ಎರಡು ಬಸ್ ಗಳ ನಡುವೆ ಮುಖಾಮುಖಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟು 32 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ.
ತೆನ್ ಕಾಶಿ ಬಳಿಯ ಇಡೈಕಲ್ ಬಳಿ ಸೋಮವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಗಾಯಗೊಂಡ 32 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮದುರೈನಿಂದ ತೆನ್ ಕಾಶಿಗೆ ಒಂದು ಬಸ್ ಪ್ರಯಣಿಸುತ್ತಿದ್ದರೆ ಕಡಾಯಿನೆಲ್ಲೂರ್ ಗೆ ಮತ್ತೊಂದು ಬಸ್ ಸಂಚರಿಸುತ್ತಿತ್ತು. ಮೃತಪಟ್ಟವರಲ್ಲಿ 5 ಮಹಿಳೆಯರು ಹಾಗೂ ಒಬ್ಬ ಪುರುಷ ಎಂದು ಗುರುತಿಸಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಬಸ್ ಗಳು ಸಂಪೂರ್ಣ ನಜ್ಜುಗುಜ್ಜಾಗಿದೆ. ವಾಹನಗಳನ್ನು ತೆರವುಗೊಳಿಸಲು ಜೆಸಿಬಿ ಸಹಾಯ ಪಡೆಯಲಾಯಿತು.


