Thursday, November 13, 2025
Menu

2027ರ ವೇಳೆಗೆ ದೇಶದಲ್ಲಿ ಶೇ.50 ರಷ್ಟು ಸೇವಾ ಪ್ರಕರಣ ಎಐ ಪರಿಹಾರ ನಿರೀಕ್ಷೆ: ಸೇಲ್ಸ್ ಫೋರ್ಸ್ ರಿಸರ್ಚ್

ai servie

ಬೆಂಗಳೂರು: ವಿಶ್ವದ ಅಗ್ರಮಾನ್ಯ #1 AI CRM* ಸಂಸ್ಥೆಯಾದ ಸೇಲ್ಸ್‌ಫರ್ಸ್ ಸ್ಟೇಟ್‌ ಆಫ್‌ ರ‍್ವೀಸ್‌  ವರದಿಯ ಫಲಿತಾಂಶಗಳನ್ನು ಪ್ರಕಟಿಸಿದೆ. ಈ ವರದಿ ಪ್ರಕಾರ, ಎಐ ಮುಂದೆ ಕೇವಲ ದಿನನಿತ್ಯದ ಕೆಲಸಗಳನ್ನು ಸ್ವಯಂಚಾಲಿತಗೊಳಿಸುತ್ತಿಲ್ಲ ಎಂದು ಬಹಿರಂಗ ಪಡಿಸಿದೆ.  ಸೇವಾ ತಂಡಗಳು ಹೇಗೆ ಕೆಲಸ ಮಾಡುತ್ತವೆ, ಬೆಳೆಯುತ್ತವೆ ಮತ್ತು ಗ್ರಾಹಕ ಅನುಭವವನ್ನು ಹೇಗೆ ಒದಗಿಸುತ್ತವೆ ಎಂಬುದನ್ನು ಇದು ಪರಿಹರಿಸುತ್ತದೆ.

ಸೇವಾ ತಂಡಗಳು ವೇಗ, ವೆಚ್ಚ ಮತ್ತು ಗ್ರಾಹಕರ ತೃಪ್ತಿಯಲ್ಲಿ ಸುಧಾರಣೆಗಾಗಿ ಕಣ್ಣಿಟ್ಟಿದ್ದರಿಂದ ಎಐ ಅತ್ಯಂತ ಪ್ರಾಮುಖ್ಯತೆಯ ವಿಷಯವಾಗಿ ಹೊರಹೊಮ್ಮಿದೆ

ಭಾರತೀಯ ಸೇವಾ ನಾಯಕರ ಪ್ರಾಮುಖ್ಯತಾ ಪಟ್ಟಿಯಲ್ಲಿ ಎಐ ಕೇವಲ ಒಂದು ರ‍್ಷದಲ್ಲಿ 7 ರಿಂದ  2 ನೇ ಸ್ಥಾನಕ್ಕೆ ಏರಿದೆ. ಆದರೆ ಬದಲಾಗದ ಸಂಗತಿಯೆಂದರೆ ಭಾರತೀಯ ಸೇವಾ ನಾಯಕರ ಪ್ರಮುಖ ಕೇಂದ್ರೀಕೃತ ಉದ್ದೇಶ: ಗ್ರಾಹಕರ ಅನುಭವವನ್ನು ಉತ್ತಮಗೊಳಿಸುವುದು.

ಬದಲಾವಣೆ ಈಗಾಗಲೇ ಆರಂಭವಾಗಿದೆ:

ಭಾರತೀಯ ಸೇವಾ ತಂಡಗಳ ಅಂದಾಜು ಪ್ರಕಾರ, ಪ್ರಸ್ತುತ ಸುಮಾರು ಶೇ.30 ಪ್ರಕರಣಗಳನ್ನುಎಐ ನರ‍್ವಹಿಸುತ್ತಿದೆ. 2027ರ ವೇಳೆಗೆ, ಎಐ ಏಜೆಂಟರು ಅಥವಾ ಡಿಜಿಟಲ್‌ ಲೇಬರ್‌ ವೇಗ ಪಡೆಯುತ್ತಿದ್ದಂತೆ, ಈ ಪ್ರಮಾಣವು ಶೇ.50 ತಲುಪಲಿದೆ ಎಂದು ಅವರು ನಿರೀಕ್ಷಿಸುತ್ತಿದ್ದಾರೆ. ಈ ಪರಿರ‍್ತನೆ ಏಜೆಂಟಿಕ್‌ ಎನ್ರ‍್ಪ್ರೈಸ್‌  ಎಂಬ ಹೊಸ ಯುಗದ ಉದಯವನ್ನು ಸೂಚಿಸುತ್ತದೆ  ಇಲ್ಲಿಎಐ ಏಜೆಂಟರು ಮಾನವ ತಂಡಗಳ ಜೊತೆಯಲ್ಲಿ ಸಹಯೋಗದ ಪಾಲುದಾರರಾಗಿ ಕೆಲಸ ಮಾಡುತ್ತಾರೆ, ಸಾಮಾನ್ಯ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸುತ್ತಾರೆ ಮತ್ತು ನೌಕರರು ಹೆಚ್ಚು ಕಠಿಣ ಹಾಗೂ ಮೌಲ್ಯಯುತ ಕರ‍್ಯಗಳಿಗೆ ಗಮನ ಕೊಡುತ್ತಾರೆ.

ಹೆಚ್ಚಿನ ಪ್ರಕರಣಗಳನ್ನು ಪರಿಹರಿಸುವುದರ ಹೊರತಾಗಿ, ಸೇವಾ ವೆಚ್ಚವನ್ನು ಕಡಿತಗೊಳಿಸುವುದರಿಂದ ಕಸ್ಟಮರ್‌ ಸಾಟಿಸ್ಫ್ಯಾಕ್ಶನ್‌ ಅನ್ನು ಸುಧಾರಿಸುವವರೆಗೆ ತಮ್ಮ ಪ್ರಭಾವವನ್ನು ಹೆಚ್ಚಿಸಲು ತಂಡಗಳು ಎಐ ಏಜೆಂಟರ ಮೇಲೆ ಬಾಜಿ ಕಟ್ಟುತ್ತಿವೆ. ಏಜೆಂಟಿಕ್‌ ಎಐ ಅಪ್ ಸೆಲ್ ಆದಾಯವನ್ನು ಶೇ.16ರಷ್ಟು ಹೆಚ್ಚಿಸುತ್ತದೆ ಎಂದು ಭಾರತೀಯ ಸೇವಾ ವೃತ್ತಿಪರರು ಅಂದಾಜಿಸಿದ್ದಾರೆ.

ಎಐ ಹೊಂದಿರುವ ಪ್ರತಿನಿಧಿಗಳು ಕಡಿಮೆ ರೂಟಿನ್ ಕೆಲಸ, ಹೆಚ್ಚಿನ ಬೆಳವಣಿಗೆಯ ಅವಕಾಶಗಳು ಮತ್ತು ಪ್ರಕಾಶಮಾನವಾದ ವೃತ್ತಿಜೀವನದ ದೃಷ್ಟಿಕೋನವನ್ನು ವರದಿ ಮಾಡುತ್ತಾರೆ: ಸಾಂಸ್ಥಿಕ ಮಟ್ಟದ ಲಾಭಗಳ ಹೊರತಾಗಿ, ಎಐ ಕೆಲಸದಲ್ಲಿ ವೈಯಕ್ತಿಕ ಸೇವಾ ಪ್ರತಿನಿಧಿಗಳ ಕೆಲಸದ ಅನುಭವಗಳನ್ನು ಮರುರೂಪಿಸುತ್ತಿದೆ.

ಭಾರತದಲ್ಲಿ, ಎಐ ಏಜೆಂಟ್ ಬಳಕೆದಾರರ ಶೇ.69  ಜನರು ಮತ್ತು ಏಜೆಂಟ್‌ಗಳನ್ನು ಬಳಸದವರಲ್ಲಿ ಕೇವಲ ಶೇ.12 ಜನರು ತಮ್ಮ ವೃತ್ತಿ ಭವಿಷ್ಯದ ಬಗ್ಗೆ ಅತ್ಯಂತ ಸಕಾರಾತ್ಮಕ ನಿಲುವು ಹೊಂದಿದ್ದಾರೆ. ಇದು ಭವಿಷ್ಯಕೇಂದ್ರೀತ ಮೊದಲ ಬಳಕೆದಾರರ ಆಯ್ಕೆಪರ ಪಕ್ಷಪಾತವನ್ನು ಪ್ರತಿಬಿಂಬಿಸಬಹುದಾದರೂ, ಇದು ಕೌಶಲ್ಯಾಭಿವೃದ್ಧಿ, ಪರಿಣತಿ ಮತ್ತು ನಾಯಕತ್ವದ ಅವಕಾಶಗಳೊಂದಿಗೆ ಹೊಂದಿಕೆಯಾಗುತ್ತದೆ.

ಸಂಸ್ಥೆಗಳು ಎಐ ಅನ್ನು ಅಳವಡಿಸುತ್ತಿರುವಾಗ, ಭದ್ರತೆ ಮತ್ತು ನಿಖರತೆಯು ಮನಸ್ಸಿನಲ್ಲಿ ಅಗ್ರಸ್ಥಾನದಲ್ಲಿದೆ.

ಭಾರತೀಯ ಸೇವಾ ನಾಯಕರಲ್ಲಿ ಶೇ.90 ಜನರು, ಎಐ ಅಳವಡಿಸುವ ಸಂರ‍್ಭದಲ್ಲಿ ಎದುರಿಸಿದ ಸವಾಲುಗಳು ನಿರೀಕ್ಷಿತ ಅಥವಾ ನಿರೀಕ್ಷೆಗಿಂತ ಸುಲಭವಾಗಿವೆ ಎಂದು ಹೇಳುತ್ತಾರೆ.

ಭದ್ರತೆಯು ಪ್ರಮುಖ ಕಾಳಜಿಯಾಗಿ ಉಳಿದಿದೆ, ಭಾರತೀಯ ಸೇವಾ ನಾಯಕರಲ್ಲಿ ಜನರು ಅದು ತಮ್ಮ ಎಐ ಯೋಜನೆಗಳನ್ನು ವಿಳಂಬಗೊಳಿಸಿದ್ದಾರೆ ಅಥವಾ ಸೀಮಿತಗೊಳಿಸಿದ್ದಾರೆ ಎಂದು ವರದಿ ಮಾಡಿದ್ದಾರೆ.

ದೃಷ್ಟಿಕೋನ ಬದಲಾಗುತ್ತಿದೆ. ಸೇಲ್ಸ್‌ ಫರ‍್ಸ್‌ ನ ಸ್ಟೇಟ್‌ ಆಫ್‌ ಐಟಿ ಸೆಕ್ಯುರಿಟಿ ವರದಿಯ ಪ್ರಕಾರ, ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲಾ ಭದ್ರತಾ ನಾಯಕರು ಎಐI ಏಜೆಂಟ್‌ಗಳು ತಮ್ಮ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವ ಸಾರ‍್ಥ್ಯದ ಬಗ್ಗೆ ಆಶಾವಾದ ನಿಲುವು ಹೊಂದಿದ್ದಾರೆ.

ಬೆದರಿಕೆ ಪತ್ತೆ, ಅಸಂಗತತೆಯ ಮೇಲ್ವಿಚಾರಣೆ ಮತ್ತು ಉಲ್ಲಂಘನೆ ತಡೆಗಟ್ಟುವಿಕೆಯನ್ನು ಹೆಚ್ಚಿಸುವ ಎಐ ಸಾರ‍್ಥ್ಯವನ್ನು ನಾಯಕರು ಎತ್ತಿ ತೋರಿಸಿದರು.

ಜವಾಬ್ದಾರಿಯುತವಾಗಿ ಅಳವಡಿಸಿದಾಗ, ಏಜೆಂಟಿಕ್ ಎಐ ಅನ್ನು ಈಗ ಅಪಾಯವೆಂದು ಅಲ್ಲ, ಬದಲಾಗಿ ಹೆಚ್ಚಿನ ಧೈರ್ಯ ಮತ್ತು ನಂಬಿಕೆಗೆ ಪ್ರೇರಕಶಕ್ತಿಯೆಂದು ಹೆಚ್ಚಾಗಿ ಪರಿಗಣಿಸಲಾಗುತ್ತಿದೆ.

ಎಐ ಹೆಚ್ಚು ಸಂವಾದಾತ್ಮಕವಾಗುತ್ತಿದೆ. ಈಗ ಭಾರತದಲ್ಲಿನ ಶೇ.44 ಸೇವಾ ತಂಡಗಳು ಒಂದೇ ಸಮಯದಲ್ಲಿ ಹಲವು ವಿಧದ ವಿಷಯಗಳನ್ನು ರ‍್ಥಮಾಡಿಕೊಳ್ಳುವ ಮತ್ತು ರಚಿಸುವ ಸಾರ‍್ಥ್ಯ ಹೊಂದಿರುವ ಮಲ್ಟಿಮೋಡಲ್ ಎಐ ಅನ್ನು ಬಳಸುತ್ತಿವೆ. ಜೊತೆಗೆ, ಧ್ವನಿ ಆಧಾರಿತ ಎಐ ಬಳಕೆದಾರರಲ್ಲಿ ಶೇ..90  ಜನರು ಗ್ರಾಹಕರಿಗೆ ಮಾನವ ಪ್ರತಿನಿಧಿಗಳತ್ತ ಬದಲಾಗುವ ಪ್ರಕ್ರಿಯೆ ಸುಗಮವಾಗಿದ್ದು, ಇದು ಪ್ರವೇಶಾತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *