ಕಡೂರು ತಾಲೂಕಿನ ನವಿಲೇಕಲ್ ಪ್ರದೇಶದಲ್ಲಿ ಚಿರತೆಯು ಪೋಷಕರೆದುರೇ ಮಗುವನ್ನು ಹೊತ್ತೊಯ್ದಿದ್ದು, ನವಿಲೇಕಲ್ ಗುಡ್ಡದಲ್ಲಿ ಶವ ಪತ್ತೆಯಾಗಿದೆ. ಚಿರತೆಯು ಐದು ವರ್ಷದ ಮಗು ಸಾನ್ವಿಯನ್ನು ಹೊತ್ತೊಯ್ದಿತ್ತು. ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿದಾಗ ಚೀರಾಟ ಕೇಳಿ ಪೋಷಕರು ಬಂದಿದ್ದಾರೆ. ಅವರ ಎದರುರಲ್ಲೇ ಚಿರತೆ ಮಗುವನ್ನು ಕಾಡಿಗೆ ಹೊತ್ತೊಯ್ದಿದೆ.
ಸ್ಥಳೀಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಈ ದಾಖಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು. ಮಗುವಿನ ಸಾವಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಚಿರತೆ ಹಾವಳಿಯಿಂದ ಹೊಲ, ಗದ್ದೆ, ತೋಟಗಳಿಗೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಈ ಪ್ರದೇಶದಲ್ಲಿ ಆತಂಕದಿಂದಲೇ ಬದುಕುವ ಸ್ಥಿತಿ ನಿರ್ಮಾಣಗೊಂಡಿದೆ.


