ಅಧಿವೇಶನ ನಂತರ ಸಚಿವ ಸಂಪುಟ ವಿಸ್ತರಣೆ ಆಗಲಿದೆ, ಸಿಎಂ ಡಿಸಿಎಂ ಬಗ್ಗೆ ನನಗೆ ಗೊತ್ತಿಲ್ಲ ಎಂದು ವಿಜಯಾನಂದ ಕಾಶಪ್ಪನವರ ಬಾಗಲಕೋಟೆಯಲ್ಲಿ ಹೇಳಿದ್ದಾರೆ.
ಸಂಪುಟ ಪುನಾರಚನೆ ಆಗುತ್ತದೆ, ಸಿಎಂ ಅವರೇ ಹೇಳಿದ್ದಾರೆ, ವರಿಷ್ಠರು ಅನುಮತಿ ಕೊಟ್ಟಿದ್ದಾರೆ. ನಮ್ಮ ಬೇಡಿಕೆಯನ್ನು ನಮ್ಮ ರಾಜ್ಯದ ಸಿಎಂ, ಡಿಸಿಎಂ ಮುಂದೆ ಇಟ್ಟಿದ್ದೇವೆ. ಅವರು ತೀರ್ಮಾನ ಮಾಡ್ತಾರೆ ಯಾರನ್ನು ಏನು ಮಾಡಿದರೆ ಯೋಗ್ಯ ಅಂತ. ಪಕ್ಷಕ್ಕೆ ಶಕ್ತಿ ತುಂಬುವವರು, ಶಕ್ತಿ ತಂದವರು, ಮುಂದೆ 2028ಕ್ಕೆ ಬೇಕಾಗುತ್ತದೆ ಎಂದು ಹೇಳಿದರು.
ಶಕ್ತಿಯುತವಾದವರು ಎಲ್ಲರೂ ಬೇಕಲ್ಲ, ಆ ನಿಟ್ಟಿನಲ್ಲಿ ನಮ್ಮ ಬೇಡಿಕೆ ಇದೆ, ಅದನ್ನು ಪರಿಗಣಿಸುವ ವಿಶ್ವಾಸ ಕೂಡ ಇದೆ, ಈ ಸಾರಿ ಅವಕಾಶ ಸಿಕ್ಕೇ ಸಿಗುತ್ತದೆ. ಈಗಾಗಲೇ ಸಂಪುಟ ವಿಸ್ತರಣೆ ಮಾಡಬೇಕು ಅಂದುಕೊಂಡಿದ್ದರು. ಈಗ ಅಧಿವೇಶನ ಕರೆದಿರುವುದರಿಂದ ಸಮಸ್ಯೆ ಆಗ್ತದೆ, ಅಧಿವೇಶನ ಆದ ಬಳಿಕ ಆಗುತ್ತದೆ. ಸಿಎಂ ಡಿಸಿಎಂ ಬಗ್ಗೆ ನನಗೆ ಗೊತ್ತಿಲ್ಲ, ಅಷ್ಟು ದೊಡ್ಡವನು ನಾನಲ್ಲ, ನನ್ನ ಮಟ್ಟದಲ್ಲಿ ನಾನು ಮಂತ್ರಿ ಆಗಬೇಕು ಅನ್ನೋದಷ್ಟೇ ಕೇಳುತ್ತೇನೆ ಎಂದಿದ್ದಾರೆ.
ಕುರ್ಚಿ ಫೈಟ್ ಹಿನ್ನೆಲೆ ಒಪ್ಪಂದದ ಕುರಿತಾದ ಡಿಸಿಎಂ ಡಿಕೆ ಶಿವಕುಮಾರ್ ಮಾಡಿರುವ ಹಲವು ಪೋಸ್ಟ್‌ಗಳಿಗೆ ಸಂಬಮಧಿಸಿ ಪ್ರತಿಕ್ರಿಯೆ ನೀಡಿದ ಕಾಶಪ್ಪನವರ್, ನೋಡ್ರಿ 12 ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ್ದಾರೆ.
ನುಡಿದಂತೆ ನಡೆ ಇಲ್ಲದಿದ್ದರೆ ಇದೆ ಜನ್ಮ ಕಡೆ ಅಂತ. ಈ ರೀತಿ ನಡೆಯುವ ಮನಸ್ಥಿತಿ ನಂದು ಅಂತ ಅವರ ಟ್ವಿರ್ಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ಅವರೇನು ಯಾರದ್ದಾದ್ರು ಹೆಸರು ಹಾಕಿದ್ದಾರಾ, ನಡೆದಿಲ್ಲ ಯಾರು ಅಂತ ಹಾಕಿಲ್ಲವಲ್ಲ ಎಂದು ಹೇಳಿದರು.


