ಕ್ರಾಂತಿ ಇಲ್ಲ ಎಂದು ಹೇಳಿದ್ದರೂ ಎಲ್ಲರೂ ಹೈಕಮಾಂಡ್‌ಗೆ ಬಳಿಗೆ ಹೋಗಿದ್ದಾರೆ. ಸಿಎಂ ಸ್ಥಾನಕ್ಕೆ ಒಪ್ಪಂದ ನಡೆದಿದೆಯೇ ಇಲ್ಲವೇ ಎಂಬುದನ್ನು ಜನರಿಗೆ ಸರಿಯಾಗಿ ತಿಳಿಸಬೇಕು. ಕಾಂಗ್ರೆಸ್ ಸರ್ಕಾರ ಹೋಳಾಗಿ ಸಿಎಂ ಕುರ್ಚಿಗಾಗಿ ಕಾದಾಟ ನಡೆಯುತ್ತಿದೆ. ಡಿಕೆಶಿವಕುಮಾರ್ ಸಿಎಂ ಕುರ್ಚಿಗಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಎರಡೂವರೆ ವರ್ಷದಲ್ಲಿ ತೆರಿಗೆಗಳನ್ನು ಏರಿಸಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆ. ಈ ಆಡಳಿತದ ಅವಧಿ ಕರಾಳ ವರ್ಷಗಳಾಗಿವೆ. ಡಿಕೆಶಿವಕುಮಾರ್ ಸಿಎಂ ಕುರ್ಚಿಗಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿಯನ್ನು ಇಳಿಸಿದ್ದರೆ, ಈ ಎರಡೂವರೆ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ತೆರಿಗೆಗಳನ್ನು ಏರಿಕೆ ಮಾಡಿದೆ. ಇದೇ ಇವರ ಸಾಧನೆ. ಬಜೆಟ್‌ನಲ್ಲಿ ಚಾಂಪಿಯನ್ ಎಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ಸಾಲ ಮಾಡುವುದರಲ್ಲಿ, ಭ್ರಷ್ಟಾಚಾರದಲ್ಲಿ, ರೈತರನ್ನು ಕೊಲ್ಲುವಲ್ಲಿ, ಜಾತಿಗಳ ಮಧ್ಯೆ ಬೆಂಕಿ ಹಚ್ಚುವಲ್ಲಿ, ಹೈಕಮಾಂಡ್‌ಗೆ ಹಣ ಕಳುಹಿಸುವಲ್ಲಿ ಚಾಂಪಿಯನ್ ಆಗಿದ್ದಾರೆ ಎಂದರು.
ಕ್ರಾಂತಿ ಇಲ್ಲ ಎಂದು ಹೇಳಿದ್ದರೂ ಎಲ್ಲರೂ ಹೈಕಮಾಂಡ್‌ಗೆ ಬಳಿಗೆ ಹೋಗಿದ್ದಾರೆ. ಸಿಎಂ ಸ್ಥಾನಕ್ಕೆ ಒಪ್ಪಂದ ನಡೆದಿದೆಯೇ ಇಲ್ಲವೇ ಎಂಬುದನ್ನು ಜನರಿಗೆ ಸರಿಯಾಗಿ ತಿಳಿಸಬೇಕು. ಇಂತಹ ಕಚ್ಚಾಟದಿಂದಲೇ ಗೂಗಲ್ ಕಂಪನಿ ಪಕ್ಕದ ರಾಜ್ಯಕ್ಕೆ ಹೋಗಿದೆ. ಬೆಂಗಳೂರು ಕಸ, ರಸ್ತೆಗುಂಡಿಯ ಸಮಸ್ಯೆಯಿಂದಾಗಿ ಉದ್ಯಮಿಗಳು ಈ ಕಡೆಗೆ ಬರುತ್ತಿಲ್ಲ. ಇಂತಹ ನಗರವನ್ನೇ ಬ್ರ್ಯಾಂಡ್ ಮಾಡಿದ್ದಾರೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಕಸ ಗುಡಿಸುವ ಯಂತ್ರಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಯಂತ್ರಗಳನ್ನು ಖರೀದಿ ಮಾಡಿದರೆ 308 ಕೋಟಿ ರೂ. ವೆಚ್ಚವಾಗುತ್ತದೆ. ಆದರೆ ಈ ಸರ್ಕಾರ ಬಾಡಿಗೆಗಾಗಿ 610 ಕೋಟಿ ರೂ. ಖರ್ಚು ಮಾಡಲಾಗು ತ್ತಿದೆ. ಕೇಂದ್ರ ಸರ್ಕಾರ 72 ಲಕ್ಷ ರೂ. ಗೆ ಒಂದು ವಾಹನ ಖರೀದಿ ಮಾಡಿದರೆ, ಈ ಸರ್ಕಾರ ಎರಡೂವರೆ ಕೋಟಿ ರೂ.ಖರ್ಚು ಮಾಡುತ್ತಿದೆ. ಅಂದರೆ ಇದು ದೊಡ್ಡ ಹಗರಣವಾಗಿದೆ. ಒಂದು ಗಂಟೆಗೆ 2 ಕಿ.ಮೀ. ಸ್ವಚ್ಛ ಮಾಡಬಹುದು. ಒಂದು ಗಂಟೆಯಲ್ಲಿ 40 ಕಿ.ಮೀ. ಕಸ ಗುಡಿಸಿದ್ದಾರೆ ಎಂದು ಬಿಲ್ ಮಾಡಲಾಗುತ್ತಿದೆ. ಈ ಮೂಲಕ ಹಣ ಲೂಟಿ ಮಾಡಲಾಗುತ್ತಿದೆ. ನಗರದಲ್ಲಿರುವ ಟ್ರಾಫಿಕ್ ನಡುವೆ ಇಷ್ಟು ಕಸ ಗುಡಿಸಲು ಸಾಧ್ಯವೇ ಇಲ್ಲ ಎಂದರು.
ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಗಾಗಿ ಸಾಲ ಮಾಡಿದರೆ, ಸಿಎಂ ಸಿದ್ದರಾಮಯ್ಯ ಲೂಟಿಗಾಗಿ ಸಾಲ ಮಾಡಿದ್ದಾರೆ. ಬಿಜೆಪಿ ಮೇಲೆ ಕಮಿಶನ್ ಆರೋಪ ಮಾಡಿ ಈಗ ಇವರೇ ಕಮಿಶನ್ ಪಡೆಯುತ್ತಿದ್ದಾರೆ ಎಂದು ದೂರಿದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 27, 28 ರಂದು ಹಾಗೂ ಡಿಸೆಂಬರ್ 1 ಮತ್ತು 2 ರಂದು ಜಿಲ್ಲಾ ಕೇಂದ್ರಗಳಲ್ಲಿ ರೈತ ಮೋರ್ಚಾ ವತಿಯಿಂದ ಹೋರಾಟ ಮಾಡಿ ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಲಾಗುವುದು. ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ, ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಹರಿಸದೇ ಇರುವುದರಿಂದ ಅದಕ್ಕೆ ಪರಿಹಾರ, ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮೊದಲಾದ ಒತ್ತಾಯಗಳನ್ನು ಮಾಡಲಾಗುವುದು. ಈ ಮೂಲಕ ರೈತರ ಹೋರಾಟಕ್ಕೆ ಬೆಂಬಲಿಸ ಲಾಗುವುದು ಎಂದು ತಿಳಿಸಿದರು.


