ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್ ಅವರ ತಂದೆ ತಾಯಿ ಖಾಸಗಿ ಕಾರ್ಯಕ್ರಮದ ನಿಮಿತ್ತ ಮೈಸೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ನಗರದ ಕೃಷ್ಣ ಮೂರ್ತಿಪುರಂನಲ್ಲಿರುವ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಿಷಿ ಸುನಕ್ ತಂದೆ ಯಶ್ವೀರ್ ಮತ್ತು ತಾಯಿ ಉಷಾ ಸುನಕ್ ಅವರು ತಮ್ಮ ಸೊಸೆ ಅಕ್ಷತಾ ಮೂರ್ತಿ ಅವರ ತಂದೆ ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಜೊತೆ ರಾಯರ ದರ್ಯಶನ ಪಡೆದುಕೊಂಡರು.
ರಿಷಿ ಸುನಕ್ ಅಕ್ಟೋಬರ್ 2022 ರಲ್ಲಿ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಬ್ರಿಟನ್‌ನ ಪ್ರಧಾನ ಮಂತ್ರಿಯಾದರು. ಜುಲೈ 2024 ರಲ್ಲಿ ಅವರು ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಅವರ ಅಜ್ಜ-ಅಜ್ಜಿ ವಾಯುವ್ಯ ಭಾರತದ ಪಂಜಾಬ್‌ನಿಂದ ಪೂರ್ವ ಆಫ್ರಿಕಾಕ್ಕೆ ವಲಸೆ ಹೋದವರು. ತಾಯಿ ಟಾಂಜಾನಿಯಾ, ತಂದೆ ಕೀನ್ಯಾದಲ್ಲಿ ಜನಿಸಿದವರು. ಅವರ ಕುಟುಂಬಗಳು 1960 ರ ದಶಕದಲ್ಲಿ ದಕ್ಷಿಣ ಇಂಗ್ಲೆಂಡ್‌ನ ಸೌತಾಂಪ್ಟನ್‌ಗೆ ವಲಸೆ ಬಂದಿದ್ದವು. ಸುನಕ್ ಅವರ ತಂದೆ ರಾಷ್ಟ್ರೀಯ ಆರೋಗ್ಯ ಸೇವೆಯಲ್ಲಿ ವೈದ್ಯರಾಗಿದ್ದವರು, ತಾಯಿ ಸಣ್ಣ ಮೆಡಿಕಲ್ ಶಾಪ್ ನಿರ್ವಹಿಸುತ್ತಿದ್ದರು.