ಇಸ್ಲಮಾಬಾದ್: ವಾಯುಸೇನೆ, ನೌಕಾಪಡೆ ಹಾಗೂ ಭೂಸೇನೆ ಸೇರಿದಂತೆ ಎಲ್ಲಾ ಮೂರು ಮಾದರಿಯ ಸೇನೆ ಹಾಗೂ ಅಣ್ವಸ್ತ್ರ ಪರಮಾಧಿಕಾರವನ್ನು ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಗೆ ನೀಡಲಾಗಿದೆ.
ಸಂವಿಧಾನದ 27ನೇ ವಿಧಿಯನ್ನು ಪರಿಷ್ಕರಿಸಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಎಲ್ಲಾ ಮಾದರಿಯ ಸೇನೆ ಒಳಗೊಂಡ ಚೀಫ್ ಡಿಫೆನ್ಸ್ ಫೋರ್ಸಸ್ (ಸಿಡಿಎಫ್) ರಚಿಸಲಾಗಿದ್ದು, ಇದರ ಮುಖ್ಯಸ್ಥರಾಗಿ ಆಸೀಮ್ ಮುನೀರ್ ಅವರನ್ನು ನೇಮಕ ಮಾಡಲಾಗಿದೆ.
ಆಸೀಮ್ ಮುನೀರ್ ಇದೀಗ ಸೇನೆಯ ಪರಮಾಧಿಕಾರ ಹೊಂದಿದ್ದು, ವಾಯುಸೇನೆ, ನೌಕಾಪಡೆ ಹಾಗೂ ಭೂಸೇನೆ ಇವರ ಅಧೀನಕ್ಕೆ ಬರಲಿದೆ. ಇವರ ಅಧಿಕಾರಾವಧಿ 5 ವರ್ಷಗಳದ್ದಾಗಿರುತ್ತದೆ.
1971ರಲ್ಲಿ ಭಾರತ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನ ಸೋಲುಂಡ ನಂತರ 1976ರಲ್ಲಿ ಜುಲ್ಫಿಕರ್ ಅಲಿ ಬುಟ್ಟೊ ಪ್ರಧಾನಿ ಆಗಿದ್ದಾಗ ಎಲ್ಲಾ ಸೇನೆಯ ಮುಖ್ಯಸ್ಥರಾಗಿ ಒಬ್ಬರನ್ನು ನೇಮಿಸಿ ಅಧಿಕಾರ ಕೇಂದ್ರೀಕೃತಗೊಳಿಸುವ ನಿಯಮ ರೂಪಿಸಿದ್ದರು. ಆದರೆ ಈ ನಿಯಮ ಜಾರಿಗೆ ಬಂದಿರಲಿಲ್ಲ.
24 ಕೋಟಿ ಜನಸಂಖ್ಯೆಯ ಪಾಕಿಸ್ತಾನ ಅಣು ಸಾಮರ್ಥ್ಯ ಹೊಂದಿದ ರಾಷ್ಟ್ರವಾಗಿದ್ದು, ಅಣ್ವಸ್ತ್ರ ಬಳಕೆಯ ಅಧಿಕಾರವನ್ನು ಈ ಹಿಂದೆ ಪರ್ವೆಜ್ ಮುಷರಫ್ ಗೆ 199ರಲ್ಲಿ ನೀಡಲಾಗಿತ್ತು. 2008ರವರೆಗೆ ಅವರು ಸರ್ವಾಧಿಕಾರಿ ಆಗಿ ಇದ್ದಿದ್ದರಿಂದ ಈ ಅಧಿಕಾರ ಅವರ ಬಳಿಯೇ ಇತ್ತು.


