ಚಂಡೀಗಢ: ಅತ್ಯಂತ ವೇಗದ ಯುದ್ಧ ವಿಮಾನ ತಪ್ಪಿಸಿಕೊಳ್ಳುವ ವ್ಯವಸ್ಥೆಯ ಹೈ-ಸ್ಪೀಡ್ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಮೂಲಕ ತಂತ್ರಜ್ಞಾನ ಹೊಂದಿದ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಿದೆ.
ಡಿಆರ್ ಡಿಒ ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿಯ ರೈಲ್ ಟ್ರ್ಯಾಕ್ ರಾಕೆಟ್ ಸ್ಲೆಡ್ ಸೌಲಭ್ಯದಿಂದ ಗಂಟೆಗೆ 800 ಕಿ.ಮೀ ವೇಗದಲ್ಲಿ ನಿಖರವಾಗಿ ನಿಯಂತ್ರಿತ ಚಲಿಸುವ ರೈಲಿನಲ್ಲಿ ಯುದ್ಧ ವಿಮಾನದ ಎಸ್ಕೇಪ್ ಸಿಸ್ಟಮ್ನ ರಾಕೆಟ್-ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.
ಯುದ್ಧ ವಿಮಾನಗಳು ಅಪಘಾತಕ್ಕೀಡಾಗುವ ಸಂದರ್ಭದಲ್ಲಿ ಪೈಲೆಟ್ ಗಳು ಇಜೆಕ್ಟ್ ಮೂಲಕ ತಪ್ಪಿಸಿಕೊಳ್ಳುವ ತಂತ್ರಜ್ಞಾನ ಇದಾಗಿದ್ದು, ಭಾರತ ಈ ತಂತ್ರಜ್ಞಾನ ಅಭಿವೃದ್ಧಿ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿತು.
ಫೈಟರ್ ಜೆಟ್ ಎಸ್ಕೇಪ್ ಸಿಸ್ಟಮ್ನ ಹೈ-ಸ್ಪೀಡ್ ರಾಕೆಟ್ ಸ್ಲೆಡ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ಡಿಒ, ಭಾರತೀಯ ವಾಯುಪಡೆ, ಎಡಿಎ, ಎಚ್ಎಎಲ್ ಮತ್ತು ಉದ್ಯಮವನ್ನು ಅಭಿನಂದಿಸಿದ್ದಾರೆ. ಭಾರತದ ಸ್ಥಳೀಯ ರಕ್ಷಣಾ ಸಾಮರ್ಥ್ಯಗಳಿಗೆ ಇದು ಒಂದು ಪ್ರಮುಖ ಮೈಲಿಗಲ್ಲು. ಸ್ವಾವಲಂಬಿ ಭಾರತದತ್ತ ಮತ್ತೊಂದು ಬಲವಾದ ಹೆಜ್ಜೆ ಎಂದು ಸಚಿವ ಸಿಂಗ್ ಬಣ್ಣಿಸಿದ್ದಾರೆ.
ಡಿಆರ್ಡಿಒ ಅಧ್ಯಕ್ಷ ಡಾ.ಸಮೀರ್ ವಿ. ಕಾಮತ್ ಕೂಡ ಇಡೀ ತಂಡವನ್ನು ಶ್ಲಾಘಿಸಿದ್ದಾರೆ. ತೇಜಸ್ನಂತಹ ಯುದ್ಧ ವಿಮಾನಗಳು ಮತ್ತು ಮುಂಬರುವ ಎಎಂಸಿಎಗೆ ಇದು ಅತ್ಯಂತ ಅಗತ್ಯವಾದ ಪ್ರಗತಿ ಎಂದು ಹೇಳಿದ್ದಾರೆ.
ಪರೀಕ್ಷೆ ಹೇಗೆ ನಡೆಯಿತು?
ಶಕ್ತಿಯುತ ರಾಕೆಟ್ ಮೋಟಾರ್ಗಳನ್ನು ಬಳಸಿಕೊಂಡು ಯುದ್ಧ ವಿಮಾನದ ಮುಂಭಾಗವನ್ನು ಗಂಟೆಗೆ 800 ಕಿಲೋಮೀಟರ್ ವೇಗಕ್ಕೆ ಹೆಚ್ಚಿಸಲಾಯಿತು. ಈ ವೇಳೆ, ಪೈಲಟ್ ಸೀಟಿನ ಕ್ಯಾನೋಪಿ ಬೇರ್ಪಡಿಕೆ ಮತ್ತು ಎಜೆಕ್ಷನ್ ಸಂಪೂರ್ಣವಾಗಿ ಯಶಸ್ವಿಯಾಯಿತು. ಡಮ್ಮಿ ಪೈಲಟ್ ಅನ್ನು ವಿಮಾನದಿಂದ ಸುರಕ್ಷಿತವಾಗಿ ಹೊರಹಾಕುವಲ್ಲಿ ಇಡೀ ವ್ಯವಸ್ಥೆಯು 100% ಯಶಸ್ವಿಯಾಗಿದೆ. ಈ ಯಶಸ್ಸಿನೊಂದಿಗೆ ಭಾರತೀಯ ಪೈಲಟ್ಗಳ ಸುರಕ್ಷತೆಯು ಈಗ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮತ್ತು ಹೆಚ್ಚು ಪರೀಕ್ಷಿಸಲ್ಪಟ್ಟ ವ್ಯವಸ್ಥೆಯ ಕೈಯಲ್ಲಿದೆ.
Defence Research and Development Organization (DRDO) has successfully conducted a high-speed rocket-sled test of fighter aircraft escape system at precisely controlled velocity of 800 km/h- validating canopy severance, ejection sequencing and complete aircrew-recovery at Rail… pic.twitter.com/G19PJOV6yD
— रक्षा मंत्री कार्यालय/ RMO India (@DefenceMinIndia) December 2, 2025


