Menu

ಉತ್ತರಾಖಂಡ ಮೇಘಸ್ಫೋಟ: 35 ವರ್ಷ ಬಳಿಕ ಒಟ್ಟುಗೂಡಿದ ಪುಣೆಯ 24 ಸ್ನೇಹಿತರು ನಾಪತ್ತೆ

ಮೇಘಸ್ಫೋಟಕ್ಕೆ ಸಿಲುಕಿ ತತ್ತರಿಸಿರುವ ಉತ್ತರಾಖಂಡ ಬೆಚ್ಚಿ ಬೀಳಿಸುವ ಹಲವು ದುರಂತಗಳಿಗೆ ಸಾಕ್ಷಿಯಾಗಿದ್ದು, ಅದರಲ್ಲಿ 35 ವರ್ಷಗಳ ಬಳಿಕ ಒಟ್ಟುಗೂಡಿದ ಪುಣೆಯ 24 ಸ್ನೇಹಿತರು ನಾಪತ್ತೆಯಾಗಿರುವ ಘಟನೆಯೂ ಸೇರಿದೆ. ಮಹಾರಾಷ್ಟ್ರದ ಒಟ್ಟು ೧೪೯ ಪ್ರವಾಸಿಗರು ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿದ್ದಾರೆ.

1990ರಲ್ಲಿ ಪುಣೆಯಲ್ಲಿ 10ನೇ ಕ್ಲಾಸ್‌ ಓದಿದ್ದ 24 ಸ್ನೇಹಿತರು 35 ವರ್ಷಗಳ ಬಳಿಕ ಒಂದಾಗಿ ಚಾರ್‌ಧಾಮ ಯಾತ್ರೆ ಮಾಡಲೆಂದು ಉತ್ತರಾಖಂಡಕ್ಕೆ ತೆರಳಿದ್ದರು. ಸೋಮವಾರ ಸಂಜೆ ಗಂಗೋತ್ರಿಯಿಂದ 10 ಕಿ.ಮೀ ದೂರದಲ್ಲಿ ಪ್ರವಾಹದಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ.

ಅವರೊಂದಿಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ, ಗುಂಪು ಗಂಗೋತ್ರಿಯಿಂದ 10 ಕಿ.ಮೀ ದೂರದಲ್ಲಿ ಮರಗಳು ಬಿದ್ದು ಸಣ್ಣಪುಟ್ಟ ಭೂಕುಸಿತಗಳ ಮಧ್ಯೆ ಸಿಲುಕಿಕೊಂಡಿತ್ತು. ಅಂದಿನಿಂದ, ನಾವು ಅವರನ್ನು ಅಥವಾ ಗುಂಪಿನ ಯಾವುದೇ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅವರ ಸೆಲ್‌ಫೋನ್‌ಗಳು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರಲ್ಲೊಬ್ಬರ ಪುತ್ರ ತಿಳಿಸಿದ್ದಾರೆ.

ಉತ್ತರಕಾಶಿಯಲ್ಲಿ ರಕ್ಷಣಾ ಕಾರ್ಯ ಮುಂದುವರಿಸಿರುವ ಸೇನೆಯು ಗುರುವಾರ 70 ಜನರನ್ನು ರಕ್ಷಿಸಿದೆ. 50 ಜನ ಇನ್ನು ಪತ್ತೆಯಾಗಬೇಕಿದೆ ಎಂದು ತಿಳಿಸಿದೆ. ಈವರೆಗೆ 276 ಜನರನ್ನು ರಕ್ಷಿಸಲಾಗಿದೆ. ಮೇಘಸ್ಫೋಟದಿಂದ ತೀವ್ರವಾಗಿ ನಲುಗಿರುವ ಧರಾಲಿಯಲ್ಲಿ ರಕ್ಷಣಾ ಕಾರ್ಯಕ್ಕಾಗಿ ಅತ್ಯಾಧುನಿಕ ಉಪಕರಣಗಳನ್ನು ಏರ್‌ಲಿಫ್ಟ್‌ ಮಾಡಲು ಸೇನೆ ಸಿದ್ಧತೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಪತ್ತೆಯಾಗಿರುವ ಮಹಾರಾಷ್ಟ್ರದ ಈ ಪ್ರವಾಸಿಗರಲ್ಲಿ 76 ಮಂದಿ ಮುಂಬೈನವರು, 17 ಮಂದಿ ಛತ್ರಪತಿ ಸಂಭಾಜಿನಗರದವರು, 15 ಮಂದಿ ಪುಣೆಯವರು, 13 ಮಂದಿ ಜಲಗಾಂವ್‌ನವರು, 11 ಮಂದಿ ನಾಂದೇಡ್‌ನವರು, ಐದು ಮಂದಿ ಥಾಣೆಯವರು, ನಾಸಿಕ್ ಮತ್ತು ಸೋಲಾಪುರದ ತಲಾ ನಾಲ್ವರು, ಮಾಲೆಗಾಂವ್‌ನ ಮೂವರು ಮತ್ತು ಒಬ್ಬರು ಅಹಲ್ಯಾನಗರದವರು. ಮುಂಬೈನ 61 ಪ್ರವಾಸಿಗರು ಸುರಕ್ಷಿತವಾಗಿದ್ದು, ಪ್ರಸ್ತುತ ಹನುಮಾನ್ ಆಶ್ರಮದಲ್ಲಿದ್ದಾರೆ. 75 ಮಂದಿಯ ಫೋನ್‌ ಸ್ವಿಚ್ ಆಫ್ ಇದ್ದು, ಸಂಪರ್ಕ ಸಾಧ್ಯವಾಗುತ್ತಿಲ್ಲ.

Related Posts

Leave a Reply

Your email address will not be published. Required fields are marked *