ಅನೈತಿಕ ಸಂಬಂಧ ಹೊಂದಿದ್ದ ವಿವಾಹಿತ ಜೋಡಿಯೊಂದು ಜಗಳವಾಡಿ ಬೆಂಕಿ ಹಚ್ಚಿಕೊಂಡು ಮೈಕೈ ಸುಟ್ಟುಕೊಂಡು ಆಸ್ಪತ್ರೆ ಸೇರಿದ ಘಟನೆ ಶಿವಮೊಗ್ಗ ನಗರದ ಖಾಸಗಿ ಲಾಡ್ಜ್‌ನಲ್ಲಿ ನಡೆದಿದೆ. ಗೀತಾ ಮತ್ತು ಗಿರೀಶ್ ಬೆಂಕಿಯಿಂದ ಮೈಕೈ ಸುಟ್ಟು ಆಸ್ಪತ್ರೆಗೆ ದಾಖಲಾದವರು.
ದಾವಣಗೆರೆಯವರಾದ ವಿವಾಹಿತೆ ಗೀತಾ ಹಾಗೂ ವಿವಾಹಿತ ಗಿರೀಶ್ ಪರಸ್ಪರ ಅನೈತಿಕ ಸಂಬಂಧ ಹೊಂದಿರುವವರು. ಗೀತಾಗೆ ಇಬ್ಬರು ಮಕ್ಕಳಿದ್ದರೆ, ಗಿರೀಶ್‌ಗೂ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಮಂಗಳವಾರ ಮಧ್ಯಾಹ್ನ ಶಿವಮೊಗ್ಗ ನಗರದ ಖಾಸಗಿ ಲಾಡ್ಜ್‌ನಲ್ಲಿ ಕೊಠಡಿ ಪಡೆದು ತಂಗಿದ್ದರು.
ಮಧ್ಯರಾತ್ರಿ ಇಬ್ಬರ ನಡುವೆ ಏನೋ ವಿಷಯಕ್ಕೆ ವಾಗ್ವಾದ ತಾರಕಕ್ಕೇರಿ ಸಿಟ್ಟಿಗೆದ್ದ ಮಹಿಳೆ ಮಹಿಳೆ ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಯ ಜ್ವಾಲೆ ಮೈಗೆ ಹೊತ್ತಿಕೊಂಡಿದೆ. ಬೆಂಕಿ ನಂದಿಸಲು ಮುಂದಾದ ಗಿರೀಶ್‌ಗೂ ಬೆಂಕಿ ತಗುಲಿ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ.
ಲಾಡ್ಜ್ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿ ನಂದಿಸಿ ಇಬ್ಬರನ್ನೂ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


