Thursday, December 04, 2025
Menu

ಬಳ್ಳಾರಿಯಲ್ಲಿ ಕಂಪ್ಲಿ ಶಾಸಕರ ಆಪ್ತರಿಂದ ಅಕ್ರಮ ಗ್ರಾವೆಲ್‌ ಸಾಗಾಟಕ್ಕೆ ಪೊಲೀಸ್‌ ಬ್ರೇಕ್‌

ಬಳ್ಳಾರಿಯಲ್ಲಿ ಕಂಪ್ಲಿ ಶಾಸಕರ ಆಪ್ತರಿಂದ ನಡೆಯುತ್ತಿದೆ ಎನ್ನಲಾಗಿರುವ ಅಕ್ರಮ  ಗ್ರಾವೆಲ್‌ ಸಾಗಾಟಕ್ಕೆ ಪೊಲೀಸರು ಬ್ರೇಕ್‌ ಹಾಕಿದ್ದಾರೆ. ಅಕ್ರಮ ಅದಿರು, ಅಕ್ರಮ ಮರಳು ಸಾಗಾಟದ ಬಳಿಕ ಬಳ್ಳಾರಿಯಲ್ಲಿ ಗ್ರಾವೆಲ್‌ ಸಾಗಾಟ ದಂಧೆ ಗರಿಗೆದರಿದೆ.

ಬಳ್ಳಾರಿಯ ಮೋಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಪ್ಲಿ ಶಾಸಕರ ಆಪ್ತರು ಎನ್ನಲಾದವರು ಅಕ್ರಮ ಗ್ರಾವಲ್ ಸಾಗಾಟ ದಂಧೆ ಆರಂಭಿಸಿದ್ದು, ಪೊಲೀಸರು ತಡೆ ಹಿಡಿದಿದ್ದಾರೆ. ಆಂಧ್ರದ ಗೂಳ್ಯಂ, ಕರ್ನಾಟಕದ ಬಳ್ಳಾರಿ ತಾಲೂಕಿನ ಮೂಲಕ ಬಸರಕೋಡು ಗ್ರಾಮದ ಮೂಲಕ ಹಡ್ಲಿಗಿ ಗ್ರಾಮಕ್ಕೆ ಗ್ರಾವೆಲ್‌ ಸಾಗಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಅನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.  ಪರ್ಮಿಟ್ ಇಲ್ಲದ ಹಲವು ಲಾರಿಗಳಲ್ಲಿ ಅಕ್ರಮವಾಗಿ ಗ್ರಾವೆಲ್‌ ಸಾಗಾಟ ನಡೆಯುತ್ತಿದ್ದಾಗ ಪೊಲೀಸ್‌ ದಾಳಿ ನಡೆದಿದೆ.

ಗ್ರಾವೆಲ್ ಎಂದರೆ ಚಿಕ್ಕ, ಉದುರುವ, ಕಲ್ಲು ಕಣಗಳು. ಇದು 2mm ಗಿಂತ ದೊಡ್ಡದಾದ ಮತ್ತು 64mm ಗಿಂತ ಚಿಕ್ಕದಾದ ಕಲ್ಲುಗಳನ್ನು ಒಳಗೊಂಡಿರುತ್ತದೆ. ಗ್ರಾವೆಲ್ ಅನ್ನು ರಸ್ತೆಗಳಿಗೆ, ಕಾಂಕ್ರೀಟ್ ಕಟ್ಟಡಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ. ಮರಳು ಮತ್ತು ಇತರ ಒಡೆದ ಕಲ್ಲುಗಳೊಂದಿಗೆ ಬೆರೆಸಿ ಒಳಚರಂಡಿ ವ್ಯವಸ್ಥೆಗಳಿಗಾಗಿ ಮತ್ತು ಇತರ ನಿರ್ಮಾಣ ಕಾರ್ಯಗಳಿಗೆ ‘ಅಗ್ರಿ’ಗೇಟ್’ ಎಂದು ಬಳಸಲಾಗುತ್ತದೆ.

ಅಕ್ರಮ ರಕ್ತಚಂದನ ಮಾರಾಟ ಆರೋಪಿಗಳು ಬಂಧನ

ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 60 ಲಕ್ಷ ಮೌಲ್ಯದ 1150 ಕೆಜಿ ರಕ್ತ ಚಂದನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರಿನ ಹಿಂಬದಿ ಸೀಟ್‌ ತೆಗೆದು ಅದರ ಕೆಳಗೆ ಆರೋಪಿಗಳು ರಕ್ತಚಂದನ ಇಟ್ಟಿದ್ದರು. ತಮಿಳುನಾಡಿಗೆ ಮಾರಾಟ ಮಾಡಲು ಹೋಗುತ್ತಿದ್ದಾಗ ಹುಳಿ ಮಾವು ಪೊಲೀಸರಿಗೆ ಮಾಹಿತಿ ಲಭಿಸಿದೆ.

ಇದರ ಆಧಾರದಲ್ಲಿ ಕಾರಗಳನ್ನು ಅಡ್ಡಗಟ್ಟಿ ಪರಿಶೀಲನೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಿದ್ದಾರೆ. ಆರ್‌ಟಿ ನಗರ ಪೊಲೀಸರು ವರಪ್ರಸಾದ್ ರೆಡ್ಡಿ, ರಾಜ್ ಶೇಖರ್ ಎಂಬವರನ್ನು ಬಂಧಿಸಿದ್ದಾರೆ. ಆರ್.ಟಿ.ನಗರ ಠಾಣಾ ವ್ಯಾಪ್ತಿಯಲ್ಲಿ ಬಂಧಿತರಿಂದ 75 ಲಕ್ಷ ರೂ. ಮೌಲ್ಯದ 739 ಕೆ.ಜಿ ರಕ್ತ ಚಂದನ ವಶ ಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯವರಾದ ಎಂಬಿಎ ಓದಿದ್ದ ರಾಜ್ ಶೇಖರ್, ಇಂಜಿನಿಯರಿಂಗ್ ಓದಿದ್ದ ವರಪ್ರಸಾದ್ ಬೊಲೆರೋ ವಾಹನದಲ್ಲಿ ಸುಂಡಪಲ್ಲಿಯಿಂದ ತಂದು ಅಕ್ರಮವಾಗಿ ಬೆಂಗಳೂರಿಗೆ ತಂದಿದ್ದರು.

Related Posts

Leave a Reply

Your email address will not be published. Required fields are marked *