Menu

ಸೆಲ್ಫಿ ಹುಚ್ಚಿನಿಂದ ಕಾಡಾನೆಗೆ ಕೀಟಲೆ: ವ್ಯಕ್ತಿಗೆ ದಂಡ ವಿಧಿಸಿ ತಪ್ಪೊಪ್ಪಿಗೆ ಪಡೆದ ಅಧಿಕಾರಿಗಳು

ಆನೆ ಜೊತೆ ಸೆಲ್ಫಿ ಹುಚ್ಚಿನಿಂದ ಕೀಟಲೆ ಮಾಡಿ ಆನೆ ದಾಳಿಗೆ ಒಳಗಾಗಿದ್ದ ವ್ಯಕ್ತಿಗೆ ಅರಣ್ಯಾಧಿಕಾರಿಗಳು 25 ಸಾವಿರ ದಂಡ ವಿಧಿಸಿದ್ದಾರೆ. ಕಾಡಾನೆ ಜೊತೆ ಉದ್ಘಟತನ ಮೆರೆದ ನಂಜನಗೂಡು ನಿವಾಸಿ ಆರ್.‌ಬಸವರಾಜುವನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ತಪ್ಪೊಪ್ಪಿಗೆ ವೀಡಿಯೊ ಮಾಡಿಸಿದ್ದಾರೆ.

ಮೊನ್ನೆಯಷ್ಟೇ ಬಂಡೀಪುರ ಊಟಿ ರಸ್ತೆಯಲ್ಲಿ ಬಂಡೀಪುರದ ಬಂಕಾಪುರ ದೇವಸ್ಥಾನಕ್ಕೆ ಹೋಗಿದ್ದ ಆರ್. ಬಸವರಾಜು, ಕಾಡಿನೊಳಗೆ ಹೋಗಿ ಆನೆ ಜೊತೆ ಸೆಲ್ಫಿಗೆ ಮುಂದಾಗಿದ್ದರು. ಕಾಡಾನೆ ಬಸವರಾಜು ಅವರನ್ನು ಅಟ್ಟಾಡಿಸಿಕೊಂಡು ಬಂದು ಆನೆ ದಾಳಿ ನಡೆಸಿದೆ. ಅದೃಷ್ಟವಷಾತ್‌ ಬಸವರಾಜು ಆನೆ ದಾಳಿಯಿಂದ ಬದುಕುಳಿದಿದ್ದರು. ಬಳಿಕ ಅರಣ್ಯ ಇಲಾಖೆ ಕಣ್ತಪ್ಪಿಸಿ ಪರಾರಿಯಾಗಿದ್ದರು.

ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ಮೂಲಕ ವಶಕ್ಕೆ ಪಡೆದು ವಿಚಾರಿಸಿದಾಗ ತಿಳುವಳಿಕೆ ಕೊರತೆಯಿಂದ ಕೃತ್ಯ ಎಸಗಿರೋದಾಗಿ ಬಸವರಾಜು ತಪ್ಪೊಪ್ಪಿಗೆ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *