Wednesday, November 26, 2025
Menu

ಬೆಂಗಳೂರಲ್ಲಿ ಮನೆ ತಳಪಾಯಕ್ಕೂ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಜಿಬಿಎ

ನಕ್ಷೆ ಮಂಜೂರಾತಿ ಅಧಿಕಾರವನ್ನು ನಗರ ಪ್ರಾಧಿಕಾರ ಈಗಾಗಲೇ ಜಿಬಿಎ ಗೆ ನೀಡಿದ್ದು, ಕಟ್ಟಡ ನಕ್ಷೆ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ತಳಪಾಯಕ್ಕೂ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

ನಗರ ಯೋಜನೆ ಅಧಿಕಾರಿಗಳು ಕಡ್ಡಾಯವಾಗಿ ತಳಪಾಯ ಪ್ರಮಾಣ ಪತ್ರ ಜವಾಬ್ದಾರಿ ಪಾಲಿಸಬೇಕು ಎಂದು ಬಿಜಿಎ ತಾಕೀತು ಮಾಡಿದೆ. ಅನಧಿಕೃತ ಕಟ್ಟಡಗಳ ತಡೆಗೆ ಏನೆಲ್ಲ ಮಾರ್ಗಸೂಚಿ ಅನುಸರಿಸಬೇಕು ಎಂದೂ ಮಾರ್ಗಸೂಚಿ ಹೊರಡಿಸಿದೆ.

ನಕ್ಷೆ ಅನುಮೋದನೆ ಆದ ಮೇಲೆ ತಳಪಾಯದ ಗಡಿರೇಖೆಯ ಗುರುತು ಪಡೆಯಬೇಕು. ನಗರ ಯೋಜನೆ ವಿಭಾಗದ ಆಯೋಜಕರು ಕಟ್ಟಡ ಮಾಲೀಕರ ಮುಂದೆ ಗುರುತು ಮಾಡಿ ತಳಪಾಯದ ಪ್ರಮಾಣ ಪತ್ರ ನೀಡಬೇಕು. ನಗರ ಆಯೋಜಕರು ಕಟ್ಟಡ ನಿರ್ಮಾಣದ ತಪಾಸಣೆಯನ್ನು ಜನವರಿ, ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್‌ ತಿಂಗಳಲ್ಲಿ ಕೈಗೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ನಕ್ಷೆ ಮಂಜೂರಾತಿ ಉಲ್ಲಂಘಿಸಿ ಹೆಚ್ಚುವರಿ ನಿರ್ಮಿಸಿರುವ ಕಟ್ಟಡಗಳ ತೆರವಿಗೆ ಆದೇಶ ಮಾಡಬೇಕು. ಅಕ್ರಮ ಕಟ್ಟಡ ತೆರವಿಗೆ ನಿಗದಿಯಾದ ಸಮಯದಲ್ಲಿ ತೆರವು ಮಾಡದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅನಧಿಕೃತ ಕಟ್ಟಡಗಳ ತೆರವಿಗೆ ನ್ಯಾಯಾಲಯದಿಂದ ತಡೆಯಾಜ್ಞೆ ಸಿಗದಂತೆ ನೋಡಿಕೊಳ್ಳಬೇಕು. ಅನಧಿಕೃತ ಕಟ್ಟಡ ಅಂತ ದೂರು ಸ್ವೀಕರಿಸಿದ 130 ದಿನಗಳ ಒಳಗಡೆ ತೆರವು ಮಾಡಬೇಕು. ದೂರು ಬಂದ ಬಳಿಕ ಎಡಿಟಿಪಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ವರದಿ ಸಲ್ಲಿಕೆ ಮಾಡಬೇಕು. ಸ್ಥಳ ಮಹಜರು ಬಳಿಕ 15 ದಿನ ಜಂಟಿ ಆಯುಕ್ತರು. ತೆರವಿಗೆ ಜಿಬಿಎಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸ್ತಾವನೆ ಸಲ್ಲಿಕೆ ಆದ ಬಳಿಕ ತೆರವು ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Related Posts

Leave a Reply

Your email address will not be published. Required fields are marked *