ಬೆಂಗಳೂರಿನ ವಿವೇಕ ನಗರ ಪೊಲೀಸ್ ಕಸ್ಟಡಿಯಲ್ಲಿ ಪೊಲೀಸರಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಮದ್ಯ ರಿಹ್ಯಾಬ್ ಸೆಂಟರ್ನಲ್ಲಿ ಮೃತಪಟ್ಟಿದ್ದಾರೆ.
ಸಿಂಗಮಲೆ ಮೃತಪಟ್ಟವರು. ಕಸ್ಟಡಿಯಲ್ಲಿರುವಾಗ ಪೊಲೀಸರು ಸಂಗಮಲೆಗೆ ಹೊಡೆದಿದ್ದು, ಬಳಿಕ ಮಾದಕನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಯ ರಿಹ್ಯಾಬ್ ಸೆಂಟರ್ಗೆ ದಾಖಲಿಸಿದ್ದರು. ಅಲ್ಲಿಗೆ ದಾಖಲಿಸುವ ಮೊದಲೇ ಪೊಲೀಸ್ ಠಾಣೆಯಲ್ಲಿಯೇ ಸಿಂಗಮಲೆ ಅರೆ ಜೀವವಾಗಿದ್ದ ಎನ್ನಲಾಗಿದೆ.
ಮಾದನಾಯಕನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ನವೆಂಬರ್ 15 ನೇ ತಾರೀಖಿನಿಂದು ಸಿಂಗಮಲೆಯನ್ನು ಪೊಲೀಸರು ಕರೆ ತಂದಿದ್ದರು. ಆತ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪಿವಿತ್ತು.
ಯಾವುದೇ ಕೇಸ್ ದಾಖಲಿಸದೆ ಪೊಲೀಸರು ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಸಂಗಮಲೆ ಮೇಲೆ ಹಲ್ಲೆ ನಡೆಸಿರುವುದು ದೃಢಪಟ್ಟಿದೆ.


