ಶಿವಮೊಗ್ಗ ನಗರದ ಇಂದಿರಾ ಗಾಂಧಿ ಬಡಾವಣೆಯಲ್ಲಿ ತಡರಾತ್ರಿ ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ತನ್ನ ಅಣ್ಣನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಸಮೀಪದ ಬನ್ನಿಕೆರೆ ನಿವಾಸಿ ಜನಾರ್ಧನ್ (27) ಚಾಕು ಇರಿತದಿಂದ ಮೃತಪಟ್ಟ ಯುವಕ.
ಜನಾರ್ಧನ್ ಶಿವಮೊಗ್ಗದ ನಿಸರ್ಗ ರೆಸ್ಟೋರೆಂಟ್ ನಲ್ಲಿ ಕುಕ್ ಕೆಲಸ ಮಾಡುತ್ತಿದ್ದರು. ಚಿಕ್ಕಪ್ಪನ ಮಗ ಹನುಮಂತ(26) ಕೊಲೆ ಮಾಡಿರುವ ಯುವಕ. 5 ವರ್ಷದ ಹಿಂದೆ ಸೇವಾಲಾಲ್ ಕ್ಷೇತ್ರ ಸೂರಗೊಂಡನಕೊಪ್ಪಕ್ಕೆ ಹೋಗುವ ವೇಳೆ ನಡೆದಿದ್ದ ಅಪಘಾತದಿಂದ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ಹನುಮಂತ ಕುಂಟುತ್ತಾ ನಡೆದಾಡುತ್ತಿದ್ದ. ಕಾಲು ಅರ್ಧ ಹೋಯ್ತು., ಪೂರ್ತಿ ಹೋಗಿಲ್ಲ ಎಂದು ಜನಾರ್ಧನ್ ರೇಗಿಸುತ್ತಿದ್ದ. ಇದೇ ಕಾರಣಕ್ಕೆ ರಾತ್ರಿ ಅಣ್ಣ ಜನಾರ್ಧನ್ ಗೆ ಚಾಕು ಇರಿದಿದ್ದ.
ಗಂಭೀರ ಗಾಯಗೊಂಡಿದ್ದ ಜನಾರ್ಧನ್ ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಜನಾರ್ದನ್ ಆಸ್ಪತ್ರೆಯಲ್ಲಿ ಅಸು ನೀಗಿದ್ದರು. ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹನುಮಂತನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.