ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಮಹಾಲಕ್ಷ್ಮಿ ಜ್ಯುವೆಲ್ಲರಿಯಲ್ಲಿ ಕಳ್ಳತನ ಮಾಡುವಾಗ ನೋಡಿದ್ದ ಪಕ್ಕದ ಹೋಟೆಲ್ ಮಾಲೀಕ ಮಾದಪ್ಪ ಎಂಬವರನ್ನು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಿರಣ್ ,ಆನಂದ್ , ಶರತ್, ಶ್ರೀನಿವಾಸ್ ,ಕೃಷ್ಣಾಚಾರಿ ಇತರ ಬಂಧಿತ ಆರೋಪಿಗಳು, ಇವರು ಮಂಡ್ಯ ತಾಲೂಕಿನ ಕೊತ್ತತ್ತಿ ಹಾಗೂ ಈಚಗೆರೆ ಗ್ರಾಮಕ್ಕೆ ಸೇರಿದವರು
ಆರೋಪಿಗಳನ್ನು ಪೊಲೀಸರು ಬಂಧಿಸುವ ವೇಳೆ ಪ್ರಮುಖ ಆರೋಪಿ ಕಿರಣ್ ಎಂಬಾತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಕಿರಣ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಹಲಗೂರು ಪೊಲೀಸ್ ಠಾಣೆಯ ಸಿಪಿಐ ಶ್ರೀಧರ್ ಪ್ರಮುಖ ಆರೋಪಿ ಕಿರಣ್ ಕಾಲಿಗೆ ಗುಂಡು ಹಾರಿಸಿದ್ದು, ಗಾಯಗೊಂಡ ಆತನನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
.ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯುವೆಲರಿ ಶಾಪ್‌ಗೆ ಆ.17ರಂದು ಆರೋಪಿಗಳು ಕನ್ನ ಹಾಕಿ ಬೆಳಗಿನ ಜಾವ ಗ್ಯಾಸ್ ಕಟರ್‌ನಿಂದ ಶಾಪ್ ಶೆಟರ್ ಮುರಿದು 110ಗ್ರಾಂ ಚಿನ್ನ, 2 ಕೆಜಿ ಬೆಳ್ಳಿಯನ್ನು ದೋಚಿದ್ದರು. ಇದನ್ನು ನೋಡಿದ ಪಕ್ಕದ ಹೋಟೆಲ್‌ನ ಮಾಲೀಕ ಮಾದಪ್ಪ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಆರೋಪಿ ಆನಂದ್ ಕೇರಳದಲ್ಲೂ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.