ಮತ ಕಳ್ಳತನ ವಿರೋಧಿಸಿ ನಗರದಲ್ಲಿ ರಾಹುಲ್‌ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ನಡೆಯಲಿರುವ ಪ್ರತಿಭಟನೆಗಾಗಿ ಅನುಮತಿ ಇಲ್ಲದೆ ಫ್ರೀಡಂ ಪಾರ್ಕ್‌ನಲ್ಲಿದ್ದ ಮರ ಕತ್ತರಿಸಿರುವ ಉಪ್ಪಾರಪೇಟೆ ಪೊಲೀಸರ ವಿರುದ್ಧ ಬಿಬಿಎಂಪಿ ಎಫ್‌ಐಆರ್ ದಾಖಲಿಸಿದೆ.
ಮರ ಕಡಿದಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ಉಪ್ಪಾರಪೇಟೆ ಪೇದೆ ಮಹದೇವಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆ.5 ರಂದು ನೆಯಲಿರುವ ಪ್ರತಿಭಟನೆಗಾಗಿ ಫ್ರೀಡಂ ಪಾರ್ಕ್‌ನ ಕಾಂಪೌಂಡ್ ಒಡೆದು, ಕೆಲವು ಮರ ಕಡಿದು ರಸ್ತೆ ನಿರ್ಮಾಣ ಮಾಡಲು ಪೊಲೀಸರು ಮುಂದಾಗಿದ್ದರು.
ರಾಜಕಾರಣಿಗಳ ಸಲುವಾಗಿ ಮರಗಳ ಬುಡಕ್ಕೆ ಕೊಡಲಿ ಇಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪ್ರತಿಭಟನೆಯಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರು ಭಾಗಿಯಾಗುತ್ತಿದ್ದಾರೆ.
ಈ ಪ್ರತಿಭಟನೆಗೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಬರುತ್ತಿದ್ದಾರೆ. ಹಾಗಾಗಿ ಪ್ರತಿಭಟನೆಗೆ ಹೆಚ್ಚಿನ ಜಾಗದ ಅವಶ್ಯಕತೆ ಇರುವುದನ್ನು ಮನಗಂಡು ಮರ ಕಡಿದು ಜಾಗ ವಿಸ್ತರಣೆ ಮಾಡಲಾಗುತ್ತಿದೆ.