ಅಮೆರಿಕದ ದಕ್ಷಿಣ ಭಾಗದ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5 ರಷ್ಟು ದಾಖಲಾಗಿದೆ. ಭೂಕಂಪದ ನಂತರ ಸುನಾಮಿ ಭೀತಿ ಎದುರಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.
ಡ್ರೇಕ್ ಪ್ಯಾಸೇಜ್ ದಕ್ಷಿಣ ಅಮೆರಿಕಾದ ದಕ್ಷಿಣ ತುದಿ ಮತ್ತು ಅಂಟಾರ್ಕ್ಟಿಕಾದ ನಡುವೆ ಇರುವ ನೀರಿನ ಮೂಲವಾಗಿದೆ. ಭೂಕಂಪವು 11 ಕಿ.ಮೀ ಆಳದಲ್ಲಿ ಸಂಭವಿಸಿದೆ. ಇಲ್ಲಿ 57,000 ಜನಸಂಖ್ಯೆ ಇದೆ. ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ತಕ್ಷಣದ ವರದಿಗಳಿಲ್ಲ.
ದಕ್ಷಿಣ ಅಮೆರಿಕಾದ ದಕ್ಷಿಣ ತುದಿ ಮತ್ತು ಅಂಟಾರ್ಕ್ಟಿಕಾದ ನಡುವೆ ಡ್ರೇಕ್ ಪ್ಯಾಸೇಜ್ ಎಂದು ಕರೆಯಲಾಗುವ ವಿಶಾಲವಾದ ಸಮುದ್ರ ಪ್ರದೇಶವಿದೆ. ಇದು ವಿಶ್ವದ ಅತ್ಯಂತ ಅಪಾಯಕಾರಿ ಸಮುದ್ರ ಪ್ರವಾಹಗಳಲ್ಲಿ ಒಂದಾಗಿದೆ, ಇಲ್ಲಿ ಬಲವಾದ ಗಾಳಿ, ಎತ್ತರದ ಅಲೆಗಳು ಮತ್ತು ಅಸ್ಥಿರ ಸಮುದ್ರ ಕಂಡುಬರುತ್ತವೆ. ಭೂಕಂಪ ಸಂದರ್ಭದಲ್ಲಿ ಈ ಪ್ರದೇಶದಿಂದ ಸುನಾಮಿ ಅಪಾಯವು ಇನ್ನಷ್ಟು ಹೆಚ್ಚಾಗುತ್ತದೆ.