ಓವಲ್: ಮಧ್ಯಮ ವೇಗಿ ಮೊಹಮದ್ ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಗೆಲುವಿನ ಹೊಸ್ತಿಲಲ್ಲಿ ಎಡವಿದರೆ, ಸೋಲಿನ ದವಡೆಯಲ್ಲಿದ್ದ ಭಾರತ 6 ರನ್ ರೋಚಕ ಜಯ ಸಾಧಿಸಿ ಸಂಭ್ರಮಿಸಿದೆ.
ಸಿರಾಜ್ 5 ವಿಕೆಟ್ ಗೊಂಚಲು ಪಡೆಯುವ ಮೂಲಕ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 6 ರನ್ ರೋಚಕ ತಂದುಕೊಟ್ಟರು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿ 1-1ರಿಂದ ಸಮಬಲದಲ್ಲಿ ಅಂತ್ಯಗೊಂಡಿದೆ.
ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 374 ರನ್ ಗಳ ಗುರಿ ಬೆಂಬತ್ತಿದ ಇಂಗ್ಲೆಂಡ್ 5ನೇ ಹಾಗೂ ಅಂತಿಮ ದಿನವಾದ ಸೋಮವಾರ 6 ವಿಕೆಟ್ ಗೆ 339 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ್ದು, ಭೋಜನ ವಿರಾಮಕ್ಕೂ ಮುನ್ನವೇ 367 ರನ್ ಗೆ ಆಲೌಟಾಯಿತು.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2ರಿಂದ ಹಿನ್ನಡೆ ಅನುಭವಿಸಿದ್ದ ಭಾರತಕ್ಕೆ ಸರಣಿಯಲ್ಲಿ ಸಮಬಲ ಸಾಧಿಸಿದರೆ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಅಲ್ಲದೇ ಮೊದಲ ಇನಿಂಗ್ಸ್ ನಲ್ಲಿ ಹಿನ್ನಡೆ ಅನುಭವಿಸಿತ್ತು. ಈ ಎಲ್ಲಾ ಒತ್ತಡಗಳನ್ನು ಮೆಟ್ಟಿ ನಿಂತ ಭಾರತ ರೋಚಕ ಜಯ ಸಾಧಿಸಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ರನ್ ಅಂತರದಲ್ಲಿ ಗೆದ್ದ ದಾಖಲೆ ಬರೆಯಿತು.
ಕೊನೆಯ ದಿನದಾಟದಲ್ಲಿ 36 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 30 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿತು.
ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಶತಕ ಬಾರಿಸಿ ನಡೆಸಿದ ಹೋರಾಟ ವ್ಯರ್ಥಗೊಂಡಿತು. ರೂಟ್ 152 ಎಸೆತಗಳಲ್ಲಿ 12 ಬೌಂಡರಿ ಸಹಾಯದಿಂದ 1105 ರನ್ ಬಾರಿಸಿದರೆ, ಬ್ರೂಕ್ 98 ಎಸೆತಗಳಲ್ಲಿ 14 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 111 ರನ್ ಗಳಿಸಿದರು. ಇವರಿಬ್ಬರು 4ನೇ ವಿಕೆಟ್ ಗೆ 195 ರನ್ ಜೊತೆಯಾಟ ನಿಭಾಯಿಸಿದ್ದರು.
ಮೊಹಮದ್ ಸಿರಾಜ್ 5 ವಿಕೆಟ್ ಪಡೆದು ಪಂದ್ಯ ಹೀರೋ ಎನಿಸಿಕೊಂಡರು. ಕರ್ನಾಟಕದ ಪ್ರಸಿದ್ಧ ಕೃಷ್ಣ 4 ಹಾಗೂ ಅಕ್ಷ್ ದೀಪ್ 1 ವಿಕೆಟ್ ಕಬಳಿಸಿದರು.