Tuesday, November 18, 2025
Menu

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಕ್ವಾಂಟಮ್‌ ಟೆಕ್ನಾಲಜಿ ರೌಂಡ್‌ಟೇಬಲ್‌: ಸಚಿವ ಎನ್‌ ಎಸ್‌ ಭೋಸರಾಜು

ಬೆಂಗಳೂರು: ನವೆಂಬರ್‌ 19 ರಂದು ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ “ಕ್ವಾಂಟಮ್‌ ಟೆಕ್ನಾಲಜಿ ರೌಂಡ್‌ ಟೇಬಲ್‌” ಆಯೋಜಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌ ಎಸ್‌ ಭೋಸರಾಜು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ನವೆಂಬರ್‌ 19 ರಂದು ಆಯೋಜಿಸಲಾಗಿರುವಂತಹ ಕ್ವಾಂಟಮ್‌ ರೌಂಡ್‌ಟೇಬಲ್‌ ನಲ್ಲಿ, ಕ್ವಾಂಟಮ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವಂತಹ ಪ್ರಮುಖ ಕಂಪನಿಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಐಟಿ&ಬಿಟಿ ಸಚಿವರಾದ ಪ್ರಿಯಾಂಕಾ ಖರ್ಗೆ, ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್‌, ಉನ್ನತ ಶಿಕ್ಷಣ ಸಚಿವರಾದ ಡಾ. ಸುಧಾಕರ್‌, ಐಐಎಸ್ಸ್‌ಸಿ, AWS, ಸ್ವಿಸ್‌ನೆಕ್ಸ್‌, QpIAI ಸೇರಿದತೆ ಪ್ರಮುಖ ತಜ್ಞರು ಭಾಗವಹಿಸಲಿದ್ದಾರೆ.

ಈ ರೌಂಡ್‌ ಟೇಬಲ್‌ ನಲ್ಲಿ “ಕ್ವಾಂಟಮ್‌ ಸಿಟಿ” ಕರ್ನಾಟಕ ರಾಜ್ಯದಲ್ಲಿ ಕ್ವಾಂಟಮ್‌ ತಂತ್ರಜ್ಞಾನದ ರೋಡ್‌ಮ್ಯಾಪ್‌ ಕುರಿತು ಚರ್ಚಿಸಲಿದ್ದಾರೆ. ಸಂಶೋಧನಾ ಕ್ಲಸ್ಟರ್‌ಗಳು, ಸ್ಟಾರ್ಟ್‌ಅಪ್‌ಗಳ ವೇಗವರ್ಧನೆ, ತಯಾರಿಕಾ ಸಾಮರ್ಥ್ಯ ಹಾಗೂ ನೈಪುಣ್ಯ ಅಭಿವೃದ್ದಿ ಪ್ರಮುಖ ವಿಷಯಗಳಾಗಿರಲಿವೆ ಎಂದಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಸಂಶೋಧನಾ ವಾತಾವರಣವಿದೆ. ಅಲ್ಲದೇ, ಕೌಶಲ್ಯ ಹೊಂದಿರುವಂತಹ ಮಾನವ ಸಂಪನ್ಮೂಲ ಹಾಗೂ ನಾವಿನ್ಯತೆಗೆ ಬೆಂಗಳೂರು ನಗರ ವಿಶ್ವದ ಭೂಪಟದಲ್ಲಿ ತನ್ನದೇ ಆದ ಸ್ಥಾನ ಹೊಂದಿದೆ. ಹಾಗೆಯೇ ಕರ್ನಾಟಕ ರಾಜ್ಯದಲ್ಲಿ ಉತ್ತಮವಾದ ಕ್ವಾಂಟಮ್‌ ಪರಿಸರವನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಷಯ ತಜ್ಞರೊಂದಿಗೆ ಚರ್ಚಿಸಲಾಗುವುದು ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *