ಪರ್ಯಾಯ ಹೂಡಿಕೆಯ ಕ್ಷೇತ್ರದ ಅಭಿವೃದ್ದಿಯ ಮಹತ್ವದ ಘಟ್ಟವಾಗಿ ದೇಶದ ಪ್ರೈವೇಟ್ ಇಕ್ವಿಟಿ (PE) , ವೆಂಚರ್ ಕ್ಯಾಪಿಟಲ್(VC) ಹಾಗೂ ಹಣಕಾಸು ಸೇವೆ ಕ್ಷೇತ್ರದ ಪ್ರಭಾವಿ ವ್ಯಕ್ತಿಗಳು ಬೆಂಗಳೂರಿನ ಐಐಎಂಬಿ ಯಲ್ಲಿ ‘ ಟೋನಿ ಜೇಮ್ಸ್ ಸೆಂಟರ್ ಫಾರ್ ಪ್ರೈವೇಟ್ ಇಕ್ವಿಟಿ ಹಾಗೂ ವೆಂಚರ್ ಕ್ಯಾಪಿಟಲ್ ‘ ಲೋಕಾರ್ಪಣೆಗೊಳಿಸಿದರು.
ಇದು ಸಂಶೋಧನೆ, ನಾವಿನ್ಯತೆ ಹಾಗೂ ಪ್ರೈವೇಟ್ ಇಕ್ವಿಟಿ ಮತ್ತು ವೆಂಚರ್ ಕ್ಯಾಪಿಟಲ್‌ನ (ಪಿಇವಿಸಿ) ಸಹಯೋಗಕ್ಕೆ ಮೀಸಲಿರುವ ಭಾರತದ ಮೊದಲ ಕೇಂದ್ರವಾಗಿದೆ. ಈ ಕೇಂದ್ರವನ್ನು ಪಿಜಿಪಿ 1994 ರ ಹಳೆಯ ವಿದ್ಯಾರ್ಥಿ, ಸಂಸ್ಥೆಯ ಚಿನ್ನದ ಪದಕ ವಿಜೇತ ಮತ್ತು 2025 ರ ಡಿಸ್ಟಿಂಗ್ವಿಶ್ಡ್ ಅಲುಮ್ನಿ ಪ್ರಶಸ್ತಿ (ಡಿಎಎ) ಪುರಸ್ಕೃತ, ಫ್ಲೋರಿಂಟ್ರೀ ಅಡ್ವೈಸರ್ಸ್ ಅಧ್ಯಕ್ಷರು ಮತ್ತು ಯಾಲಿ ಕ್ಯಾಪಿಟಲ್‌ನ ಸಹ-ಸಂಸ್ಥಾಪಕ ಶ್ರೀ ಮ್ಯಾಥ್ಯೂ ಸಿರಿಯಾಕ್ ಅವರ ದೂರದೃಷ್ಟಿಯ ಲೋಕೋಪಕಾರಿ ಉಪಕ್ರಮದ ಮೂಲಕ ಸ್ಥಾಪಿಸಲಾಗಿದೆ.
ಈ ಕೇಂದ್ರವನ್ನು ಸ್ಥಾಪಿಸುವ ಕುರಿತು ಐಐಎಂಬಿ ಹಾಗೂ ಮಿಸ್ಟರ್. ಸಿರಿಯಾಕ್ ನಡುವೆ ಆಗಸ್ಟ್ 24, 2024ರಂದು ಎಮ್‌ಒಯು ಒಪ್ಪಂದ ನಡೆದಿತ್ತು. ಐಐಎಂಬಿಯ ಇತಿಹಾಸದಲ್ಲಿ ಹಳೆಯ ವಿದ್ಯಾರ್ಥಿಗಳ ಕೊಡುಗೆಗಳಲ್ಲಿ ಅತಿದೊಡ್ಡ ವೈಯಕ್ತಿಕ ಕೊಡುಗೆ ಇದಾಗಿದ್ದು ಸಿರಿಯಾಕ್ ಅವರಿಗೆ ಸ್ಪೂರ್ತಿ ನೀಡಿದ ಪ್ರಮುಖ ಹಣಕಾಸು ಕ್ಷೇತ್ರದ ಅಧ್ಯಾಪಕರ ಹೆಸರನ್ನ ಇಡಲಾಗುವುದು ಮತ್ತು ಪಿಜಿಪಿ ಹಾಗೂ ಡಾಕ್ಟರಲ್ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ. ಸೌರವ್ ಮುಖರ್ಜಿ ಡೀನ್, ಫಾಕಲ್ಟಿ ಡೀನ್, ಅಲುಮ್ನಿ ರಿಲೇಶನ್ ಮತ್ತು ಡೆವೆಲಪ್‌ಮೆಂಟ್ “ ಹಳೆಯ ವಿದ್ಯಾರ್ಥಿ ಶಿಕ್ಷಣ ಹಾಗೂ ಇಂಡಸ್ಟ್ರಿ ಗೆ ಸಮರ್ಪಕವಾದ ಸಂಶೋಧನೆ ಗೆ ಪೂರಕ ನೆರವನ್ನು ಸಂಸ್ಥೆಗೆ ನೀಡಿದಾಗ ಬಹಳ ಸಂತೋಷವಾಗುತ್ತದೆ” ಎಂದರು. ಜೊತೆಗೆ ತಮ್ಮ ಸ್ವಾಗತ ಭಾಷಣದಲ್ಲಿ ಸಭೆಯಲ್ಲಿ ಹಾಜರಿದ್ದ ವಿದ್ಯಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಸಂಶೋಧನಾ ಕ್ಷೇತ್ರದಲ್ಲಿ, ಜೀವನದಲ್ಲಿ ಹೆಚ್ಚಿನದ್ದನ್ನು ಸಾಧಿಸುವಂತೆ ಹಾಗೂ ಶಿಕ್ಷಣ ಸಂಸ್ಥೆಗೆ ಕೊಡುಗೆ ನೀಡುವಲ್ಲಿ ಸ್ಪೂಿರ್ತಿ ಪಡೆಯುವಂತೆ ಒತ್ತಾಯಿಸಿದರು.
ಕೇಂದ್ರದ ಬಗ್ಗೆ ಮಾತನಾಡಿದ ಪ್ರಾಧ್ಯಾಪಕ ದಿನೇಶ್ ಕುಮಾರ್ , ಡೈರೆಕ್ಟರ್ ಇನ್ ಚಾರ್ಜ್, ಐಐಎಂಬಿ “ ಉತ್ತಮ ಗುಣಮಟ್ಟದ ಸಂಶೋಧನಾ ಕೇಂದ್ರಕ್ಕೆ ಹೆಚ್ಚಿನ ಹಣಕಾಸಿನ ನೆರವು ಬೇಕು. ವಿಶ್ವಮಟ್ಟದ ಪ್ರತಿಭೆಗಳನ್ನು ಪಡೆಯಲು, ಡಾಟಾ ಮತ್ತು ಮೂಲಸೌಕರ್ಯದಂತಹ ನಿರ್ಣಾಯಕ ಸಂಪನ್ಮೂಲಗಳನ್ನು ಪಡೆಯಲು ಹೂಡಿಕೆಯ ಅವಶ್ಯಕತೆ ಇದೆ. ಮ್ಯಾಥ್ಯೂ ಸಿರಿಯಾಕ್ ದಾನಿಗಳು ಜೊತೆಗೆ ಐಐಎಂಬಿಯಲ್ಲಿ ವಿಶ್ವಮಟ್ಟದ ಸಂಶೋಧನಾ ವ್ಯವಸ್ಥೆ ಕಲ್ಪಿಸಲು ನೆರವಾಗಿದ್ದಾರೆ” ಎಂದರು.
ಪಿಇವಿಸಿ ಸೆಂಟರ್ ಬಗ್ಗೆ ಮಾತನಾಡಿದ ಮ್ಯಾಥ್ಯೂ ಸಿರಿಯಾಕ್ “ನಾನು ಮೊದಲಿನಿಂದ ಏನನ್ನಾದರೂ ನಿರ್ಮಿಸುವಲ್ಲಿ ತುಂಬಾ ಆಸಕ್ತಿ ಹೊಂದಿದ್ದೆ. ಐಐಎಂಬಿ ದೇಶದ ಅತ್ಯುನ್ನತ ಶ್ರೇಣಿಯ ಬಿ-ಶಾಲೆಗಳಲ್ಲಿ ಒಂದಾಗಿದ್ದು, ಹಣಕಾಸು ವಿಶೇಷತೆಯೊಂದಿಗೆ, ಆ ಸ್ಥಾನವನ್ನು ಬಲಪಡಿಸಲು ನಾನು ಬಯಸಿದ್ದೆ” ಎಂದು ಹೇಳಿದರು.
ಟೋನಿ ಜೇಮ್ಸ್ ಅವರಂತಹ ಪ್ರತಿಷ್ಠಿತ ಉದ್ಯಮ ನಾಯಕರ ಹೆಸರಿನೊಂದಿಗೆ ಜಾಗತಿಕ ಮಟ್ಟದ ಖ್ಯಾತಿ ಮತ್ತು ಖ್ಯಾತಿಯ ಕಲ್ಪನೆಯನ್ನು ಬಿತ್ತುವುದು ಅತ್ಯಗತ್ಯ ಎಂದು ಹೇಳಿದರು. ಕೇಂದ್ರವು ತೊಡಗಿಸಿಕೊಳ್ಳುವ ಪ್ರಮುಖ ಫಲಾನುಭವಿಗಳು ಮತ್ತು ಪಾಲುದಾರರಲ್ಲಿ ವಿದ್ಯಾರ್ಥಿಗಳು, ಯುವ ವೃತ್ತಿಪರರು, ಪಿಇ ಸಂಸ್ಥೆಗಳು, ಡಾಕ್ಟರೇಟ್ ವಿದ್ವಾಂಸರಂತಹ ಐಐಎಂಬಿ ಶೈಕ್ಷಣಿಕ ಸಂಶೋಧನಾ ಸಮುದಾಯ ಮತ್ತು ಹೂಡಿಕೆ ಮಾಡಲು ನಿಧಿಯನ್ನು ಒದಗಿಸುವ ಎಲ್‌ಪಿ ಸಮುದಾಯ ಸೇರಿವೆ ಎಂದು ಅವರು ಹೇಳಿದರು.