Menu

ರಾಷ್ಟ್ರೀಯ ರೇಸಿಂಗ್ ಚಾಂಪಿಯನ್‌ಶಿಪ್: ಬೆಂಗಳೂರಿನ ಅನಿಶ್ ಶೆಟ್ಟಿ, ಧ್ರುವ್ ಗೋಸ್ವಾಮಿ ಜಯಭೇರಿ!

car race

ಕೊಯಮತ್ತೂರು, ನವೆಂಬರ್ 15: 28ನೇ FMSCI ಜೆಕೆ ಟೈರ್ ನ್ಯಾಷನಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಮತ್ತು ಅಂತಿಮ ಸುತ್ತಿನಲ್ಲಿ ಎಂ-ಸ್ಪೋರ್ಟ್‌ನ ಧ್ರುವ್ ಗೋಸ್ವಾಮಿ ಗಮನಾರ್ಹ ಜಯವನ್ನು ದಾಖಲಿಸಿದ್ದಾರೆ.

ಭಾರತದ ಅತಿ ದೀರ್ಘಕಾಲದ ಸಿಂಗಲ್-ಸೀಟರ್ ಚಾಂಪಿಯನ್‌ಶಿಪ್‌ನ ಭಾನುವಾರದ ಅಂತಿಮ ಎರಡು ರೇಸ್‌ಗಳನ್ನು ಎದುರುನೋಡುತ್ತಿರುವ ಬೆಂಗಳೂರು ಮೂಲದ 18 ವರ್ಷದ, ಸೇಂಟ್ ಜೊಸೆಫ್‌ಸ್‌ನ 12ನೇ ತರಗತಿಯ ವಿದ್ಯಾರ್ಥಿ ಗೋಸ್ವಾಮಿ ಮಾತನಾಡಿ ‘ದಿಲ್ಜಿತ್ ವಿರುದ್ಧ ಕೊನೆವರೆಗೂ ಹೋರಾಡುವ ಗುರಿಯಿದೆ. ಈ ಚಾಂಪಿಯನ್‌ಶಿಪ್ ಯಾವಾಗಲೂ ಕೊನೆಯ ರೇಸ್‌ಗೆ ಬಂದು ತೀರ್ಮಾನಗೊಳ್ಳುತ್ತದೆ ಎಂದರು.

ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಭಾಗವಾಗಿರುವ ಎಫ್‌ಐಎ–ಪ್ರಮಾಣಿತ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್‌ನ ನಾಲ್ಕನೇ ಸುತ್ತಿನ ಮೊದಲ ರೇಸ್‌ನಲ್ಲಿ ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು ತಂಡದ ಫ್ರೆಂಚ್ ಚಾಲಕ ಸಾಚೆಲ್ ರೋಟ್ಜೇ ಅದ್ಭುತ ಜಯ ದಾಖಲಿಸಿದರು. ಕೊಲ್ಕತ್ತಾ ರಾಯಲ್ ಟೈಗರ್ಸ್‌ನ ಘಾಜಿ ಮೋಟ್ಲೇಕರ್ ನಾಲ್ಕನೇ ಸ್ಥಾನದಿಂದ ಪ್ರಾರಂಭಿಸಿ ಎರಡನೇ ಸ್ಥಾನಕ್ಕೆ ಏರಿ ಗಮನ ಸೆಳೆದರು.

ಜೆಕೆ ಟೈರ್ ಪ್ರಸ್ತುತ ಪಡಿಸಿರುವ ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್‌ನಲ್ಲಿ, ಪ್ರೊಫೆಷನಲ್ ವರ್ಗದಲ್ಲಿ ಬೆಂಗಳೂರಿನ ಅನಿಶ್ ಶೆಟ್ಟಿ ಗೆಲುವು ಸಾಧಿಸಿದರು. ಈ ಬಗ್ಗೆ ಮಾತನಾಡಿದ ಅನಿಶ್ ‘ನನಗೆ ಉತ್ತಮ ಆರಂಭ ಸಿಕ್ಕಿತು, ಯಾವುದೇ ಅವಕಾಶ ಬಿಟ್ಟುಕೊಡಲಿಲ್ಲ’ ಎಂದರು.
ಕೊಯಮತ್ತೂರಿನ ಜೈ ಪ್ರಕಾಶ್ ವೆಂಕಟ್ ಹೊಸದಾಗಿ ಆರಂಭವಾದ ಜೆಕೆ ಟೈರ್ ಲೆವಿಟಾಸ್ ಕಪ್‌ನ ಎರಡನೇ ರೇಸ್‌ನಲ್ಲಿ ಮೊದಲ ಸ್ಥಾನ ಪಡೆದರು. ಭುವನ್ ಬೋನು (MSport) ಶನಿವಾರ ನಡೆದ ಭಾರತದ ಆರಂಭಿಕ ಹಂತದ ಸಿಂಗಲ್-ಸೀಟರ್ ಸರಣಿಯಾದ ಜೆಕೆ ಟೈರ್ ನೊವೀಸ್ ಕಪ್‌ನಲ್ಲಿ ಎರಡೂ ರೇಸ್‌ಗಳನ್ನು ಗೆದ್ದರು.

ಪ್ರಾಥಮಿಕ ಫಲಿತಾಂಶಗಳು:

ಲೆವಿಟಾಸ್ ಕಪ್ ರೇಸ್ 1 – ಜೆಂಟ್ಲ್‌ಮೆನ್
1.ಸಿಧಾರ್ಥ ಬಾಲಸುಂದரம் – 14:32.727
2.ಜೈ ಪ್ರಕಾಶ್ ವೆಂಕಟ್ – 14:53.680
3.ವಿನೋದ್ ಎಸ್ – 14:59.745

ಲೆವಿಟಾಸ್ ಕಪ್ ರೇಸ್ 1 – ರೂಕಿಸ್
1.ಬಾಲಾಜಿ ರಾಜು – 14:47.508
2.ತೇಜಸ್ ಜಿ ಎಸ್ – 14:52.727
3.ಅಶ್ವಿನ್ ಪುಳಗಿರಿ – 14:53.510
ಲೆವಿಟಾಸ್ ಕಪ್ ರೇಸ್ 2 – ಜೆಂಟ್ಲ್‌ಮೆನ್
1.ಜೈ ಪ್ರಕಾಶ್ ವೆಂಕಟ್ – 14:30.848
2.ಸಿಧಾರ್ಥ ಬಾಲಸುಂದரம் – 14:31.491
3.ನಿತಿನ್ ಎ ಆರ್ – 14:46.828
ಲೆವಿಟಾಸ್ ಕಪ್ ರೇಸ್ 2 – ರೂಕಿಸ್
1.ಅಕ್ಷಯ ಮೂರಳೀಧರನ್ – 14:32.046
2.ಬಾಲಾಜಿ ರಾಜು – 14:34.511
3.ತೇಜಸ್ ಜಿ ಎಸ್ – 14:46.225
ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ – ಅಮೆಚರ್ಸ್
1.ಜೋಹರಿಂಗ್ ವಾರಿಸಾ – 14:23.996
2.ಬ್ರಯಾನ್ ನಿಕೋಲಸ್ – 14:28.317
3.ಸರಣ್ ಕುಮಾರ್ – 14:38.833
ರಾಯಲ್ ಎನ್ಫೀಲ್ಡ್ ಕಾಂಟಿನೆಂಟಲ್ ಜಿಟಿ ಕಪ್ – ಪ್ರೊಫೆಷನಲ್ಸ್
1.ಅನಿಶ್ ಶೆಟ್ಟಿ – 14:02.338
2.ನವನೀತ್ ಕುಮಾರ್ – 14:02.667
3.ಕಯಾನ್ ಪಟೇಲ್ – 14:05.996
ನವೀಸ್ ಕಪ್ ರೇಸ್ 1
1.ಭುವನ್ ಬೋನು (ಎಂ-ಸ್ಪೋರ್ಟ್) – 13:57.813
2.ಲೋಕಿತ್ಲಿಂಗೇಶ್ ರವಿ (ಡಿಟಿಎಸ್ ರೇಸಿಂಗ್) – 13:59.863
3.ಅಭಿಜಿತ್ ವಡವಳ್ಳಿ (ಮೊಮೆಂಟಮ್ ಮೋಟೋರ್ಸ್‌ಪೋರ್ಟ್ಸ್) – 14:00.429
ನವೀಸ್ ಕಪ್ ರೇಸ್ 2
1.ಭುವನ್ ಬೋನು (ಎಂ-ಸ್ಪೋರ್ಟ್) – 14:07.700
2.ಅವಿ ಮಲವಳ್ಳಿ (ಎಂ-ಸ್ಪೋರ್ಟ್) – 14:09.755
3.ಒಜಾಸ್ ಸರ್ವೆ (ಮೊಮೆಂಟಮ್ ಮೋಟೋರ್ಸ್‌ಪೋರ್ಟ್ಸ್) – 14:12.130
ಎಲ್‌ಜಿಬಿ ಎಫ್4 ರೇಸ್ 1
1.ಧೃವ್ ಗೋಸ್ವಾಮಿ (ಎಂ-ಸ್ಪೋರ್ಟ್) – 19:58.578
2.ರೂಹಾನ್ ಅಲ್ವಾ (ಎಂ-ಸ್ಪೋರ್ಟ್) – 19:59.261
3.ದಿಲ್ಜಿತ್ ಟಿ ಎಸ್ (ಡಾರ್ಕ್ ಡಾನ್ ರೇಸಿಂಗ್) – 20:00.012
ಎಲ್‌ಜಿಬಿ ಎಫ್4 ರೇಸ್ 2
1.ಮೆಹುಲ್ ಅಗರವಾಲ್ (ಡಾರ್ಕ್ ಡಾನ್ ರೇಸಿಂಗ್) – 24:20.393
2.ಧೃವ್ ಗೋಸ್ವಾಮಿ (ಎಂ-ಸ್ಪೋರ್ಟ್) – 24:20.551
3.ರೂಹಾನ್ ಅಲ್ವಾ (ಎಂ-ಸ್ಪೋರ್ಟ್) – 24:20.812
ಫಾರ್ಮುಲಾ 4 ಇಂಡಿಯನ್ ರೇಸಿಂಗ್ ಚಾಂಪಿಯನ್‌ಶಿಪ್ ರೇಸ್ 1
1.ಸಾಚೆಲ್ ರೋಟ್ಜೇ (ಕಿಚ್ಚಾ’ಸ್ ಕಿಂಗ್ಸ್ ಬೆಂಗಳೂರು) – 26:50.931
2.ಘಾಜಿ ಮೋಟ್ಲೇಕರ್ (ಕೊಲ್ಕತ್ತಾ ರಾಯಲ್ ಟೈಗರ್ಸ್) – 26:56.59

Related Posts

Leave a Reply

Your email address will not be published. Required fields are marked *