ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಟೋಲ್ ಬಳಿ ಶುಲ್ಕ ಪಾವತಿಸದೆ ಮುಂದಕ್ಕೆ ಚಲಿಸಿದ ವಾಹನವನ್ನು ತಡೆದು ಡೋರ್ ಹಿಡಿದ ಸಿಬ್ಬಂದಿಯನ್ನು ಚಾಲಕ ಎಳೆದೊಯ್ದ ಭಯಾನಕ ಘಟನೆ ನಡೆದಿದೆ.
ವಾಹನದ ಡೋರ್ ಹಿಡಿದುಕೊಂಡ ಟೋಲ್ ಸಿಬ್ಬಂದಿಯನ್ನು ಎಳೆದುಕೊಂಡು ಚಾಲಕ ರಸ್ತೆಯಲ್ಲಿ ಮಾರಣಾಂತಿಕ ಎನಿಸುವಂಥ ರೈಡ್ ಮಾಡಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲೆಕ್ಟ್ರಾನಿಕ್ ಸಿಟಿ ಬಳಿ ಟಾಟಾ ಏಸ್ ಚಾಲಕ ಟೋಲ್ ಪಾವತಿ ಮಾಡದೆ ಮುಂದಕ್ಕೆ ಸಾಗಿದಾಗ ಸಿಬ್ಬಂದಿ ಡ್ರೈವರ್ ಬಳಿಯ ಡೋರ್ ಹಿಡಿದಿದ್ದಾರೆ. ಡೋರ್ ಹಿಡಿದಿದ್ದರೂ ಚಾಲಕ ಮುಂದಕ್ಕೆ ಚಲಿಸಿದ್ದಾನೆ. ಸಿಬ್ಬಂದಿ ಕಾಲನ್ನು ಮೇಲಕ್ಕೆ ಎತ್ತಿ ಡೋರ್ ಬಲವಾಗಿ ಹಿಡಿದು ನೇತಾಡಿದ್ದಾರೆ. ಸಿಬ್ಬಂದಿ ನೇತಾಡಿಕೊಂಡಿದ್ದರೂ ಏಸ್ ಚಾಲಕ ನಡು ರಸ್ತೆಯಲ್ಲಿ ವಾಹನ ಚಲಾಯಿಸಿದ್ದಾನೆ. ಕೊನೆಗೆ ಸಿಬ್ಬಂದಿ ಸುಸ್ತಾಗಿ ರಸ್ತೆಗೆ ಬಿದ್ದಿದ್ದಾರೆ.
ಈ ದೃಶ್ಯಗಳು ಹಿಂದೆ ಇದ್ದ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ. ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.