ದಾವಣಗೆರೆಯ ಜಗಳೂರು ತಾಲೂಕಿನ ನಿಬಗೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ನೀರು ತುಂಬಿದ್ದ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು ಮೃತಪಟ್ಟಿದೆ.
ನಿಬಗೂರು ಗೊಲ್ಲರಹಟ್ಟಿ ಗ್ರಾಮದ ಮಂಜುನಾಥ್, ರಾಜೇಶ್ವರಿ ದಂಪತಿಯ ಪುತ್ರಿ ವೇದ(2) ಮೃತಪಟ್ಟ ಮಗು. ಮನೆಯಲ್ಲಿಯೇ ಆಟವಾಡುತ್ತ ಸ್ನಾನಗೃಹದಲ್ಲಿನ ನೀರು ತುಂಬಿದ ಪ್ಲಾಸ್ಟಿಕ್ ಟಬ್ಗೆ ಮಗು ಬಿದ್ದಿದೆ. ತಲೆಕೆಳಗಾಗಿ ಬಿದ್ದಿದ್ದರಿಂದ ಮೇಲೆಳಲು ಆಗದೆ ಉಸಿರುಗಟ್ಟಿ ಒದ್ದಾಡಿ ಮೃತಪಟ್ಟಿದೆ.
ಮಗು ಕಾಣಿಸದ ಹಿನ್ನೆಲೆ ಪೋಷಕರು ಎಲ್ಲ ಕಡೆ ಹುಡುಕಾಡಿದ್ದು, ಸ್ನಾನ ಗೃಹದಲ್ಲಿ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಶಾಸಕ ಬಿ.ದೇವೇಂದ್ರಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ದ್ದಾರೆ.
ಜಗತ್ತಿನ ಪರಿಜ್ಞಾನವೇ ಇಲ್ಲದ ಮಗುವಿನ ಸಾವು ನೋವು ತಂದಿದೆ. ಪೋಷಕರು ಮಕ್ಕಳನ್ನು \ನೀರಿನಿಂದ ದೂರವಿಡಬೇಕು, ಮಕ್ಕಳ ಸುರಕ್ಷತೆ ವಿಚಾರದಲ್ಲಿ ಜಾಗ್ರತೆ ವಹಿಸಬೇಕು ಎಂದು ಹೇಳಿದ್ದಾರೆ.


