Menu

ಇಂದಿನಿಂದ ವಿಧಾನಮಂಡಲ ಮುಂಗಾರು ಅಧಿವೇಶನ

ಇಂದಿನಿಂದ ಕರ್ನಾಟಕ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಲಿದ್ದು, ಆಗಸ್ಟ್ 22 ರವರೆಗೆ ನಡೆಯಲಿದೆ. ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ಸಮರ ತಾರಕಕ್ಕೆ ಏರುವ ಎಲ್ಲಾ ಸಾಧ್ಯತೆಗಳಿವೆ. ಪ್ರತಿಪಕ್ಷಗಳಿಗೆ ಪಕ್ಷಗಳಿಗೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಕಷ್ಟು ಅಸ್ತ್ರಗಳಿವೆ. ಸರ್ಕಾರದ ವಿರುದ್ಧ ದಾಳಿಗೆ ಪ್ರತಿಪಕ್ಷಗಳು ಎಲ್ಲ ಸಿದ್ಧತೆ ನಡೆಸಿವೆ.

ಬಿಜೆಪಿ-ಜೆಡಿಎಸ್ ಪ್ರಮುಖ ನಾಯಕರು ಸದನದಲ್ಲಿ ಹೋರಾಟ ನಡೆಸುವ ಬಗ್ಗೆ ವರ್ಚೆಗಳು ನಡೆದಿವೆ. ಪ್ರತಿಪಕ್ಷಗಳ ದಾಳಿಗೆ ಪ್ರತ್ಯುತ್ತರ ಕೊಡಲು ಸರ್ಕಾರ ಕೂಡ ಸಿದ್ಧತೆ ಮಾಡಿಕೊಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟ ಪ್ರಕರಣ ಸರ್ಕಾರವನ್ನು ಕಟ್ಟಿ ಹಾಕುವ ಪ್ರಬಲ ಅಸ್ತ್ರವಾಗಿ ಬಳಸಲು ಪ್ರತಿಪಕ್ಷ ತಯಾರಿ ನಡೆಸಿದೆ.

ರಾಜ್ಯದಲ್ಲಿ ರಸಗೊಬ್ಬರದ ಕೊರತೆಯಿಂದ ರೈತರಿಗೆ ಆಗಿರುವ ಸಮಸ್ಯೆ, ಧರ್ಮಸ್ಥಳದ ಕೊಲೆಗಳ ಪ್ರಕರಣದ ನಿರ್ವಹಣೆ, SCSP-TSP ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿರುವ ವಿಚಾರದಲ್ಲಿ ಪ್ರತಿಪಕ್ಷಗಳು ಸರ್ಕಾರದ ಬೆವರಿಸಳಿಸಲಿವೆ ಎಂದು ಹೇಳಲಾಗಿದೆ.

ಪ್ರತಿಪಕ್ಷಗಳ ಶಾಸಕರಿಗೆ ಅನುದಾನ ಕೊಡದೆ ಆಡಳಿತ ಪಕ್ಷದ ಶಾಸಕರಿಗೆ ಮಾತ್ರ ಅನುದಾನ ನೀಡಿರುವುದು, ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ, ಮಂಗಳೂರು ದ್ವೇಷದ ಕೊಲೆ ಸೇರಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಹರಿ ಹಾಯಲಿವೆ. ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಯ ಕಿತ್ತಾಟದ ವಿಷಯ ಕೂಡ ಚರಚೆಗೆ ಬರಲಿದೆ. ರಾಹುಲ್ ಗಾಂಧಿಯ ಮತಗಳ್ಳತನ ಆರೋಪ, ಈ ಸಂಬಂಧ ರಾಜಣ್ಣ ಮತ್ತು ಇಬ್ರಾಹಿಂ ಮಾತುಗಳನ್ನು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಲಿವೆ.

Related Posts

Leave a Reply

Your email address will not be published. Required fields are marked *