ದೊಡ್ಡಬಳ್ಳಾಪುರ ನಗರದ ಪ್ರತಿಷ್ಠಿತ ಖಾಸಗಿ ಶಾಲೆಯ ಶಿಕ್ಷಕ ತನ್ನದೇ ವಿದ್ಯಾರ್ಥಿನಿ ಜೊತೆ ಓಡಿ ಹೋಗಿದ್ದು, ಈಗ ದೊಡ್ಡಬಳ್ಳಾಪುರ ಪೊಲೀಸರ ಅತಿಥಿಯಾಗಿದ್ದಾನೆ.
ದೊಡ್ಡಬಳ್ಳಾಪುರ ಶಾಲೆಯಲ್ಲಿ ಕನ್ನಡ ಮೇಷ್ಟ್ರಾಗಿರುವ ಪ್ರವೀಣ್‌ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಹೀಗಿದ್ದರೂ ವಿದ್ಯಾರ್ಥಿನಿ ಬಾಳಲ್ಲಿ ಚೆಲ್ಲಾಟವಾಡಿದ್ದಾನೆ. ಎನ್‌ಸಿಸಿ ತರಬೇತಿಯ ಜೊತೆ ಕನ್ನಡ ಪಾಠ ಮಾಡುತ್ತ ಶಿಸ್ತಿನ ಪಾಠ ಹೇಳಿಕೊಡಬೇಕಿದ್ದ ಶಿಕ್ಷಕ, ವಿದ್ಯಾರ್ಥಿನಿಯ ಜೊತೆಯಲ್ಲೇ ಹಲವು ವರ್ಷಗಳಿಂದ ಪ್ರೀತಿ ಪ್ರೇಮ ಅಂತ ಪ್ರಣಯದಾಟ ಆಡಿಕೊಂಡಿದ್ದ ಎನ್ನಲಾಗಿದೆ.
ವಿದ್ಯಾರ್ಥಿನಿಯ ಮನೆಯವರು ವಿದ್ಯಾರ್ಥಿನಿಗೆ ಆಕೆಗೆ ಆಗಸ್ಟ್ 11ಕ್ಕೆ ಮದುವೆ ನಿಶ್ಚಯ ಮಾಡಿದ್ದರು. ಮದುವೆ ಢೇಟ್ ಫಿಕ್ಸ್ ಆಗ್ತಿದ್ದಂತೆ ಶಿಕ್ಷಕ ಪ್ರವೀಣ್, ವಿದ್ಯಾರ್ಥಿನಿಯನ್ನು ಕರೆದುಕೊಂಡು ದೆಹಲಿಗೆ ಹೋಗಿ ಕಾಲ ಕಳೆದು ಬೆಂಗಳೂರಿಗೆ ವಾಪಸ್ ಬಂದಿದ್ದ. ಆದರೆ ಪೊಲೀಸರು ಇಬ್ಬರನ್ನೂ ಹುಡುಕಿ ಕರೆತಂದು ವಿದ್ಯಾರ್ಥಿನಿಯ ಪೋಷಕರ ಎದುರು ನಿಲ್ಲಿಸಿದ್ದಾರೆ.
ಪ್ರವೀಣ್ ಪತ್ನಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಗೆ ಪತಿಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿ ಪ್ರವೀಣ್‌ನನ್ನು ಬಂಧಿಸಿದ್ದಾರೆ.