Menu

ವೈದ್ಯನ ಮನೆಯಲ್ಲಿ ಸ್ಫೋಟಕ ತಯಾರಿಸಲು ಬಳಸುತ್ತಿದ್ದ ಗಿರಣಿ ಯಂತ್ರ ಪತ್ತೆ!

terrorist doctor

ನವದೆಹಲಿ: ಬಂಧಿತ ವೈದ್ಯ ಉಗ್ರ ಬಾಂಬ್ ಹಾಗೂ ಸ್ಫೋಟಕಗಳನ್ನು ತಯಾರಿಸಲು ಬಳಸುತ್ತಿದ್ದ ಹಿಟ್ಟಿನ ಗಿರಣಿ ಯಂತ್ರವನ್ನು ಪತ್ತೆ ಹಚ್ಚಲಾಗಿದೆ.

ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ವೈದ್ಯ ಮುಝಮ್ಮಿಲ್ ಶಕೀಲ್ ಗನೈ ಸ್ಫೋಟಕಗಳಿಗೆ ಬೇಕಾದ ರಾಸಾಯನಿಕಗಳನ್ನು ದೊಡ್ಡ ಪ್ರಮಾಣದಲ್ಲಿ ಸಿದ್ಧಪಡಿಸಲು ಹಿಟ್ಟಿನ ಗಿರಣಿ ಯಂತ್ರ ಬಳಸುತ್ತಿದ್ದ ಎಂದು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿದೆ.

ಹರಿಯಾಣದ ಫರಿದಾಬಾದ್‌ನ ಟ್ಯಾಕ್ಸಿ ಚಾಲಕನ ಮನೆಯಿಂದ ವಶಪಡಿಸಿಕೊಳ್ಳಲಾದ ಹಿಟ್ಟಿನ ಗಿರಣಿ ಮತ್ತು ವಿದ್ಯುತ್ ಯಂತ್ರಗಳ ಚಿತ್ರಗಳು ಇದೀಗ ಬಿಡುಗಡೆ ಆಗಿದೆ.

ನವೆಂಬರ್ 10 ರಂದು ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ ಬಂಧಿಸಲ್ಪಟ್ಟ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿ ಗನೈ, ಫರಿದಾಬಾದ್‌ನ ತನ್ನ ಬಾಡಿಗೆ ಕೋಣೆಯಲ್ಲಿ ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದರು, ಅಲ್ಲಿಂದ ನವೆಂಬರ್ 9 ರಂದು ಪೊಲೀಸರು 360 ಕೆಜಿ ಅಮೋನಿಯಂ ನೈಟ್ರೇಟ್ ಮತ್ತು ಇತರ ಸ್ಫೋಟಕ ವಶಪಡಿಸಿಕೊಂಡರು.

ಉಗ್ರರು ಹಿಟ್ಟಿನ ಗಿರಣಿಯಲ್ಲಿ ಯೂರಿಯಾವನ್ನು ಪುಡಿಮಾಡಿ ಅದನ್ನು ಉತ್ತಮಗೊಳಿಸುತ್ತಿದ್ದರು ಮತ್ತು ನಂತರ ಅದನ್ನು ವಿದ್ಯುತ್ ಯಂತ್ರದಿಂದ ಸಂಸ್ಕರಿಸಿ ರಾಸಾಯನಿಕಗಳನ್ನು ತಯಾರಿಸುತ್ತಿದ್ದರು.

ವಿಚಾರಣೆಯಲ್ಲಿ ಫರಿದಾಬಾದ್ ಮೂಲದ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಗನೈ, ಯೂರಿಯಾದಿಂದ ಅಮೋನಿಯಂ ನೈಟ್ರೇಟ್ ಅನ್ನು ಬೇರ್ಪಡಿಸಲು ಮತ್ತು ಸ್ಫೋಟಕಗಳನ್ನು ಸಂಸ್ಕರಿಸಲು ಬಹಳ ಸಮಯದಿಂದ ಹಿಟ್ಟಿನ ಗಿರಣಿಯನ್ನು ಬಳಸುತ್ತಿದ್ದೇನೆ ಎಂದು ಹೇಳಿದರು.

15 ಜನರ ಸಾವಿಗೆ ಕಾರಣವಾದ ಸ್ಫೋಟದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವು ಟ್ಯಾಕ್ಸಿ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದೆ.

Related Posts

Leave a Reply

Your email address will not be published. Required fields are marked *