ಗದಗದಲ್ಲಿ ಅಣ್ಣೊಬ್ಬ ತಂಗಿಗೆ ಚೆನ್ನಾಗಿ ಓದು ಎಂದು ಬುದ್ದಿ ಹೇಳಿದ್ದೇ ತಪ್ಪಾಗಿ ಹೋಯ್ತಾ ಎಂಬಂತೆ ತಂಗಿ ಕೆರೆಗೆ ಹಾರಿ ಆತ್ಮಹತ್ಯ ಮಾಡಿಕೊಂಡಿದ್ದಾಳೆ.
ಗದಗದ ಭೀಷ್ಮ ಕೆರೆಗೆ ಹಾರಿ ಚಂದ್ರಿಕಾ ನಡುವಿನಮನಿ (21) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಗಲಕೋಟೆಯ ಶಿರೂರಿನ ಚಂದ್ರಿಕಾ ನಡುವಿನಮನಿ ಗದಗ ನಗರದ ಖಾಸಗಿ ಇಂಜಿನಿಯ ರಿಂಗ್ ಕಾಲೇಜಿನಲ್ಲಿ ಫೈನಲ್ ಇಯರ್ ವ್ಯಾಸಂಗ ಮಾಡುತ್ತಿದ್ದಳು.
ಮೊನ್ನೆ ರಾತ್ರಿ ಅಣ್ಣ ಚೇತನ್ ಕರೆಮಾಡಿ, ಇದು ಕೊನೆ ಸೆಮಿಸ್ಟರ್ ಚೆನ್ನಾಗಿ ಓದು. ಕಳೆದ ಸೆಮಿಸ್ಟರ್ ರಿಸಲ್ಟ್ ಕಡಿಮೆ ಆಗಿದೆ ಎಂದು ಹೇಳಿದ್ದ. ಇಷ್ಟಕ್ಕೆ ನೊಂದ ಚಂದ್ರಿಕಾ, ಮಧ್ಯರಾತ್ರಿ ಭೀಷ್ಮ ಕೆರೆಗೆ ಹಾರಿದ್ದಾಳೆ.
ಚಂದ್ರಿಕಾ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಫಸ್ಟ್ ರ್ಯಾಂಕ್ ಪಡೆದಿದ್ದಳು. ಇಂಜಿನಿಯರಿಂಗ್ನಲ್ಲಿ ಚೆನ್ನಾಗಿ ಓದಲಿ ಎಂದು ಹಾಸ್ಟೆಲ್ ಬಿಡಿಸಿ ಅಣ್ಣ ಪ್ರತ್ಯೇಕ ಮನೆ ಮಾಡಿಸಿದ್ದ. ದ್ದು, ಮನೆಯಲ್ಲಿ ಚಂದ್ರಿಕಾ ಸೇರಿ ನಾಲ್ವರು ಸ್ನೇಹಿತೆಯರು ಇದ್ದರು. ಇತ್ತೀಚೆಗೆ ಚಂದ್ರಿಕಾ ಸ್ನೇಹಿತರ ಜೊತೆ ಟೂರಿಗೆ ಹೋಗಿದ್ದಳು. ಇನ್ನು 6 ತಿಂಗಳಿಗೆ ಪರೀಕ್ಷೆ ಇದೆ, ಚನ್ನಾಗಿ ಓದು ಎಂದು ಅಣ್ಣ ಫೋನ್ನಲ್ಲಿ ಬುದ್ದಿ ಹೇಳಿದ್ದ.
ಚಂದ್ರಿಕಾ ರಾತ್ರಿ 1.30ಕ್ಕೆ ಮನೆಯಿಂದ ಹೋಗಿ ಗದಗದ ಭೀಷ್ಮ ಕೆರೆಗೆ ಹಾರಿ ಪ್ರಾಣಬಿಟ್ಟಿದ್ದಾಳೆ. ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಒಳ್ಳೆಯ ಫಲಿತಾಂಶ ಪಡೆದುಕೊಂಡಿದ್ದ ಚಂದ್ರಿಕಾಳದ್ದು ಆರು ತಿಂಗಳಾಗಿದ್ರೆ ಇಂಜಿನಿಯರಿಂಗ್ ಮುಗಿತ್ತಿತ್ತು. ತಂಗಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತು ಎಂದು ಅಣ್ಣ ಕೊರಗುವಂತೆ ಮಾಡಿದ್ದಾಳೆ.


