ಬೆಂಗಳೂರಿನ ಬ್ಯಾಡರಹಳ್ಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆಕೋರರು ಯುವಕನನ್ನು ಹತ್ಯೆ ಮಾಡಿದ್ದು. ಕುಟುಂಬದವರು ಪೊಲೀಸ್ ಠಾಣೆ ಎದುರು ಶವವಿರಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ತಡರಾತ್ರಿ ಬ್ಯಾಡರಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯ ಕಾರ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್ ಎಂಬ ಯುವಕನ ಅಡ್ಡ ಗಟ್ಟಿದ ಮದ್ಯಪಾನ ಮಾಡಿದ್ದ ದರೋಡೆಕೋರರು ಸುಲಿಗೆಗೆ ಮುಂದಾಗಿ ಚಾಕುವಿನಿಂದ ಇರಿದು ದುಡ್ಡು ಕೇಳಿದ್ದಾರೆ.
ಊಟ ಮಾಡಿ ಮನೆಗೆ ಹೋಗುತ್ತಿದ್ದ ಪ್ರೇಮ್ ಮೇಲೆ ಹತ್ತು ಜನ ಚಾಕುವಿನಿಂದ ಚುಚ್ಚಿದ್ದಾರೆ, ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಠಾಣೆ ಮುಂದೆ ಮೃತದೇಹ ಇಟ್ಟು ಪೋಲಿಸರು ಸರಿಯಾದ ಕ್ರಮ ತೆಗೆದುಕೊಂಡಿಲ್ಲವೆಂದು ಪೋಷಕರು ಆರೋಪಿಸಿದ್ದಾರೆ.
ಬ್ಯಾಡರಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.