ನವದೆಹಲಿ: ಸ್ಮಾರ್ಟ್ ಫೋನ್ ಗಳು ಸಿದ್ಧಪಡಿಸುವಾಗಲೇ ಸಂಚಾರ್ ಸಾಥಿ ಸೈಬರ್ ಸೆಕ್ಯುರಿಟಿ ಅಪ್ಲಿಕೇಶನ್ ಅನುಷ್ಠಾನ ಕಡ್ಡಾಯಗೊಳಿಸಿದ ಆದೇಶವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಸಂಚಾರಿ ಆಪ್ ಸುರಕ್ಷತೆ ದೃಷ್ಟಿಯಿಂದಲೋ ಅಥವಾ ಗುಪ್ತಚಾರಿಕೆ ನಡೆಸಲೋ ಎಂಬ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಮಾರಾಟಕ್ಕೂ ಮುನ್ನವೇ ಸ್ಮಾರ್ಟ್ ಫೋನ್ ಗಳಲ್ಲಿ ಸಂಚಾರಿ ಆಪ್ ಕಡ್ಡಾಯ ಅನುಷ್ಠಾನಗೊಳಿಸಬೇಕು ಎಂದು ಮೊಬೈಲ್ ಉತ್ಪಾದನಾ ಕಂಪನಿಗಳಿಗೆ ಸೂಚಿಸಿತ್ತು.
ಪ್ರತಿಪಕ್ಷ ಸೇರಿದಂತೆ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಆಪಲ್ ಸಂಚಾರಿ ಸಾಥಿ ಆಪ್ ಅನುಷ್ಠಾನ ಪ್ರಶ್ನಿಸಿ ದೂರು ದಾಖಲಿಸಲು ಮುಂದಾಗಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಬುಧವಾರ ಆದೇಶವನ್ನು ವಾಪಸ್ ಪಡೆಯಿತು.
ವ್ಯಾಪಕ ವಿರೋಧದ ನಡುವೆ ಸಂಚಾರಿ ಸಾಥಿ ಆಪ್ ದಾಖಲೆಯ 10 ಲಕ್ಷಕ್ಕೂ ಅಧಿಕ ಡೌನ್ ಲೋಡ್ ಆಗಿತ್ತು. “ಆ್ಯಪ್ ಡೌನ್‌ಲೋಡ್ ಮಾಡಿದ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಕಾರಣ” ಆಪಲ್ ಸೇರಿದಂತೆ ಎಲ್ಲಾ ತಯಾರಕರಿಗೆ ಆದೇಶವನ್ನು ನೀಡಲಾಗಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಚಾರಿ ಆಪ್ ಹೆಚ್ಚು ಜನರು ಬಳಸಬೇಕು ಎಂಬ ಕಾರಣಕ್ಕೆ ಪೂರ್ವ-ಸ್ಥಾಪನೆ ಆದೇಶವನ್ನು ನೀಡಲಾಗಿತ್ತು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅನುಸ್ಥಾಪನಾ ಪೂರ್ವ ನಿರ್ದೇಶನವು ಗೌಪ್ಯತಾ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಮತ್ತು ಅಪ್ಲಿಕೇಶನ್ ಅನ್ನು ಜನರ ಮೇಲೆ ಕಣ್ಣಿಡಲು ಬಳಸಬಹುದು ಎಂಬ ಕಳವಳಗಳ ಕುರಿತು ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕ ಕಾರ್ಯಕರ್ತರಿಂದ ಎರಡು ದಿನಗಳ ಪ್ರತಿಭಟನೆಯ ನಂತರ ಇದನ್ನು ರದ್ದುಗೊಳಿಸಲಾಗಿದೆ, ಇದು 2021 ರ ಪೆಗಾಸಸ್ ಸ್ಪೈವೇರ್ ಹಗರಣದ ಪ್ರತಿಧ್ವನಿಯಾಗಿದೆ.


