Tuesday, November 11, 2025
Menu

15-ನಿಮಿಷದ ರ‍್ಯಾಪಿಡ್-ಚಾರ್ಜಿಂಗ್ ರೆಟ್ರೋಫಿಟ್ ಇವಿ ತಂತ್ರಜ್ಞಾನ ‘ಎಕ್ಸ್‌ಪೋನೆಂಟ್ ಓಟೋ’ ಬಿಡುಗಡೆ

rapid CHARGING

ಬೆಂಗಳೂರು, ನವೆಂಬರ್ 9, 2025: ಬೆಂಗಳೂರು ಮೂಲದ ಎನರ್ಜಿ-ಟೆಕ್ ಕಂಪನಿ ಎಕ್ಸ್‌ಪೋನೆಂಟ್ ಎನರ್ಜಿ ಸಂಸ್ಥೆಯು ಐಸಿಇ ತ್ರಿ-ಚಕ್ರ ವಾಹನಗಳನ್ನು 15-ನಿಮಿಷದ ರ‍್ಯಾಪಿಡ್-ಚಾರ್ಜಿಂಗ್ ಬ್ಯಾಟರಿಗಳೊಂದಿಗೆ ಇವಿಗಳಾಗಿ ರೆಟ್ರೋಫಿಟ್ ಮಾಡುವ ತನ್ನ ‘ಎಕ್ಸ್‌ಪೋನೆಂಟ್ ಓಟೋ’ ತಂತ್ರಜ್ಞಾನವನ್ನು ಬಿಡುಗಡೆ ಮಾಡಿದೆ.

ರೆಟ್ರೋಫಿಟ್ ಮಾಡಿದ ಸಿಎನ್‌ಜಿ ಮತ್ತು ಎಲ್‌ಪಿಜಿ ಆಟೋರಿಕ್ಷಾಗಳು ಎಕ್ಸ್‌ಪೋನೆಂಟ್‌ನ ಪ್ರೊಪ್ರೈಟರಿ ಎನರ್ಜಿ ವ್ಯವಸ್ಥೆಯೊಂದಿಗೆ ಹೊಂದಿಕೆಯಾಗಲಿದ್ದು, ಯಾವುದೇ ಎಕ್ಸ್‌ಪೋನೆಂಟ್ ಇ^ಪಂಪ್ (ಚಾರ್ಜಿಂಗ್ ಸ್ಟೇಷನ್) ನಲ್ಲಿ 0-100% ಚಾರ್ಜ್ ಅನ್ನು ಕೇವಲ 15 ನಿಮಿಷಗಳಲ್ಲಿ ಮಾಡಬಹುದು.

ಹೊಸ ರೆಟ್ರೋಫಿಟ್ ಇವಿ ತಂತ್ರಜ್ಞಾನವು ಪ್ರಸ್ತುತ ಸಿಎನ್‌ಜಿ ಮತ್ತು ಎಲ್‌ಪಿಜಿಯಲ್ಲಿ ಚಲಿಸುತ್ತಿರುವ ತ್ರಿಚಕ್ರ ಪ್ರಯಾಣಿಕ ವಾಹನಗಳಿಗೆ ಲಭ್ಯವಿರಲಿದೆ. ರೆಟ್ರೋಫಿಟ್ ಪ್ರಕ್ರಿಯೆ ಕೇವಲ 24 ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದು, ಅಸ್ತಿತ್ವದಲ್ಲಿರುವ ಆಟೋಗಳಿಗೆ ಹೊಸ ಜೀವನ ನೀಡುತ್ತದೆ. ಎಕ್ಸ್‌ಪೋನೆಂಟ್ ಓಟೋ 5 ವರ್ಷಗಳು ಅಥವಾ 3,000 ಚಾರ್ಜಿಂಗ್ ಸೈಕಲ್‌ಗಳ ವಾರಂಟಿ ಒದಗಿಸುತ್ತಿದ್ದು, ಚಾಲಕರು ಆತ್ಮವಿಶ್ವಾಸದಿಂದ ಬದಲಾವಣೆ ಹೊಂದಲು ಧೈರ್ಯ ನೀಡುತ್ತದೆ.

ರೆಟ್ರೋಫಿಟ್ ಮಾಡುವ ಈ ಪ್ರಕ್ರಿಯೆಯು ಭಾರತದಾದ್ಯಂತ ಇರುವ ಮಿಲಿಯನ್‌ ಗಟ್ಟಲೆ ಚಾಲಕರಿಗೆ ಇವಿ ಅಳವಡಿಕೆಯನ್ನು ಹೆಚ್ಚು ಸುಲಭಗೊಳಿಸುತ್ತದೆ ಮತ್ತು ಶುದ್ಧ ಸಾರಿಗೆ ಅಳವಡಿಕೆಯನ್ನು ವೇಗಗೊಳಿಸುತ್ತದೆ. ಶೂನ್ಯ ಡೌನ್‌ಪೇಮೆಂಟ್, ಹೊಂದಿಕೊಳ್ಳುವ ಇಎಂಐ ಯೋಜನೆಗಳು ಮತ್ತು ಮೂರು ವರ್ಷಗಳ ನಂತರ ಖಾತರಿಪಡಿಸಿದ ಬೈಬ್ಯಾಕ್‌ ಯೋಜನೆ ಮೂಲಕ ಎಕ್ಸ್‌ಪೋನೆಂಟ್ ಸಂಸ್ಥೆಯು ಎಲೆಕ್ಟ್ರಿಕ್‌ಗೆ ಬದಲಾವಣೆ ಹೊಂದಲು ಸರಳ, ಕೈಗೆಟುಕುವ ದರದ ಮತ್ತು ಸುರಕ್ಷಿತವಾದ ದಾರಿ ಒದಗಿಸುವ ಗುರಿ ಹೊಂದಿದೆ. ಚಾಲಕರು ಪ್ರತಿ ತಿಂಗಳು ₹5,000 ವರೆಗೆ ತಕ್ಷಣ ಉಳಿತಾಯ ಮಾಡುತ್ತಾರೆ, ಜೊತೆಗೆ ಚಾರ್ಜಿಂಗ್ ವೆಚ್ಚ ಮತ್ತು ಇಎಂಐ ಸಂಯೋಜಿತವಾಗಿ ಸಿಎನ್‌ಜಿ ಅಥವಾ ಎಲ್‌ಪಿಜಿ ವಾಹನಗಳ ಪ್ರಸ್ತುತ ಮಾಸಿಕ ಇಂಧನ ಮತ್ತು ನಿರ್ವಹಣೆ ವೆಚ್ಚಕ್ಕಿಂತ ಕಡಿಮೆ ಆಗುತ್ತದೆ.

ವಾಹನಗಳನ್ನು ಇವಿಗಳಾಗಿ ಪರಿವರ್ತಿಸುವುದು 2030ರ ಭಾರತದ ಇವಿ ಅಳವಡಿಕೆ ಗುರಿ ಸಾಧನೆಗೆ ಪ್ರಮುಖ ಕೊಡುಗೆ ನೀಡುತ್ತದೆ. ಇವಿ ಅಳವಡಿಕೆಯು ಚಾಲಕರ ಜೀವನೋಪಾಯ ಮತ್ತು ಆರ್ಥಿಕ ಫಲಿತಾಂಶಗಳನ್ನು ಉತ್ತಮಗೊಳಿಸುವುದರ ಜೊತೆಗೆ. ಇದರಿಂದ ಇಂಗಾಲ ಹೊರಸೂಸುವಿಕೆ ಕಡಿಮೆ ಆಗುತ್ತದೆ, ಭಾರತೀಯ ನಗರಗಳು ಮತ್ತು ರಾಜ್ಯಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಣೆ ಹೊಂದುತ್ತದೆ ಮತ್ತು ದೇಶದ ಇಂಧನ ಭದ್ರತೆಯನ್ನು ಬಲಪಡಿಸುತ್ತದೆ.

ರೇಟ್ರೋಫಿಟ್ ಮಾಡಿದ ನಂತರ, ಈ ವಾಹನಗಳು ಅತ್ಯುತ್ತಮ ದಕ್ಷತೆ ಒದಗಿಸುತ್ತವೆ. 4.5 ಸೆಕೆಂಡ್‌ ಗಳಿಗಿಂತ ಕಡಿಮೆ ಸಮಯದಲ್ಲಿ 0-30 ಕಿ.ಮೀ/ಗಂಟೆಗೆ ವೇಗವರ್ಧನೆ ಹೊಂದಲಿದೆ ಮತ್ತು 140-150 ಕಿ.ಮೀ ಟ್ರೂ ರೇಂಜ್ ನೀಡುತ್ತವೆ. ಅವು ಕ್ಲಚ್ ಅಥವಾ ಗೇರ್ ಶಿಫ್ಟ್‌ ಗಳಿಲ್ಲದೆ ಕಾರ್ಯನಿರ್ವಹಿಸುತ್ತವೆ ಮತ್ತು ಸ್ಥಿರ ಹಾಗೂ ದಕ್ಷ ಡ್ರೈವ್ ಒದಗಿಸುತ್ತವೆ. ಭಾರತೀಯ ನಗರ ಪರಿಸ್ಥಿತಿಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸಿಸ್ಟಮ್ ಐಪಿ67- ರೇಟೆಡ್ ನೀರು ನಿರೋಧಕತೆ, ಹಿಲ್-ಸ್ಟಾರ್ಟ್ ಅಸಿಸ್ಟ್ ಮತ್ತು ಜಿಪಿಎಸ್, ಡಯಾಗ್ನೋಸ್ಟಿಕ್ಸ್ ಮತ್ತು ತಕ್ಷಣದ ಸರ್ವಿಸ್ ಅಲರ್ಟ್‌ ಗಳಿಗಾಗಿ ಐಓಟಿ ಆಧರಿತ ಕನೆಕ್ಟಿವಿಟಿ ಒಳಗೊಂಡಿದೆ.

ರೆಟ್ರೋಫಿಟ್ ಪ್ರಕ್ರಿಯೆಯು ಎಂಜಿನ್ ಬ್ಲಾಕ್, ಗೇರ್‌ಬಾಕ್ಸ್, ಎಕ್ಸ್‌ಹಾಸ್ಟ್ ಸಿಸ್ಟಮ್, ಇಂಧನ ಟ್ಯಾಂಕ್‌ಗಳು (ಸಿಎನ್‌ಜಿ/ಎಲ್‌ಪಿಜಿ) ಮತ್ತು ವೈರಿಂಗ್ ಹಾರ್ನೆಸ್‌ಗಳು ಸೇರಿದಂತೆ ವಾಹನದ ಎಲ್ಲಾ ಐಸಿ-ಎಂಜಿನ್ ಸಂಬಂಧಿತ ಘಟಕಗಳನ್ನು ತೆಗೆದುಹಾಕುವುದರಿಂದ ಪ್ರಾರಂಭವಾಗುತ್ತದೆ. ಈ ತೆಗೆದುಹಾಕುವಿಕೆಯಿಂದ ಹೊಸ ಇವಿ ಸಿಸ್ಟಮ್‌ಗಳಿಗೆ ಸ್ಥಳ ಮತ್ತು ತೂಕವನ್ನು ಕಡಿಮೆ ಮಾಡುತ್ತವೆ. ಚಾಸಿಸ್‌ನ ತಪಾಸಣೆ ಮತ್ತು ತಯಾರಿಯ ನಂತರ, ಎಕ್ಸ್‌ಪೋನೆಂಟ್ ರೆಟ್ರೋಫಿಟ್ ಕಿಟ್ ಅನ್ನು ಸ್ಥಾಪಿಸಲು ಹೊಸ ಸ್ಟ್ರಕ್ಚರಲ್ ಮೌಂಟ್‌ಗಳನ್ನು ತಯಾರಿಸಲಾಗುತ್ತದೆ. ರೆಟ್ರೋಫಿಟ್ ಕಿಟ್ ಪಿಕ್ಕೋಲೋ ಬ್ಯಾಟರಿ ಪ್ಯಾಕ್, ಸಿಎಖ್ಸ್1 ಇ^ಪೋರ್ಟ್ ರ‍್ಯಾಪಿಡ್-ಚಾರ್ಜಿಂಗ್ ಇಂಟರ್‌ಫೇಸ್, ಮೋಟಾರ್, ಮೋಟಾರ್ ಕಂಟ್ರೋಲರ್ ಮತ್ತು ಡ್ರೈವ್‌ಟ್ರೇನ್ ಒಳಗೊಂಡಿದೆ. ಸಿಸ್ಟಮ್‌ಗಳನ್ನು ಪ್ಲಗ್-ಅಂಡ್-ಪ್ಲೇ ಹಾರ್ನೆಸ್‌ಗಳು ಮತ್ತು ಲೈಟ್‌ವೇಟ್ ಸ್ಟ್ರಕ್ಚರಲ್ ಬ್ರಾಕೆಟ್‌ಗಳನ್ನು ಬಳಸಿ ಸಂಯೋಜಿಸಲಾಗುತ್ತದೆ ಮತ್ತು ಕೇವಲ 24 ಗಂಟೆಗಳಲ್ಲಿ ಸಂಪೂರ್ಣ ಪರಿವರ್ತನೆ ಸಾಧ್ಯವಾಗುತ್ತದೆ.

ಈ ಕುರಿತು ಮತನಾಡಿದ ಎಕ್ಸ್‌ಪೋನೆಂಟ್ ಎನರ್ಜಿಯ ಸಿಇಒ ಮತ್ತು ಸಹ-ಸಂಸ್ಥಾಪಕರಾದ ಅರುಣ್ ವಿನಾಯಕ್ ಅವರು, “ಎನರ್ಜಿ ಕಂಪನಿಯಾಗಿ ನಾವು ಭಾರತದಾದ್ಯಂತ ಇವಿಗಳ ಅಳವಡಿಕೆಯನ್ನು ಬೃಹತ್‌ಪ್ರಮಾಣದಲ್ಲಿ ವೇಗಗೊಳಿಸುವ ಮಾರ್ಗಗಳನ್ನು ಯಾವಾಗಲೂ ಹುಡುಕುತ್ತಿರುತ್ತೇವೆ. ನಾವು ಈಗಾಗಲೇ ನಮ್ಮ 15-ನಿಮಿಷ ಚಾರ್ಜಿಂಗ್ ಟೆಕ್ ಬಳಸುವ ಪಾಲುದಾರರಿಂದ ಹಲವು ಉತ್ತಮ ಉತ್ಪನ್ನಗಳೊಂದಿಗೆ ಹೊಸ ವಾಹನ ಖರೀದಿದಾರರಿಗೆ ಸೇವೆ ಸಲ್ಲಿಸುತ್ತಿದ್ದೇವೆ. ರಸ್ತೆಯಲ್ಲಿರುವ ವಾಹನಗಳು ಹೊಸ ವಾಹನ ಮಾರಾಟದ ಸಂಖ್ಯೆಗಿಂತ ಬಹುತೇಕ 25-30x ಹೆಚ್ಚಾಗಿದೆ. ಎಲ್ಲರೂ ಸಾಧ್ಯವಾದಷ್ಟು ತ್ವರಿತವಾಗಿ ಎಕ್ಸ್‌ಪೋನೆಂಟ್ ಇವಿ ಅನುಭವ ಪಡೆಯಬೇಕು ಎಂದು ನಾವು ಬಯಸುತ್ತೇವೆ ಮತ್ತು ಅದಕ್ಕಾಗಿ ರೆಟ್ರೋಫಿಟ್ ಉತ್ತಮ ಆಯ್ಕೆಯಾಗಿದೆ. ಮತ್ತು ತ್ರಿ-ಚಕ್ರ ವಿಭಾಗದಲ್ಲಿ ಈ ಹಿಂದಿನ ಪ್ರತಿ ಇಂಧನ ಬದಲಾವಣೆಯೂ ರೆಟ್ರೋಫಿಟ್ ಮೂಲಕವೇ ನಡೆದಿದೆ. ಉತ್ತಮ ತಂತ್ರಜ್ಞಾನವನ್ನು ಪ್ರತೀ ಚಾಲಕನಿಗೂ ಸುಲಭವಾಗಿ ಲಭ್ಯವಾಗಿಸುವುದು ಮತ್ತು ಕೈಗೆಟುಕುವ ದರದಲ್ಲಿ ಒದಗಿಸುವಂತೆ ಮಾಡುವುದೇ ನಮ್ಮ ಆಲೋಚನೆಯಾಗಿದೆ. ದೇಶಾದ್ಯಂತ ಪಾಲುದಾರರು ಮತ್ತು ನೀತಿ ನಿರೂಪಕರ ಜೊತೆ ಕೆಲಸ ಮಾಡಿ ಅದನ್ನು ಸಾಧಿಸುತ್ತೇವೆ” ಎಂದು ಹೇಳಿದರು.

ಎಕ್ಸ್‌ಪೋನೆಂಟ್ ಎನರ್ಜಿಯ ಹೆಡ್ ಆಫ್ ಬಿಜಿನೆಸ್ ನ ಆಯುಷ್ ಭಾರ್ಗವ ಅವರು, “ಎಕ್ಸ್‌ಪೋನೆಂಟ್ ಓಟೋ ತಂತ್ರಜ್ಞಾನವು ಚಾಲಕರಿಗೆ ಬಹಳ ದಕ್ಷ ಪರಿಹಾರವಾಗಿದೆ ಮತ್ತು ಅವರು ತಮ್ಮ ಇಂಧನ ವ್ಯವಸ್ಥೆಯನ್ನು ಎಲ್‌ಪಿಜಿ ಅಥವಾ ಸಿಎನ್‌ಜಿಯಿಂದ ಅರ್ಧ ಬೆಲೆಯಲ್ಲಿ ಇವಿಗೆ ಬದಲಾಯಿಸಬಹುದು. ಅಂದರೆ ಹೆಚ್ಚು ಚಾಲಕರು ತ್ವರಿತವಾಗಿ ಇವಿಗಳಿಗೆ ಬದಲಾಯಿಸಬಹುದಾಗಿದೆ. ಈ ಇವಿ ಅಳವಡಿಕೆಯನ್ನು ವೇಗಗೊಳಿಸುವುದು 2030ರ ಇವಿ ಅಳವಡಿಕೆ ಸಾಧನೆಯ ಗುರಿಗಳನ್ನು ಸಾಧಿಸಲು ಅತ್ಯಂತ ಮುಖ್ಯವಾಗಿದೆ. ಈ ಕುರಿತು ನಾವು ಕಾರ್ಯನಿರ್ವಹಣೆ ವೇಗಗೊಳಿಸುತ್ತಿದ್ದೇವೆ, ಅದಕ್ಕಾಗಿ ನಾವು ಹಲವು ಸರ್ಕಾರಗಳೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ಚಾಲಕರಿಗೆ ರೆಟ್ರೋಫಿಟ್‌ಗಳನ್ನು ಸುಲಭಗೊಳಿಸುವ ಮಾರ್ಗಗಳನ್ನು ಹುಡುಕುತ್ತಿದ್ದೇವೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *