ಕರ್ನಾಟಕದ ಗಡಿ ಜಿಲ್ಲೆಯಾದ ಬೆಳಗಾವಿ ಜಿಲ್ಲೆ ಹಾಗೂ ಕಲಬುರಗಿ ಜಿಲ್ಲೆಗಳಿಂದ ವಂದೇ ಭಾರತ್ ರೈಲು ಮಂಜೂರು ಮಾಡುವ ಮೂಲಕ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.
ಕರ್ನಾಟಕದಿಂದ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರೈಲುಗಳನ್ನು ವಂದೇ ಭಾರತ್ ರೈಲುಗಳು ಮಂಜೂರಾಗಿವೆ. ಬೆಳಗಾವಿಯಿಂದ ಪುಣೆ ಹಾಗೂ ಕಲಬುಗರಿಯಿಂದ ಹೈದರಾಬಾದ್ ನಡುವೆ ಎರಡು ವಂದೇ ಭಾರತ್ ರೈಲು ಸಂಚರಿಸಲಿವೆ.
ಬೆಳಗಾವಿ-ಪುಣೆ-ಶೇಗಾಂವ್-ವಡೋದರಾ-ಸಿಕಂದರಾಬಾದ್ ನಡುವೆ ರೈಲು ಸಂಚರಿಸಲಿದ್ದರೆ, ಕಲಬುರಗಿಯಿಂದ ದೌಂಡ್, ಸೋಲಾಪುರ ನಡುವೆ ರೈಲುಗಳು ಸಂಚರಿಸಲಿವೆ. ಈ ರೈಲು ಸಂಚಾರದಿಂದ ಎರಡು ನಗರಗಳ ನಡುವೆ ಸಂಚಾರ 2-3 ಗಂಟೆ ಅವಧಿ ಕಡಿಮೆ ಆಗಲಿದೆ.
ಬೆಳಗಾವಿ ಮತ್ತು ಕಲಬುರಗಿಗೆ 2 ವಂದೇ ಭಾರತ್ ರೈಲುಗಳ ಸಂಚಾರ ಯಾವಾಗ ಆರಂಭವಾಗುತ್ತದೆ ಎಂದು ಶೀಘ್ರದಲ್ಲೇ ರೈಲು ಇಲಾಖೆ ಅಧಿಕೃತ ಘೋಷಣೆ ಮಾಡಲಿದ್ದು, ಟಿಕೆಟ್ ದರ 1500 ರೂ.ನಿಂದ 2000 ರೂ. ನಿಗದಿಯಾಗುವ ನಿರೀಕ್ಷೆ ಇದೆ.