ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೇ ಮದ್ಯ ತಯಾರಿಸಿ ಬಳಿಕ ಪಾರ್ಟಿ ಮಾಡಿಕೊಳ್ಳುತ್ತಿದ್ದಾರೆ ಮಾತ್ರವಲ್ಲ ಮದ್ಯವನ್ನು ಮಾರಾಟ ಕೂಡ ಮಾಡುತ್ತಾರೆ ಎಂಬ ವಿಚಾರ ಬಯಲಾಗಿದೆ.
ಜೈಲಲ್ಲಿ ಮದ್ಯ ತಯಾರಿಸಿ ಮಾರಾಟ ಮಾಡಿ ದುಡ್ಡು ಪಡೆದು ಕೆಲವು ಕೈದಿಗಳು ಐಷಾರಾಮಿಯಾಗಿ ಜೀವನ ಮಾಡುತ್ತಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಪೋಟೊಗಳು ಮಾಧ್ಯಮಗಳ ಕೈ ಸೇರಿವೆ.
ಜೈಲಿನ ಕ್ಯಾಂಟೀನ್‌ಗೆ ಬರುವ ಹಣ್ಣುಗಳು ಮತ್ತು ಕೈದಿಗಳನ್ನು ನೋಡಲು ಬರುವವರು ತೆಗೆದುಕೊಂಡು ಬರುವ ಸೇಬು, ದ್ರಾಕ್ಷಿ, ಮತ್ತು ಪೈನ್ ಆ್ಯಪಲ್ ಬಳಸಿ ಯೀಸ್ಟ್ ಮಿಕ್ಸ್ ಮಾಡಿ ಮದ್ಯ ತಯಾರಿಸುತ್ತಾರೆ. ಬಳಿಕ ಬಳಿಕ ಬಾಟಲಿಗಳಿಗೆ ತುಂಬಿ ಭೂಮಿಯೊಳಗೆ ಹುದುಗಿಸಿಡುತ್ತಾರೆ.
ಮೂರು ದಿನಗಳ ನಂತರ ಅದು ಮದ್ಯವಾಗಿ ಪರಿವರ್ತನೆಗೊಂಡ ಬಳಿಕ ಒಪನ್ ಮಾಡಿ ಕುಡಿಯುತ್ತಾರೆ. ಕೈದಿಗಳ ಬರ್ತ್‌ಡೇ ಇರುವಾಗ ಪಾರ್ಟಿ ಮಾಡಲೆಂದು ತಿಂಗಳ ಮೊದಲೇ ವೈನ್ ದೊಡ್ಡ ಮಟ್ಟದಲ್ಲೇ ತಯಾರಿಯಾಗುತ್ತದೆ ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್ ಮತ್ತು ಗ್ಯಾಂಗ್ ಜೈಲಿನಲ್ಲಿ ಐಷಾರಾಮಿಯಾಗಿರುವುದಕ್ಕೆ ಸಂಬಂಧಿಸಿದ ಪೋಟೊ ವೈರಲ್ ಆಗಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ನ್ಯಾಯಾಲಯ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿ ಆದೇಶ ಹೊರಡಿಸಿತ್ತು,ಹಾಗಾಗಿ ಆದೇಶದ ಬೆನ್ನಲ್ಲೇ ದರ್ಶನ್ ಅವರು ಬಳ್ಳಾರಿಗೆ ಸ್ಥಳಾಂತರ ಗೊಂಡಿದ್ದರು. ಬಳಿಕ ದರ್ಶನ್ ಅವರ ಮೇಲೆ ಜೈಲಿನ ಅಧಿಕಾರಿಗಳು ಕಟ್ಟುನಿಟ್ಟಾಗಿ ನಿಗಾ ವಹಿಸಿದ್ದರು.


