Wednesday, November 12, 2025
Menu

ಶಿವಮೊಗ್ಗ ಜೈಲಿನಲ್ಲಿ ಅನಾರೋಗ್ಯದಿಂದ ಕೈದಿ ಸಾವು

ಜೀವಾವಧಿ ಶಿಕ್ಷೆಗೆ ಗುರಿಯಾಗಿ ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿದ್ದ ಕೈದಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಮೂಲದ ಬಾಬು ಕೆಪಿ ಮೃತಪಟ್ಟ ಕೈದಿ. ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಸಜಿ ಬಾಬು ಶಿಕ್ಷೆಗೆ ಗುರಿಯಾಗಿ 2025 ಆಗಸ್ಟ್ 22 ಕ್ಕೆ ಶಿವಮೊಗ್ಗ ಸೆಂಟ್ರಲ್ ಜೈಲಿಗೆ ಶಿಫ್ಟ್ ಆಗಿದ್ದ.

ಹೃದಯ ಸಂಬಂಧಿ ಹಾಗೂ ಶುಗರ್ ಸಮಸ್ಯೆಯಿಂದ ಬಳಲುತ್ತಿದ್ದ ಆತ ಚಿಕ್ಕಮಗಳೂರು ಜೈಲಿನಲ್ಲಿದ್ದಾಗ ಆಂಜಿಯೊಪ್ಲಾಸ್ಟ್‌ ಮಾಡಿಸಿಕೊಂಡಿದ್ದ. ನ. 10 ರಂದು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಬಾಬು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

 

ಆಸ್ತಿಗಾಗಿ ಸಾಕು ತಾಯಿಯ ಕೊಲೆಗೈದ ಮಗಳು

ಚಿಕ್ಕಮಗಳೂರು ಎನ್‌ಆರ್. ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಂಡಿಮಠ ಗ್ರಾಮದಲ್ಲಿ ಆಸ್ತಿಗಾಗಿ ಮಗಳೇ ಸಾಕು ತಾಯಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. 62 ವರ್ಷದ ಕುಸುಮ ಕೊಲೆಯಾದವರು, 35 ವರ್ಷದ ಸುಧಾ ಸಾಕು ತಾಯಿಯನ್ನು ಕೊಎಗೈದವಳು. ರಾತ್ರಿ ಮಲಗಿದ್ದವರು ಸಾವನ್ನಪ್ಪಿದ್ದಾರೆ ಎಂದು ಸುಧಾ ಪೊಲೀಸರಿಗೆ ಕಥೆ ಕಟ್ಟಿದ್ದಳು. ಪೊಲೀಸರ ತನಿಖೆಯ ಬಳಿಕ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಹಾವೇರಿ ಜಿಲ್ಲೆಯವರಾದ ಕುಸುಮ ಬಹಳ ವರ್ಷಗಳ ಹಿಂದೆ ಬಾಳೆಹೊನ್ನೂರಿನ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಇಲ್ಲೇ ವಾಸವಿದ್ದರು. ಮಕ್ಕಳಿಲ್ಲದ ಕಾರಣ ತಂಗಿಯ ಮಗುವನ್ನು ತಾನೇ ಸಾಕಿದ್ದರು.

ಹಾವೇರಿಯಲ್ಲಿರುವ ಒಂದೂವರೆ ಎಕರೆ ಜಮೀನು ಹಾಗೂ ಒಂದು ಮನೆಗಾಗಿ ಸುಧಾ ರಾತ್ರಿ ಮಲಗಿದಾಗ ತಾಯಿಯನ್ನು ತಲೆ ದಿಂಬಿನಿಂದ ಮುಖಕ್ಕೆ ಒತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಆರೋಪಿಯನ್ನು ಬಾಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *