Menu

5 ದಿನದಿಂದ ಮರದಲ್ಲೇ ವ್ರತ ಆಚರಿಸುತ್ತಿರುವ ಸಚ್ಚಿದಾನಂದ ಶ್ರೀಗಳು

tree swamiji

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಪುರ ಗ್ರಾಮದಿಂದ ಬಂದಿರುವ ಅವಧೂತ ಸ್ವಾಮೀಜಿ ಸಚ್ಚಿದಾನಂದ ಶ್ರೀಗಳು ತಾಲೂಕಿನ ಗಡಿ ಗ್ರಾಮ ಮುಸ್ಟೂರು ಬಳಿ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಮರದ ಮೇಲೆಯೇ ಕುಳಿತು ಅನುಷ್ಠಾನ ಮಾಡುತ್ತಾ ಗಮನ ಸೆಳೆದಿದ್ದಾರೆ.

ಕಳೆದ ಐದು ದಿನಗಳಿಂದ ಮಾವಿನ ಮರದ ತೋಪಿನಲ್ಲೇ ಇರುವ ಸ್ವಾಮೀಜಿ, ಲೋಕ ಕಲ್ಯಾಣಕ್ಕಾಗಿ ವ್ರತ ಮಾಡುತ್ತಿದ್ದಾರೆ. ಅವರ ಕಠಿಣ ಅನುಷ್ಠಾನ ಕಂಡು ಜನರು ಅಚ್ಚರಿಗೊಂಡಿದ್ದಾರೆ.

ಅನ್ನ, ಆಹಾರ ತ್ಯಜಿಸಿ ವ್ರತ ಮಾಡುತ್ತಿರುವ ಶ್ರೀಗಳು, ದಿನಕ್ಕೆ ಒಂದು ಬಾರಿ ಒಂದು ಲೋಟ ಹಾಲು ಸೇವನೆ ಮಾಡುತ್ತಾರೆ. ಒಟ್ಟು 101 ದಿನಗಳ ಕಾಲ ಅವರು ಮರದಲ್ಲಿಯೇ ಕುಳಿತು ಧ್ಯಾನ ಮಾಡಲಿದ್ದಾರೆ.

ಮಾವಿನ ತೋಟದಲ್ಲಿರುವ ಮಾವಿನ ಮರವೊಂದರಲ್ಲಿ ಜೋಪಡಿ ನಿರ್ಮಾಣ ಮಾಡಿಕೊಂಡು ಅದರಲ್ಲೇ ಮೌನವಾಗಿ ಧ್ಯಾನ ಮಾಡುತ್ತಿದ್ದಾರೆ. ಸಚ್ಚಿದಾನಂದ ಶ್ರೀ 2012 ರಲ್ಲಿಯೇ ಆಲದಮರದಲ್ಲಿ ಕುಳಿತು ಅನುಷ್ಠಾನ ಮಾಡಿ ರಾಜ್ಯದಾದ್ಯಂತ ಸುದ್ದಿಯಾಗಿದ್ದರು.

Related Posts

Leave a Reply

Your email address will not be published. Required fields are marked *