Menu

ಹಣವಿದ್ದ ಬ್ಯಾಗ್ ಮರಳಿಸಿದ ಬೆಂಗಳೂರಿನ ಆಟೊ ಚಾಲಕ

ಬೆಂಗಳೂರಿನ ಆಟೋದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಹಣವಿದ್ದ ಬ್ಯಾಗ್ ಅನ್ನು ಚಾಲಕ ಅವರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕಲಬುರಗಿ ಮೂಲದ ಆಟೋ ಚಾಲಕ ರಾಜು ಎಂಬವರು ತಮ್ಮ ಆಟೋದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋಗಿದ್ದ ಹಣದ ಬ್ಯಾಗ್ ಮರಳಿಸಿದ್ದಾರೆ.

ಇದೇ ಶನಿವಾರ ಮತ್ತು ಭಾನುವಾರ ಮಗಳ ಮದುವೆ ಇತ್ತು. ಹೀಗಾಗಿ ಮದುವೆ ಛತ್ರಕ್ಕೆ ಹಣ ಕಟ್ಟಲು ಬ್ಯಾಗ್ ನಲ್ಲಿ ಹಣ ತರಲಾಗಿತ್ತು. ಆದರೆ ಆಟೋ ಇಳಿಯುವಾಗ ಪರಯಾಣಿಕ ಆತುರದಲ್ಲಿ ಹಣದ ಬ್ಯಾಗ್‌ ಬಿಟ್ಟು ಹೋಗಿದ್ದರು. ಬಳಿಕ ಆಟೋ ಚಾಲಕ ರಾಜು ಇದನ್ನು ಗಮನಿಸಿದ್ದಾರೆ.

ಸ್ನೇಹಿತರೊಂದಿಗೆ ಸೇರಿ ಬ್ಯಾಗ್ ನಲ್ಲಿದ್ದ ದಾಖಲೆಗಳಲ್ಲಿದ್ದ ಮೊಬೈಲ್ ನಂಬರ್ ಮೂಲಕ ಪ್ರಯಾಣಿಕರನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪ್ರಯಾಣಿಕ ಚಾಲಕರಿಂದ ಹಣ ಪಡೆದುಕೊಂಡು ನಡೆದ ವಿಚಾರ ತಿಳಿಸಿ ಕೃತಜ್ಷತೆ ಸಲ್ಲಿಸಿದ್ದಾರೆ.

ಇದೇ ಶನಿವಾರ ಭಾನುವಾರ ಮದುವೆ ಇತ್ತು. ಹೀಗಾಗಿ ಮದುವೆ ಖರ್ಚಿಗಾಗಿ ಬ್ಯಾಂಕ್ ನಿಂದ ಹಣ ಡ್ರಾ ಮಾಡಿ ಬ್ಯಾಗ್ ನಲ್ಲಿ ತಂದಿದ್ದೆ. ಛತ್ರಕ್ಕೆ ಹಣ ಕಟ್ಟಲು ಹೋಗಬೇಕಾದರೆ ಆಟೋದಲ್ಲೇ ಹಣದ ಬ್ಯಾಗ್ ಮರೆತು ಹೋಗಿದ್ದೆ ಎಂದು ಹೇಳಿದ್ದಾರೆ. ಆಟೋ ಚಾಲಕನ ಪ್ರಾಮಾಣಿಕತೆಯನ್ನು ಮನಸಾರೆ ಹೊಗಳಿ ಬಲವಂತವಾಗಿ ಸ್ವಲ್ಪ ಹಣ ನೀಡಿ ಧನ್ಯವಾದ ಹೇಳಿದ್ದು, ಈ ವೀಡಿಯೊ ವ್ಯಾಪಕ ವೈರಲ್ ಆಗುತ್ತಿದೆ.

Related Posts

Leave a Reply

Your email address will not be published. Required fields are marked *