Menu

ಸರ್ಕಾರಿ ನಿಧಿ ದುರುಪಯೋಗ: ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅರೆಸ್ಟ್‌

ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸರ್ಕಾರಿ ನಿಧಿ ದುರುಪಯೋಗ ಆರೋಪದಡಿ ಅಪರಾಧ ತನಿಖಾ ಇಲಾಖೆ ಬಂಧಿಸಿದೆ. 2023 ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷ್ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ತಮ್ಮ ಪತ್ನಿ ಪ್ರೊಫೆಸರ್ ಮೈತ್ರೀ ವಿಕ್ರಮಸಿಂಘೆ ಅವರ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು, ಇಂಗ್ಲೆಂಡ್‌ಗೆ ಪ್ರಯಾಣಿಸಲು ಸಾರ್ವಜನಿಕ ಹಣವನ್ನು ಬಳಸಿದ್ದಾರೆ ಎಂದು ವಿಕ್ರಮಸಿಂಘೆ ವಿರುದ್ಧ ಆರೋಪ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಕ್ರಮಸಿಂಘೆ ಅವರನ್ನು ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುತ್ತಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ವೈಯಕ್ತಿಕ ಉದ್ದೇಶಗಳಿಗಾಗಿ ರಾಜ್ಯದ ಸಂಪನ್ಮೂಲಗಳನ್ನು ಬಳಸಿದ್ದಕ್ಕಾಗಿ ಅವರ ವಿರುದ್ಧ ಈ ಆರೋಪ ದಾಖಲಾಗಿದೆ.

2023 ರಲ್ಲಿ ಹವಾನಾದಲ್ಲಿ ನಡೆದ G77 ಶೃಂಗಸಭೆಯಲ್ಲಿ ಭಾಗವಹಿಸಿದ್ದ ವಿಕ್ರಮಸಿಂಘೆ ಅವರು ಲಂಡನ್‌ಗೆ ಹಿಂತಿರುಗುವಾಗ ಬ್ರಿಟನ್‌ನಲ್ಲಿ ತಂಗಿದ್ದರು. ಅವರು ಮತ್ತು ಅವರ ಪತ್ನಿ ವೊಲ್ವರ್‌ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿಕ್ರಮಸಿಂಘೆ ಅವರು ತಮ್ಮ ಪತ್ನಿಯ ಪ್ರಯಾಣ ವೆಚ್ಚವನ್ನು ಆಕೆಯೇ ಭರಿಸುತ್ತಿದ್ದರು, ಯಾವುದೇ ಸರ್ಕಾರಿ ನಿಧಿಯನ್ನು ಬಳಸಲಾಗಿಲ್ಲ ಎಂದು ವಾದಿಸಿದ್ದರು. ವಿಕ್ರಮಸಿಂಘೆ ಖಾಸಗಿ ಭೇಟಿಗಾಗಿ ಸರ್ಕಾರಿ ಹಣವನ್ನು ಬಳಸಿಕೊಂಡಿದ್ದಾರೆ. ಅಂಗರಕ್ಷಕರಿಗೂ ರಾಜ್ಯದಿಂದ ವೇತನ ನೀಡಲಾಗಿದೆ ಎಂದು ಸಿಐಡಿ ಆರೋಪಿಸಿದೆ.

Related Posts

Leave a Reply

Your email address will not be published. Required fields are marked *