Menu

ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ವೇತನ ಪಾವತಿ ಗೊಂದಲ ಬಗೆಹರಿಸಲು ಕ್ರಮ: ಡಿಸಿಎಂ

“ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ವೇತನ ಗೊಂದಲವನ್ನು ಅಧಿಕಾರಿಗಳ ಜತೆ ಚರ್ಚಿಸಿ, ಬಗೆಹರಿಸಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು. ಸದಾಶಿವನಗರದ ನಿವಾಸದ ಬಳಿ ಶನಿವಾರ ಆಗಮಿಸಿದ್ದ ಬಿಬಿಎಂಪಿ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರ ಅಹವಾಲು ಸ್ವೀಕರಿಸಿ ಮಾತನಾಡಿದರು.

“ಆರೋಗ್ಯ ಕಾರ್ಯಕರ್ತೆಯರ ವೇತನ ಪಾವತಿ ಜವಾಬ್ದಾರಿ ಕುರಿತು ಚರ್ಚಿಸಲು ನಿಮ್ಮಲ್ಲಿ ಐದು ಜನರ ನಿಯೋಗದೊಂದಿಗೆ ಇನ್ನೊಮ್ಮೆ ನನ್ನನ್ನು ಭೇಟಿ ಮಾಡಿ. ನಿಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಬಗೆಹರಿಸಲಾಗುವುದು” ಎಂದು ಹೇಳಿದರು.

“ಬಿಬಿಎಂಪಿ ಗುತ್ತಿಗೆದಾರರಿಂದ ನಿಮಗೆ ವೇತನ ಪಾವತಿ ಆಗುವುದಿಲ್ಲ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯನ್ನು (ಬಿಎಸ್ಡಬ್ಲ್ಯೂಎಂಎನ್) ಬೆಂಗಳೂರು ನಗರದ ಕಸ ನಿರ್ವಹಣೆಗೆಂದು ಸ್ಥಾಪಿಸಲಾಗಿದೆ. ಇದನ್ನು ಗುತ್ತಿಗೆದಾರರು ನಿರ್ವಹಣೆ ಮಾಡುವುದಿಲ್ಲ. ಇದರ ಮುಖ್ಯಸ್ಥರಾಗಿ ಐಎಎಸ್ ಅಧಿಕಾರಿಯೇ ಇರುತ್ತಾರೆ” ಎಂದು ಹೇಳಿದರು.

ಡಿಸಿಎಂ ಅವರಿಗೆ ಸಲ್ಲಿಸಿದ್ದ ಮನವಿಯಲ್ಲಿ, “2017 ರಲ್ಲಿ ಎನ್ ಎಚ್ ಯುಎಂ ವತಿಯಿಂದ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಂಡ ಕಾರಣಕ್ಕೆ ಆರೋಗ್ಯ ಸಂಪರ್ಕ ಕಾರ್ಯಕರ್ತೆಯರನ್ನು ಘನತ್ಯಾಜ್ಯ ನಿರ್ವಹಣಾ ವಿಭಾಗಕ್ಕೆ ವರ್ಗವಣೆ ಮಾಡಲಾಯಿತು. ಈಗ ಬಿ.ಎಸ್.ಡಬ್ಲ್ಯೂ.ಎಂ.ಎನ್ ಕಡೆಯಿಂದ ವೇತನ ಪಾವತಿ ಎಂದು ತಿಳಿಸಿರುತ್ತಾರೆ. ಕಳೆದ‌ 30 ವರ್ಷಗಳಿಂದ ಪಾಲಿಕೆಯಲ್ಲಿ‌ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಯರಿಗೆ ಬಿಬಿಎಂಪಿಯಿಂದಲೇ ವೇತನ‌ ಪಾವತಿ ವ್ಯವಸ್ಥೆ ಮಾಡಬೇಕು ಎಂದು ಕೋರಲಾಗಿದೆ.

Related Posts

Leave a Reply

Your email address will not be published. Required fields are marked *