ನಟ ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡು ನಟಿ ರಮ್ಯಾ ಅವರಿಗೆ ಫೇಕ್ ಅಕೌಂಟ್ಗಳಿಂದ ಅಶ್ಲೀಲ ಮೆಸೇಜ್ ಕಳುಹಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ನಾಲ್ವರನ್ನು ಬಂಧಿಸಿದ್ದಾರೆ.
ಈ ವಿಚಾರದ ಬಗ್ಗೆ ರಮ್ಯಾ ಅವರು ಪೊಲೀಸ್ ಕಮಿಷನರ್ ಬಳಿ ಹೋಗಿ ದೂರು ನೀಡಿದ್ದರು. ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಮೊನ್ನೆಯೇ ಮೂವರು ಕಿಡಿಗೇಡಿಗಳನ್ನು ಬಂಧಿಸಿದ್ದರು. ಈಗ ಮತ್ತೆ 4 ಜನರ ಬಂಧನವಾಗಿದೆ.
ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 12 ಜನರ ಮಾಹಿತಿಯನ್ನು ಇನ್ಸ್ಟಾಗ್ರಾಂ ಸಂಸ್ಥೆ ಪೊಲೀಸರಿಗೆ ನೀಡಿದೆ. ಇನ್ನುಳಿದ ಆರೋಪಿಗಳಲ್ಲಿ ಕೆಲವರು ಪೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ಆರೋಪಿಗಳಲ್ಲಿ ಕಡೂರು ನಿವಾಸಿ ಆರೋಪಿ ರಾಜೇಶ್ ಅತಿ ಹೆಚ್ಚು ಅಶ್ಲೀಲ ಮೆಸೇಜ್ ಮಾಡಿದ್ದಾನೆ. ತನ್ನದೇ ಖಾಸಗಿ ಅಂಗಾಂಗಗಳನ್ನು ಫೋಟೊ ವೀಡಿಯೊ ಮಾಡಿ ರಮ್ಯಾಗೆ ಕಳಿಸಿದ್ದ.
ರಾಜೇಶ್, ಓಬಣ್ಣ ಟಿ, ಭುವನ್ ಗೌಡ, ಗಂಗಾಧರ್ ಅರೆಸ್ಟ್ ಆಗಿದ್ದು, ಎಲ್ಲರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ 30 ಜನರ ಮೇಲೆ ದೂರು ದಾಖಲಾಗಿದೆ ಎನ್ನಲಾಗುತ್ತಿದೆ.