ನಾವು ಅಂತಾರಾಷ್ಟ್ರೀಯ ಪೊಲೀಸರು ಎಂದು ಹೇಳಿಕೊಂಡು ನೋಯ್ಡಾದಲ್ಲಿ ಕಚೇರಿ ತೆರಿದು ವಂಚಿಸುತ್ತಿದ್ದ 6 ಮಂದಿಯನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ದುಷ್ಕರ್ಮಿಗಳು ಸೆಂಟ್ರಲ್ ನೋಯ್ಡಾದಲ್ಲಿ ಬಾಡಿಗೆಗೆ ಪಡೆದು ಪೊಲೀಸ್ ಕಚೇರಿ ತೆರೆದಿದ್ದರು. ಈ ಮೂಲಕ ಜನರನ್ನು ಮರಳು ಮಾಡಿ ವಂಚಿಸುತ್ತಿದ್ದ ಜಾಲವನ್ನು ಎಂದು ಪೊಲೀಸರು ಭೇದಿಸಿದ್ದಾರೆ.
ಬಂಧಿತರೆಲ್ಲರೂ 12ನೇ ತರಗತಿ ಪಾಸಾದವರಾಗಿದ್ದು, ಪಶ್ಚಿಮ ಬಂಗಾಳದ ಕೋಲ್ಕತಾದ ಮಂಡಲ್ ಮತ್ತು ಕುಮಾರ್ ಹಾಗೂ ಬೀರ್ ಬರ್ಮ್ ಜಿಲ್ಲೆಯ ಇಬ್ಬರನ್ನು ಬಂಧಿಸಲಾಗಿದೆ.
ಜನರನ್ನು ಬಲೆಗೆ ಕೆಡವಲು ತಾವು ಸರ್ಕಾರಿ ಅಧಿಕಾರಿಗಳು ಎಂದು ಬಿಂಬಿಸಿಕೊಂಡಿದ್ದ 6 ಮಂದಿ ಜನರನ್ನು ಸುಲಿಗೆ ಮಾಡುತ್ತಿದ್ದರು. ಇದಕ್ಕಾಗಿ ನಕಲಿ ದಾಖಲೆಗಳು ಹಾಗೂ ರಿಜಿಸ್ಟ್ರಾರ್ ನಂಬ್ ಗಳನ್ನು ತೋರಿಸುತ್ತಿದ್ದರು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಬಂಧಿತರಿಂದ 9 ಮೊಬೈಲ್, 15 ನಕಲಿ ಸ್ಟಾಂಪ್, ಮೂರು ಮಾದರಿಯ ವಿಸಿಟಿಂಗ್ ಕಾರ್ಡ್ ಗಳು, 4 ಎಟಿಂಎ ಕಾರ್ಡ್, ಸಚಿವಾಲಯ ಹಾಗೂ ಸಿಪಿಯುಗಳ ನಕಲಿ ದಾಖಲೆಗಳು, ಮತದಾರ ಗುರುತು ಚೀಟಿ, 6 ಚೆಕ್ ಬುಕ್ ಸೇರಿದಂತೆ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಳೆದ ೧೫ ದಿನಗಳಿಂದ ಕಾರ್ಯ ನಿರ್ವಹಿಸಿದ್ದ ಈ ಗ್ಯಾಂಗ್ ಅಧಿಕೃತ ವೆಬ್ ಸೈಟ್ www.intlpcrib.in ಹೊಂದಿದ್ದರು ಎಂದು ಅವರು ತಿಳಿಸಿದ್ದಾರೆ.