ಬಿಗ್ ಬಾಸ್ ಕಾರ್ಯಕ್ರಮ ನಿರೂಪಕ ಆಗಿರುವ ನಟ ಕಿಚ್ಚ ಸುದೀಪ್ ವಿರುದ್ಧ ಮಹಿಳಾ ಆಯೋಗದಲ್ಲಿ ಪ್ರಕರಣ ದಾಖಲಾಗಿದೆ, ಜೊತೆಗೆ ಸ್ಪರ್ಧಿ ಅಶ್ವಿನಿ ಗೌಡ ಅವರ ವಿರುದ್ಧವೂ ದೂರು ದಾಖಲಾಗಿದೆ.
ಸ್ಪರ್ಧಿ ರಕ್ಷಿತಾ ಶೆಟ್ಟಿ ವಿರುದ್ಧ ಸುದೀಪ್ ಗರಂ ಆಗಿದ್ದು, ವಾರಾಂತ್ಯ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ಷೋಗೆ ಸಂಬಂಧಿಸಿದ ವಾರಾಂತ್ಯದ ಕಾರ್ಯಕ್ರಮದಲ್ಲಿ ಯಾವುದೋ ವಿಚಾರದ ಬಗ್ಗೆ ಚರ್ಚೆ ನಡೆದಾಗ, ನನ್ನ ಪಿತ್ತ ನೆತ್ತಿಗೇರುತ್ತಲ್ಲ ಅದಕ್ಕಿಂತ ಮೊದಲು ಅಂತ ಬೈದಿದ್ರು. ಇದು ಮಹಿಳೆಗೆ ಆದ ಅವಮಾನ, ದರ್ಪ ಅಂತಾ ಸಂಧ್ಯಾ ಪವಿತ್ರ ಎಂಬವರು ಆಯೋಗದಲ್ಲಿ ದೂರು ದಾಖಲಿಸಿ ಬಿಡದಿ ಠಾಣೆಗೂ ದೂರು ಸಲ್ಲಿಸಿದ್ದಾರೆ. ದೂರು ಕೊಡುತ್ತಿದ್ದಂತೆ ಸುದೀಪ್ ಅಭಿಮಾನಿಗಳು ಧಮ್ಕಿ ಹಾಕುತ್ತಿದ್ದಾರೆ ಎಂದು ಸಂಧ್ಯಾ ಹೇಳಿದ್ದಾರೆ.
ಅಶ್ವಿನಿ ಗೌಡ ಅವರು ರಕ್ಷಿತಾರನ್ನು ಎಸ್ ಕ್ಯಾಟಗರಿ, ಎಲ್ಲಿಂದ ಬಂದಿದ್ಯಾ ಅಂತ ನಿನ್ನ ಬಟ್ಟೆ ನೋಡಿದರೆ ಗೊತ್ತಾಗುತ್ತೆ, ಅಮಾವಾಸ್ಯೆ ಎಂದು ನಿಂದಿಸಿದ್ದಕ್ಕೆ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ ರಿಷಿಕಾ ವಿರುದ್ಧವೂ ದೂರು ನೀಡಿದ್ದಾರೆ. ಗಿಲ್ಲಿ ನಟನ ವಿರುದ್ಧ ಮೊನ್ನೆಯಷ್ಟೇ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿತ್ತು.


