Menu

ಪೊಲೀಸರ ಸಮ್ಮುಖದಲ್ಲೇ ಮುಸ್ಲಿಮರ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಅವಾಚ್ಯ ನಿಂದನೆ?

Marularadhya Swamiji Abuse of Muslims

ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಯಾಗಿರುವ ಮರುಳಾರಾಧ್ಯ ಸ್ವಾಮೀಜಿಯದ್ದು ಎನ್ನಲಾದ ಆಡಿಯೋ ವೈರಲ್ ಆಗಿ ಸದ್ದು ಮಾಡುತ್ತಿದೆ.

ಮಾಂಸದ ವ್ಯಾಪಾರಿ ಜೊತೆ ಸ್ವಾಮೀಜಿ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಮುಸ್ಲಿಂ ಸಮುದಾಯ ವಿರುದ್ಧ ಅವಾಚ್ಯ ಪದ ಬಳಕೆ ಮಾಡಲಾಗಿದೆ.

ಮಾಂಸದ ವ್ಯಾಪಾರಿ ರಫೀಕ್ ಖುರೇಷಿ ಜೊತೆ ಮಾತನಾಡುವಾಗ ವಾಮೀಜಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎನ್ನಲಾಗಿದೆ. ಮಠಕ್ಕೆ ಬಂದು ಕ್ಷಮೆ ಕೇಳುವಂತೆ ಸ್ವಾಮೀಜಿ ಪಟ್ಟು ಹಿಡಿದಿದ್ದು, ತನಗೆ ತಲೆನೋವು ಇದೆ ಎಂದು ಖುರೇಷಿ ಹೇಳಿದ್ದಾರೆ, ಈ ವೇಳೆ ಪೊಲೀಸರ ಸಮ್ಮುಖದಲ್ಲೆ ಅವಾಚ್ಯ ಶಬ್ದಗಳಿಂದ ಸ್ವಾಮೀಜಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆಡಿಯೋ ಕುರಿತು ಸ್ಪಷ್ಟೀಕರಣ ನೀಡುವುದಾಗಿ ಮರುಳಾರಾಧ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಹಿಂದೆ ಸ್ವಾಮೀಜಿ ಕಾರ್yಕ್ರಮವೊಂದರಲ್ಲಿ ಮಾತನಾಡಿ, ಮಕ್ಕಳ ಕೈಗೆ ಪೆನ್ನು ಬದಲು ತಲ್ವಾರ್‌ ಕೊಡಿ ಎಂದು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಅಫಜಲಪುರ  ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

Related Posts

Leave a Reply

Your email address will not be published. Required fields are marked *