Thursday, December 04, 2025
Menu

ಮದುವೆಯಾಗಿ ಎರಡೇ ದಿನಕ್ಕೆ ಭದ್ರಾವತಿಯಲ್ಲಿ ವರ ಹೃದಯಾಘಾತಕ್ಕೆ ಬಲಿ

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮದುವೆಯಾಗಿ ಎರಡೇ ದಿನಕ್ಕೆ ವರ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಹನುಮಂತಪುರ ನಿವಾಸಿ ರಮೇಶ್ (30) ಹೃದಯಾಘಾತದಿಂದ ಮೃತಪಟ್ಟವರು.

ಮದುಮಗನಾಗಿ ರಮೇಶ್ ಶಿವಮೊಗ್ಗದ ಗಾಜನೂರು ಬಂಡ್ರಿಯಲ್ಲಿರುವ ವಧುವಿನ ಮನೆಗೆ ಹೋದ ಸಂದರ್ಭದಲ್ಲಿ ಏಕಾಏಕಿ ಹೃದಯಾಘಾತಗೊಂಡಿದೆ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಅವರು
ಅಸು ನೀಗಿದ್ದಾರೆ.

ಪ್ರೀತಿಸಿ ಮದುವೆಯಾಗಿ ಮೂರು ತಿಂಗಳಿಗೆ ಯುವತಿ ಆತ್ಮಹತ್ಯೆ

ಪ್ರೀತಿಸಿ ಮದುವೆಯಾಗಿ ಮೂರು ತಿಂಗಳಿಗೆ ಯುವತಿ ಆತ್ಮಹತ್ಯೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹುಡುಗನ ಕುಟುಂಬದವರ ಕಿರುಕುಳದಿಂದಾಗಿಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಯುವತಿಯ ಪೋಷಕರು ಆರೋಪಿಸಿದ್ದಾರೆ.

ಕೆಲವು ವರ್ಷಗಳ ಪ್ರೀತಿ ಬಳಿಕ ಮೂರು ತಿಂಗಳ ಹಿಂದೆ 23 ವರ್ಷದ ಅಮೂಲ್ಯ ಮತ್ತು 30 ವರ್ಷದ ಅಭಿಷೇಕ್‌ ಮದುವೆ ಆಗಿದ್ದರು. ಆಂಧ್ರಹಳ್ಳಿಯ ಅಮೂಲ್ಯ ವಿದ್ಯಮಾನ್‌ ನಗರದ ಅಭಿಷೇಕ್‌ ಅಕ್ಕಪಕ್ಕದ ಏರಿಯಾ ನಿವಾಸಿಗಳಾಗಿದ್ದು, ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ದರು. ಮೂರು ತಿಂಗಳಾಗುವಷ್ಟರಲ್ಲಿ ನೇಣು ಬಿಗಿದುಕೊಂಡು ಅಮೂಲ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾಮಾನ ನಗರದಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *