ರಷ್ಯಾದ ಫಿಟ್ನೆಸ್ ಕೋಚ್ ಹಾಗೂ ಇನ್ ಫ್ಲ್ಯೂಯೆನ್ಸರ್ ತೂಕ ಇಳಿಕೆ ಕಾರ್ಯಕ್ರಮದಲ್ಲಿ ಜಂಕ್ ಫುಡ್ ತಿನ್ನುವ ಸ್ಪರ್ಧೆ ನಂತರ ರಾತ್ರಿ ಮಲಗಿದ್ದಾಗ ಚಿರನಿದ್ರೆಗೆ ಜಾರಿದ್ದಾರೆ.
30 ವರ್ಷದ ರಷ್ಯಾದ ಫಿಟ್ನೆಸ್ ಕೋಚ್ ಡಿಮಿಟ್ರಿ ನ್ಯೂಯಾಜಿನ್ ರಷ್ಯಾದ ಓರೆನ್ ಬರ್ಗ್ ನಗರದಲ್ಲಿ ಜಂಕ್ ಫುಡ್ ತಿಂದು 25 ಕೆಜಿ ಹೆಚ್ಚಿಸಿಕೊಳ್ಳುವ ಸವಾಲು ಸ್ವೀಕರಿಸಿದ್ದರು.
ಸವಾಲಿನ ಅಂಗವಾಗಿ ತೂಕ ಹೆಚ್ಚಿಸಿಕೊಳ್ಳಲು ಪ್ರತಿದಿನ ಬಿಂಗೆ ಚಿಪ್ಸ್ ಮುಂತಾದ 10,000 ಕ್ಯಾಲೋರಿಯಷ್ಟು ಜಂಕ್ ಫುಡ್ ಗಳನ್ನು ಸೇವಿಸುತ್ತಿದ್ದರು.
ಸಾವಿಗೂ ಹಿಂದಿನ ದಿನ ಡಿಮಿಟ್ರಿ ತರಬೇತಿ ಕಾರ್ಯಕ್ರಮ ರದ್ದುಗೊಳಿಸಿದ್ದು, ಅನಾರೋಗ್ಯ ಕಾಡುತ್ತಿದ್ದು, ವೈದ್ಯರನ್ನು ಭೇಟಿ ಮಾಡುವುದಾಗಿ ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಆದರೆ ರಾತ್ರಿ ಮಲಗಿದ್ದಾಗ ಹೃದಯಾಘಾತವಾಗಿ ಡಿಮಿಟ್ರಿ ಅಸುನೀಗಿದ್ದಾರೆ.
ನವೆಂಬರ್ 18ರಂದು ಡಿಮಿಟ್ರಿ ಕೊನೆಯ ಬಾರಿಗೆ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ಲೇಸ್ ಪ್ಯಾಕೇಟ್ ಕೈಯಲ್ಲಿ ಹಿಡಿದು ಪ್ರತಿದಿನ 13 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದು, ಈಗ ನನ್ನ ತೂಕ 105 ಕೆಜಿಗೆ ಏರಿಕೆಯಾಗಿದೆ ಎಂದು ಹೇಳಿಕೊಂಡಿದ್ದರು.
ಡಿಮಿಟ್ರಿ ಸಾವಿಗೆ ಹಲವು ಆಘಾತ ವ್ಯಕ್ತಪಡಿಸಿದ್ದಾರೆ. ಜಂಕ್ ಫುಡ್ ಸೇವನೆ ಎಷ್ಟು ಅಪಾಯಕಾರಿ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದು ಹೇಳಿದ್ದರೆ, ಫಿಟ್ನೆಸ್ ತರಬೇತುದಾರ ಈ ಸವಾಲು ಸ್ವೀಕರಿಸಬಾರದಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.


