Menu

ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಸಿಎಂ ಕ್ಯಾತೆ ಅಸಮಂಜಸ: ಬೊಮ್ಮಾಯಿ

basavaraj bommai

ಹಾವೇರಿ: ಆಲಮಟ್ಟಿ ಆಣೆಕಟ್ಟು ಹೆಚ್ಚಳ ಮಾಡುವುದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಕ್ಯಾತೆ ತೆಗೆಯುವುದು ಅಸಮಂಜಸ. ಇದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಾವೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರದ ಸಾಂಗ್ಲಿ ಮತ್ತು ಇತರ ಪ್ರದೇಶಗಳಲ್ಲಿ ಯಾವುದೇ ಪ್ರವಾಹದ ಸಮಸ್ಯೆ ಇಲ್ಲ ಎಂದು ಈಗಾಗಲೇ ನ್ಯಾಯಮಂಡಳಿ ಆದೇಶ ಇದೆ. ಈಗ ಮಹಾರಾಷ್ಟ್ರದವರು ಎತ್ತುವ ಸಮಸ್ಯೆ ಅನವಶ್ಯಕ. ಕರ್ನಾಟಕದಲ್ಲಿಯೂ ಪ್ರವಾಹ ಆದಾಗ ನಮ್ಮ ಸರ್ಕಾರ ನೋಡಿಕೊಳ್ಳುತ್ತದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾದರೆ ಮಹಾರಾಷ್ಟ್ರ ಸರ್ಕಾರ ನೋಡಿಕೊಳ್ಳಬೇಕು. ಆಲಮಟ್ಟಿ ಡ್ಯಾಂ ಆಗುವ ಮೊದಲೇ ಸಾಂಗ್ಲಿಯಲ್ಲಿ ಪ್ರವಾಹ ಆಗಿತ್ತು. 2005 ರಲ್ಲಿ ದೊಡ್ಡ ಪ್ರಮಾಣದ ಪ್ರವಾಹ ಆಯಿತು. ಆಗ ಕೇಂದ್ರದ ಸಿಡಬ್ಲ್ಯುಸಿ ತಂಡ ಬಂದು ಆಲಮಟ್ಟಿ ಆಣೆಕಟ್ಟಿಗೂ ಪ್ರವಾಹಕ್ಕೂ ಸಂಬಂಧ ಇಲ್ಲ ಎಂದು ವರದಿ ಕೊಟ್ಟಿತು. ಹೀಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಕ್ಯಾತೆ ತೆಗೆಯುವುದು ಅಸಮಂಜಸ ಇದು ಸರಿಯಲ್ಲ ಎಂದು ಹೇಳಿದರು.

ನದಿ ಜೋಡಣೆಯ ಬಗ್ಗೆ ಜನಜಾಗೃತಿಯನ್ನು ಮಾಡಿರುವಂತದು ನಮ್ಮ ಹಿಂದಿನ ಪಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ಅದರಲ್ಲಿ ಎರಡು ವಿಭಾಗದಲ್ಲಿ ವಿಂಗಡನೆ ಆಯಿತು. ಹಿಮಾಲಯನ್ ನದಿ ಜೋಡಣೆ ಅಂದರೆ ಉತ್ತರದ ನದಿಗಳು, ಮತ್ತೆ ವಿಂದ್ಯ ಪರ್ವತದ ಕೆಳಗೆ ಇರುವ ನದಿ ಜೋಡಣೆ. ನಮಗೆ ಸಂಬಂಧಿಸಿರುವ ಬೆಡ್ತಿ ವರದಾ ನದಿ ಜೋಡಣೆಗೆ ಎನ್‌ಡಬುಡಿಎ ವತಿಯಿಂದ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಇದರದೇ ಆದ ಸವಾಲುಗಳಿದ್ದವು ನಾವು ಮೊದಲನೇ ಪ್ರಸ್ತಾವನೆಯನ್ನು ಜಾರಿಗೆ ತರಲು ಹೋದಾಗ ಪರಿಸರದ ಮೇಲೆ ಪರಿಣಾಮ ಆಗುತ್ತದೆ ಎಂದು ಅದನ್ನು ಮಾರ್ಪಾಡು ಮಾಡಿ ನಾನು ಸಿಎಂ ಆಗಿದ್ದಾಗ ಎನ್ ಡಬ್ಲ್ಯುಡಿಎ ಕಳುಹಿಸಿದ್ದೇವು. ಅದರಲ್ಲಿ ಕೆಲವು ಮಾರ್ಪಾಡಲು ಮಾಡಲು ಅವರು ಕಳುಹಿಸಿದ್ದಾರೆ. ಯಾವುದೇ ಪರಿಸರ ಮತ್ತು ಜೈವಿಕ ಹಾನಿಯಾಗದಂತೆ ಲಿಂಕ್ ಮುಖಾಂತರ ಮಾಡುವಂತಹ ಯೋಜನೆ ಇದಾಗಿದೆ. ಎರಡು ಲಿಂಕ್‌ನಲ್ಲಿ ಈ ಯೋಜನೆ ಆಗುತ್ತದೆ. ಬೆಡ್ತಿ ವರದಾ ನ್ಯಾಷನಲ್ ಪ್ರಾಸ್ಪೆಕ್ಟಿವ್ ಪ್ಲಾನ್ ಮತ್ತು ಇನ್ನೊಂದು ಬೆಡ್ತಿ ಧರ್ಮಾ ವರದಾ ಲಿಂಕ್ ಮೂಲಕ ಜೋಡಣೆ ಮಾಡುವುದು. ಎರಡು ಲಿಂಕ್‌ಗಳ ಮೂಲಕ ಯೋಜನೆ ಮಾಡಲು ಎಂಜನೀಯರ್‌ಗಳು ಯೋಜನೆ ರೂಪಿಸಿದ್ದಾರೆ ಎಂದರು.

ಹೊಸ ಡಿಪಿಆರ್

ಈಗಾಗಲೇ ಅವತ್ತಿನ ಯೋಜನೆ ಪ್ರಕಾರ 1995 ರಲ್ಲಿ ಒಂದು ರೂಪರೇಷೆ ಆಗಿತ್ತು. ಅದಾದ ಮೇಲೆ 2008-09-10 ರಲ್ಲಿ ಜಾರಿ ಮಾಡಲು ಹೋದಾಗ ವಿರೋಧ ವ್ಯಕ್ತವಾಯಿತು. ಅದನ್ನು ಮಾರ್ಪಾಡು ಮಾಡಿ 2017 ರಲ್ಲಿ ಯೋಜನೆ ತಯಾರಿಸಿ ನಾನು ಮುಖ್ಯಮಂತಿಯಾಗಿದ್ದಾಗ 2022 ರಲ್ಲಿ ಡಿಪಿಆರ್ ಕಳುಹಿಸಲಾಗಿತ್ತು. ಈಗಾಗಲೇ ಒಂದು ಡಿವಿಆರ್ ಇದೆ. ಈಗ ಎನ್‌ಡಬ್ಲ್ಯುಎದವರು ಏನು ಸಲಹೆ ಕೊಡುತ್ತಾರೆ ಅದರ ಆಧಾರದ ಮೇಲೆ ಹೊಸ ಡಿಪಿಆರ್ ಮಾಡಬೇಕು. ಮೊದಲಿನ ಯೋಜನೆಯಲ್ಲಿ ಪರಿಸರ ಹಾನಿಯಾಗುತ್ತಿತ್ತು. ಈಗಿನ ಯೋಜನೆಯಲ್ಲಿ ಯಾವುದೇ ಪರಿಸರ ಹಾನಿಯಾಗುವುದಿಲ್ಲ. ಈ ಬಗ್ಗೆ ನಾವು ಚರ್ಚೆ ಮಾಡಲು ಸಿದ್ಧರಿದ್ದೇವೆ ಎಂದರು.

ನಮ್ಮ ರಾಜ್ಯದಲ್ಲಿ ಬಹುತೇಕ ನದಿಗಳು ಪಶ್ಚಿಮ ಘಟ್ಟದಲ್ಲಿ ಹುಟ್ಟುತ್ತವೆ. ಕೃಷ್ಣಾ, ಘಟಪ್ರಭಾ, ತುಂಗಭದ್ರಾ ಸೇರಿ ಹಲವಾರು ನದಿಗಳು ಪಶ್ಚಿಮದಲ್ಲಿ ಹುಟ್ಟು ಪೂರ್ವಕ್ಕೆ ಹರಿಯುತ್ತವೆ. ಕೆಲವು ನದಿಗಳು ಪಶ್ಚಿಮದಲ್ಲಿಯೇ ಹುಟ್ಟಿ ಅರಬ್ಬಿ ಸಮುದ್ರ ಸೇರುತ್ತವೆ. ಹೀಗಾಗಿ ಪಶ್ಚಿಮ ಘಟ್ಟದಲ್ಲಿಯೇ ಹುಟ್ಟಿ ಸಮುದ್ರ ಸೇರುವ ನೀರನ್ನು ಬಳಕೆ ಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅದನ್ನು ಬಳಕೆ ಮಾಡಿಕೊಳ್ಳಬೇಕಿದೆ. ತುಂಗಭದ್ರಾ ಅತಿ ಹೆಚ್ಚು ಜಲಾನಯನ ಪ್ರದೇಶ ಹೊಂದಿದೆ. ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಈವೆಲ್ಲ ಯೋಜನೆಗಳು ಬರುತ್ತವೆ. ಸಾವಿರಾರು ಹಳ್ಳಿ ಮತ್ತು ನಗರ ಪ್ರದೇಶಗಳಿಗೆ ಕುಡಿಯೋ ನೀರು ಕೊಡುವ ತುಂಗ ಭದ್ರಾಗೆ ಸಮಸ್ಯೆಯಾಗುತ್ತದೆ ಅದನ್ನು ಸರಿದೂಗಿಸಿದರೆ ಕುಡಿಯುವ ನೀರು, ರೈತರಿಗೆ ಕೃಷಿಗೆ ನೀರು ದೊರೆಯುತ್ತದೆ. ಈ ಯೋಜನೆ ಬದಲಾವಣೆ ಮಾಡಿದರೆ ಯಾವುದೇ ಮುಳುಗಡೆ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಗೊಬ್ಬರ ಸಮರ್ಪಕ ಸರಬರಾಜಾಗಲಿ

ರಾಜ್ಯದಲ್ಲಿ ಒಟ್ಟು ಒಪನಿಂಗ್ ಸ್ಟಾಕ್ 1.7 ಲಕ್ಷ ಟನ್‌ ಮತ್ತು ಈಗ 5.74 ಲಕ್ಷ ಟನ್ ಸೇರಿ ಒಟ್ಟು 7.5 ಲಕ್ಷ ಟನ್‌ಗಿಂತ ಹೆಚ್ಚು ಸರಬರಾಜಾಗಿದೆ. ಕೇಂದ್ರದಿಂದ ಸುಮಾರು 8 ಲಕ್ಷಕ್ಕಿಂತ ಹೆಚ್ಚು ಟನ್ ಸರಬರಾಜಾಗಿದೆ. ರಾಜ್ಯದಲ್ಲಿ ಯೂರಿಯಾ ಗೊಬ್ಬರ ವಿತರಣೆಯಲ್ಲಿ ಗೊಂದಲ ಉಂಟಾಗಿದೆ. ಯಾವ ಜಿಲ್ಲೆಯಲ್ಲಿ ಎಷ್ಟು ಬೇಡಿಕೆ ಇದೆ ಎಂದು ಅಂದಾಜು ಮಾಡಲಿಲ್ಲ. ಯಾವಾಗ ಗೊಬ್ಬರದ ಕೊರತೆ ಗೊಂದಲ ಶುರುವಾಯಿತು ಆಗ ಕಾಳ ಸಂತೆಯಲ್ಲಿ ಮಾರಾಟ ಹೆಚ್ಚಾಯಿತು. ಇದರಲ್ಲಿ ಕೃಷಿ ಇಲಾಖೆ
ಅಧಿಕಾರಿಗಳು ಸೇರಿಕೊಂಡಿದ್ದಾರೆ. ಬಡ ರೈತರಿಗೆ ಗೊಬ್ಬರ ಸಿಗುತ್ತಿಲ್ಲ. ಸರತಿಯಲ್ಲಿ ಯಾವುದೇ ಶೀಮಂತ ಅವರು ಇಲ್ಲ. ಈಗಾಗಲೇ ರಾಜ್ಯದಲ್ಲಿ 15 ಲಕ್ಷ ಟನ್ ಸ್ಟಾಕ್ ಇದೆ. 1.5 ಲಕ್ಷ ಟನ್ ಗೊಬ್ಬರ ಬರುತ್ತದೆ ಅದನ್ನು ಸರಿಯಾಗಿ ವಿತರಣೆ ಮಾಡಬೇಕು ಎಂದರು.

ರಾಜ್ಯ ಸರ್ಕಾರ ಪತ್ರ ಬರೆದ ನಂತರ ಗೊಬ್ಬರ ಸರಬರಾಜಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪತ್ರ ಬರೆದ ನಂತರ ಗೊಬ್ಬರ ಸರಬರಾಜಾಗಿದೆ ಎಂದಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೂರಿಯಾ ಗೊಬ್ಬರಕ್ಕೆ ಬಹಳಷ್ಟು ತೊಂದರೆ ಇದೆ. ಮೂರು ಬಾರಿ ಕೇಂದ್ರ ಟೆಂಡ‌ರ್ ಕರೆದರೂ ಯಾರೂ ಮುಂದೆ ಬಂದಿಲ್ಲ. ಯೂರಿಯಾ ಕೊರತೆಯ ನಡುವೆಯೂ ಕೇಂದ್ರ ಸರ್ಕಾರ ಸರಬರಾಜು ಮಾಡುತ್ತಿದೆ. ರಾಜ್ಯ ಸರ್ಕಾರ ಇದನ್ನು ಅರ್ಥ ಮಾಡಿಕೊಂಡು ಸಮರ್ಪಕವಾಗಿ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *