ಬೆಂಗಳೂರು: ಜರ್ಮನಿ, ಜಪಾನ್ ದೇಶದಲ್ಲಿ ಇವಿಎಂ ಮಿಷನ್‌ಗಳನ್ನು ತಯಾರು ಮಾಡುತ್ತಾರೆ. ಆದರೆ ಅಲ್ಲೇ ಇದನ್ನ ಬಳಕೆ ಮಾಡಲ್ಲ. ಹಾಗೆಯೇ ಅಮೆರಿಕ ಲಂಡನ್ನಲ್ಲೂ ಇವಿಎಂ (EVM) ಬಳಕೆ ಮಾಡಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2011ರಿಂದಲೂ ನಡೆಯುತ್ತಿರುವ ಅಕ್ರಮ ನಡೆದಿದೆ ಎಂದು ರಾಜ್ಯದಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.
ಇವಿಎಂ ಮಿಷನ್ ತಯಾರು ಮಾಡುವ ದೇಶಗಳೇ ಅದನ್ನು ತಮ್ಮ ದೇಶದಲ್ಲಿ ಬಳಸುತ್ತಿಲ್ಲ. ಹಾಗೆಯೇ ಅಮೆರಿಕ ಲಂಡನ್ನಲ್ಲೂ ಇವಿಎಂ (EVM) ಬಳಕೆ ಮಾಡಲ್ಲ. ನಮ್ಮ ದೇಶದಲ್ಲಿ ಇವಿಎಂ ಬಳಕೆಯನ್ನ ನಮ್ಮ ಪಕ್ಷವೇ ಜಾರಿಗೆ ತಂದಿದ್ದು, ಆದರೆ ಅದನ್ನ ಬಿಜೆಪಿಯವರು ಅಕ್ರಮಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದರು.
2011ರಿಂದಲೂ ಇವಿಎಂಗಳನ್ನು ದುರ್ಬಳಕೆ ಮಾಡಿಕೊಂಡೇ ಬರುತ್ತಿದ್ದಾರೆ. ಬರೀ ಇವಿಎಂ ಮಾತ್ರವಲ್ಲ ಚುನಾವಣೆ ಅಂದರೆ ಬಿಜೆಪಿಯವರಿಗೆ ಅಕ್ರಮ. ಪ್ರತಿ ಹಂತದಲ್ಲೂ ಅಕ್ರಮ ಮಾಡಿಕೊಂಡು ಬರುತ್ತಿದ್ದಾರೆ ಎಂದರು.