ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಕೆ ಮಾಡಿದೆ. ಬೈಕ್ ಟ್ಯಾಕ್ಸಿ ಸೇವೆ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಸಮಿತಿ ರಚಿಸಲಾಗಿತ್ತು. ಸಮಿತಿಯಿಂದ ಬೈಕ್ ಟ್ಯಾಕ್ಸಿ ಸಂಚಾರದ ಸಾಧಕ ಬಾಧಕ ಬಗ್ಗೆ ವರದಿ ಸಲ್ಲಿಕೆಯಾಗಿದೆ.
ಬೈಕ್ ಟ್ಯಾಕ್ಸಿ ಕಾನೂನು ಬದ್ಧಗೊಳಿಸಿದರೆ ಸಂಚಾರ ದಟ್ಟಣೆ ಹೆಚ್ಚಲಿದೆ. ರಸ್ತೆ ಅಪಘಾತ, ಮಹಿಳೆಯರಿಗೆ ಸುರಕ್ಷತೆಯ ಸವಾಲು ಎದುರಾಗುತ್ತದೆ. ನಗರದಲ್ಲಿ ಈಗಾಗಲೇ 84 ಲಕ್ಷ ಬೈಕ್ ಗಳು ಸಾರ್ವಜನಿಕವಾಗಿ ಬಳಕೆಯಲ್ಲಿವೆ. 2025 ರವರೆಗೆ ನಗರದಲ್ಲಿ ಶೇಕಡಾ 98 ರಷ್ಟು ಬೈಕ್ ಬಳಕೆ ಅಗ್ತಿದೆ. ಕಾರುಗಳ ಸಂಖ್ಯೆ ಶೇಕಡಾ 79 ಹೆಚ್ಚಾಗಿದೆ. ಇದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ. ಬಿಎಂಟಿಸಿ ಬಸ್‌ಗಳ ಸಂಚಾರ ಕುಸಿದಿದೆ. ಸಾಮೂಹಿಕ ಸಾರಿಗೆ ವ್ಯವಸ್ಥೆಯಿಂದ ಟ್ರಾಫಿಕ್ ಕಂಟ್ರೋಲ್ ಮಾಡಬಹುದು. ಸಾರಿಗೆ ಬಸ್ ಗಳ ಸಂಖ್ಯೆ ಹೆಚ್ಚು ಮಾಡಬೇಕು ಎಂದು ಸಮಿತಿ ತಿಳಿಸಿದೆ.
ಒಂದು ಬಸ್ ಸಂಚರಿಸುವ ಜಾಗದಲ್ಲಿ 30 ಬೈಕ್ ಗಳು ಸಂಚರಿಸ್ತಿವೆ. ಇದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗ್ತಿದೆ. ಸಾರಿಗೆ ಬಸ್ ಗಳಿಗಿಂತ ಶೇಕಡಾ 30ಬೈಕ್ ಟ್ಯಾಕ್ಸಿ ದರ ಹೆಚ್ಚು
ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲ. ಹಲವು ಬಾರಿ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ, ಕಿರುಕುಳ ಅಗಿದೆ. ಕೆಲವು ಬೈಕ್ ಟ್ಯಾಕ್ಸಿ ಗಳಿಗೆ ವಿಮೆ ಇರೋದಿಲ್ಲ. ಅಪಘಾತ ಸಂದರ್ಭದಲ್ಲಿ ವಿಮೆ ಸಿಗಲ್ಲ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
ಈ ಎಲ್ಲಾ ಮಾನದಂಡ ಪರಿಗಣಿಸಿ ಬೈಕ್ ಟ್ಯಾಕ್ಸಿ ನಿಷೇಧ ಮುಂದುವರಿಸುವಂತೆ ಸಮಿತಿ ವರದಿಯಲ್ಲಿ ಹೇಳಿದೆ. ರಾಜ್ಯ ಸರ್ಕಾರದ ಸಾರಿಗೆ ಇಲಾಖೆಯ ಸೆಕ್ರೆಟರಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ಹನ್ನೊಂದು ಪ್ರಮುಖ ಇಲಾಖೆಗಳ ಮುಖ್ಯಸ್ಥರು ಸೇರಿದ್ದರು.


