಆದಿ ಮತ್ತು ಲಕ್ಷ್ಮಿ ಪಾತ್ರ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಧಾರಾವಾಹಿಯಲ್ಲಿ ಸಂಜೀವ ಅನ್ನುವ ಒಬ್ಬ ಸಾಧಾರಣ ಹಳ್ಳಿ ಟೀಚರ್ ಮತ್ತು ಅಮೃತ, ಸಿಟಿ ಹುಡುಗಿ PHD ಆಕಾಂಕ್ಷಿ, ಇವರಿಬ್ಬರು ಮದುವೆ ಆದ್ಮೇಲೆ ಇವರಿಬ್ಬರ ಬದುಕು ಹೇಗೆ ಬದಲಾಗುತ್ತೆ ಅನ್ನೋ ಕಥೆಯು ಕಾಣಸಿಗಲಿದೆ.  ಇನ್ನು ಈ ಧಾರಾವಾಹಿಯಲ್ಲಿ ಮಂಜುನಾಥ ಹೆಗ್ಡೆ, ಅಶೋಕ್ ಶರ್ಮಾ, ರಕ್ಷಿತಾ, ಸುಷ್ಮಾ ನಾಣಯ್ಯ, ಮಾಲತಿ ಸರ್ದೇಶಪಾಂಡೆ, ಕೈಲಾಶ್, ಜ್ಯೋತಿ, ಸವಿತಾ ಕೃಷ್ಣಮೂರ್ತಿ ಮತ್ತು ಭಾಗ್ಯಶ್ರೀ ರಾವ್ ಅಂತಹ ಹೆಸರಾಂತ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದಾರೆ. ಒಟ್ಟಿನಲ್ಲಿ ಅದ್ಬುತ ನಟನೆ, ಅತ್ಯುತ್ತಮ ತಾರಾಬಳಗ, ವಿಭಿನ್ನ ಕಥೆಯೇ ಆದಿಲಕ್ಷ್ಮಿ ಪುರಾಣದ ಪ್ಲಸ್ ಪಾಯಿಂಟ್.

‘ಆದಿಲಕ್ಷ್ಮಿ ಪುರಾಣ’ ಕೇವಲ ಸಾಧಾರಣ ಕಥೆಯಾಗಿರದೆ, ನಿಜ ಜೀವನಕ್ಕೆ ಹತ್ತಿರವಾಗಿದ್ದು ಬಹಳ ವಿಭಿನ್ನವಾಗಿದೆ. ಈ ಧಾರಾವಾಹಿಯ ಕಥೆಯ ನೈಜ್ಯತೆ, ಉತ್ತಮ ತಾರಾಬಳಗ ಮತ್ತು ನಿರ್ದೇಶನ, ಅದ್ಭುತ ಸ್ಥಳಗಳು, ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಸೆಟ್‌ಗಳು  ವೀಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವೀ ಆಗಲಿದೆ.  ಅಷ್ಟೇ ಅಲ್ಲದೇ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುವವರು ಒಂದಾದರೆ ಏನಾಗಲಿದೆ ಎಂಬುದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.

ಇನ್ನು ಇಷ್ಟು ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದ್ದ ಜನಪ್ರಿಯ ಧಾರಾವಾಹಿ ಶ್ರೀ ರಾಘವೇಂದ್ರ ಮಹಾತ್ಮೆ ಈ ವಾರದಿಂದ  ಪ್ರತಿ ಶನಿವಾರ ಮತ್ತು ಭಾನುವಾರ ಸಂಬಜೆ 6 ಗಂಟೆಯಿಂದ 7 ಗಂಟೆಯ ವರೆಗೆ ಪ್ರಸಾರ ಆಗಲಿದೆ.

Related Posts

Leave a Reply

Your email address will not be published. Required fields are marked *